ಲಂಡನ್: ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಭಾರತ ಬದಲಾವಣೆ ಕಂಡಿದೆ. ಅಷ್ಟೇ ಅಲ್ಲ ಭಾರತವನ್ನು ದುರ್ಬಲ ಆರ್ಥಿಕ ದೇಶ ಎಂದು ಪರಿಗಣಿಸುತ್ತಿದ್ದ ಚೀನಾದಂತಹ ದೇಶಗಳು ಕೂಡಾ ತಮ್ಮ ನಿಲುವನ್ನು ಬದಲಾಯಿಸಿಕೊಂಡಿವೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಪ್ರತಿಪಾದಿಸಿದ್ದಾರೆ.
ಇದನ್ನೂ ಓದಿ:Lesbian Couple: ಪರಸ್ಪರ ಪ್ರೀತಿಸಿ ದೇವಸ್ಥಾನದಲ್ಲಿ ವಿವಾಹವಾದ ಸಲಿಂಗಿ ಜೋಡಿ
ಅವರು ಬ್ರಿಟನ್ ನಲ್ಲಿ ಭಾರತೀಯ ಸಮೂಹವನ್ನು ಉದ್ದೇಶಿಸಿ ಮಾತನಾಡುತ್ತ, ಭಾರತದ ಬಗೆಗಿನ ಚೀನಾ ನಿಲುವಿನಲ್ಲಿ ಭಾರೀ ಬದಲಾವಣೆಯಾಗಿದೆ. ಗಾಲ್ವಾನ್ ಸಂಘರ್ಷದ ನಂತರ ಭಾರತ ದುರ್ಬಲ ದೇಶವಲ್ಲ ಎಂಬುದನ್ನು ಚೀನಾ ಮನಗಂಡಿದೆ. ಚೀನಾ ಈಗ ಭಾರತವನ್ನು ಪ್ರತಿಸ್ಪರ್ಧಿ ಎಂಬುದಾಗಿ ಪರಿಗಣಿಸಿದೆ. ಆದರೆ ನಾವು ಚೀನಾವನ್ನು ಪ್ರತಿಸ್ಪರ್ಧಿ ಎಂದು ಪರಿಗಣಿಸುವುದಿಲ್ಲ. ಆದರೂ ಜಾಗತಿಕವಾಗಿ ನಾವು ಎಲ್ಲಾ ನೆರೆಯ ದೇಶಗಳ ಜತೆ ಉತ್ತಮ ಬಾಂಧವ್ಯ ಹೊಂದಿರುವುದಾಗಿ ಸಿಂಗ್ ಹೇಳಿದರು.
2020ರಲ್ಲಿ ಭಾರತ ಮತ್ತು ಚೀನಾ ನಡುವೆ ಸಂಘರ್ಷ ಏರ್ಪಟ್ಟಾಗ ಗಾಲ್ವಾನ್ ನಲ್ಲಿ ನಮ್ಮ ಯೋಧರು ಸಮರ್ಥವಾಗಿ ಎದುರಿಸಿತ್ತು. ಈ ಕಾರಣದಿಂದಾಗಿಯೇ ಚೀನಾ ಭಾರತದ ಬಗೆಗಿನ ನಿಲುವನ್ನು ಬದಲಾಯಿಸಿಕೊಂಡಿದೆ ಎಂದು ರಾಜನಾಥ್ ಸಿಂಗ್ ಅಭಿಪ್ರಾಯವ್ಯಕ್ತಪಡಿಸಿದ್ದಾರೆ.
ಇತ್ತೀಚೆಗೆ ಚೀನಾ ಸ್ವಾಯತ್ತೆಯ ಗ್ಲೋಬಲ್ ಟೈಮ್ಸ್ ನಲ್ಲಿ ಪ್ರಕಟವಾದ ಲೇಖನ ಭಾರತದ ಕುರಿತ ಚೀನಾ ನಿಲುವಿನಲ್ಲಿನ ಬದಲಾವಣೆಗೆ ಸಾಕ್ಷಿಯಾಗಿದೆ ಎಂದು ಸಿಂಗ್ ಉದಾಹರಣೆ ನೀಡಿದರು. ಲೇಖನದಲ್ಲಿ ಚೀನಾ ಸರ್ಕಾರ ಕೂಡಾ ನಮ್ಮ ಆರ್ಥಿಕ ಮತ್ತು ವಿದೇಶಾಂಗ ನೀತಿಯನ್ನು ಒಪ್ಪಿಕೊಂಡಿರುವುದನ್ನು ಸೂಚಿಸುತ್ತದೆ ಎಂದರು.