ರಾಮನಗರ: ನಗರ ವ್ಯಾಪ್ತಿಯಲ್ಲಿ ಒಳಚರಂಡಿ ವ್ಯವಸ್ಥೆಯ ಭಾಗವಾಗಿ ರಸ್ತೆ ಮಧ್ಯ ಇರುವಮ್ಯಾನ್‌ಹೋಲ್ ದುರಸ್ತಿ ಕಾರ್ಯ ನಡೆಯುತ್ತಿದ್ದು,ಕಾಮಗಾರಿ ಮುಗಿದು ದಿನ ಕಳೆದರೂ ಕಿತ್ತು ಹಾಕಿರುವ ಅವಶೇಷಗಳನ್ನು ತೆರವುಗೊಳಿಸದಿರುವುದರಿಂದ ವಾಹನ ಸಂಚಾರಕ್ಕೆ, ಪಾದಚಾರಿಗಳಿಗೆ ಸಮಸ್ಯೆಯಾಗಿದೆ.
ಒಳಚರಂಡಿಯ ಮ್ಯಾನ್‌ಹೋಲ್‌ಗಳನ್ನು ರಸ್ತೆಯ ಎತ್ತರಕ್ಕೆ ಏರಿಸುವ ಕಾಮಗಾರಿಯನ್ನು ಒಳಚರಂಡಿ ಮಂಡಳಿ ಆರಂಭಿಸಿದೆ. ನಗರ ವ್ಯಾಪ್ತಿಯಲ್ಲಿ 24×7 ಕುಡಿಯುವ ನೀರಿನ ಸರಬರಾಜಿಗೆ ನೂತನವಾಗಿ ಪೈಪ್‌ಲೈನ್ ಅಳವಡಿಸುವ ಕಾರ್ಯಕೂಡ ಪ್ರಗತಿಯಲ್ಲಿದೆ. ಬಹುತೇಕ ರಸ್ತೆಗಳನ್ನುಅಗೆಯಲಾಗಿದೆ. ಪೈಪ್‌ಲೈನ್ ಕಾಮಗಾರಿಯಿಂದಾಗಿ ಹದಗೆಟ್ಟ ರಸ್ತೆಗಳನ್ನು ಸಹಿಸಿಕೊಂಡಿರುವ ನಾಗರಿಕರು ಇದೀಗ ಮ್ಯಾನ್ ಹೋಲ್ ಕಾಮಗಾರಿಯಿಂದಾಗಿ ಹೈರಾಣಾಗಿದ್ದಾರೆ.
ಅಭಿವೃದ್ಧಿ ಕಾಮಗಾರಿಗೆ ಆಕ್ಷೇಪವಿಲ್ಲ, ಆದರೆ, ವಾರಕ್ಕೊಮ್ಮೆ ನಗರ ವ್ಯಾಪ್ತಿಯಲ್ಲಿ ನೀರು ಸರಬರಾಜು ಆಗುತ್ತಿದೆ. 24×7 ವ್ಯವಸ್ಥೆ ಜಾರಿಯಾದರೆ ನೀರಿನ ಸಮಸ್ಯೆ ನೀಗಲಿದೆ ಎಂಬ ಕಾರಣಕ್ಕೆ ನಾಗರಿಕರು ಹದಗೆಟ್ಟ ರಸ್ತೆಗಳನ್ನು ಸಹಿಸಿಕೊಂಡಿದ್ದಾರೆ. ಇದೀಗ ಒಳಚರಂಡಿ ವ್ಯವಸ್ಥೆಯ ಸುಧಾರಣೆಗೆ ನಡೆಯುತ್ತಿರುವ ಕಾಮಗಾರಿಯ ಬಗ್ಗೆ ಜನತೆಯ ಆಕ್ಷೇಪವಿಲ್ಲ. ಆದರೆ, ಕಾಮಗಾರಿ ಪೂರ್ಣಗೊಂಡು ದಿನಗಳು ಕಳೆದರೂ ಅವಶೇಷಗಳನ್ನುತೆರವುಗೊಳಿಸದಿರುವ ಬಗ್ಗೆ ನಗರದ ನಾಗರಿಕರು ಬೇಸರ ವ್ಯಕ್ತಪಡಿಸಿದ್ದಾರೆ.
ಇರೋದೆ ಒಬ್ಬರು ಎಂಜಿನಿಯರ್: ಮ್ಯಾನ್ ಹೋಲ್‌ಗಳನ್ನು ರಸ್ತೆಯ ಎತ್ತರಕ್ಕೆ ಏರಿಸುವ ಕಾಮಗಾರಿ ತೀರಾ ಅಗತ್ಯವಿತ್ತು. ಹೀಗಾಗಿ ಈ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ನಗರಸಭೆಯ ಸದಸ್ಯರು ತಿಳಿಸಿದ್ದಾರೆ. ಕಾಮಗಾರಿಯನ್ನು ಪರಿಶೀಲಿಸಿ ಎಂಜಿನಿಯರ್ ಮಾತ್ರ ಗುತ್ತಿಗೆದಾರನಿಗೆ ಹಣ ಪಾವತಿಯಾಗಲಿದೆ. ಆದರೆ, ಈ ವ್ಯವಸ್ಥೆಯ ಪರಿಶೀಲನೆಗೆಇರೋದು ಒಬ್ಬರೇ ಎಂಜಿನಿಯರ್. ಹೀಗಾಗಿ ಅವಶೇಷಗಳ ತೆರವು ವಿಳಂಬವಾಗುತ್ತಿರಬಹುದು ಎಂದು ಪ್ರತಿಕ್ರಿಯಿಸಿದ್ದಾರೆ.
ಅನಾಹುತವಾಗುವ ಮುನ್ನ ತೆರವು ಮಾಡಿ : ರಸ್ತೆ ಮಧ್ಯೆ ಇರುವ ಮ್ಯಾನ್‌ಹೋಲ್‌ಗಳ ಕಾಮಗಾರಿಯ ಅವಶೇಷಗಳಿಂದಾ ಗಿವಾಹನ ಸಂಚಾರಕ್ಕೆ ಮತ್ತು . ಕಲ್ಲು, ಮಣ್ಣುರಸ್ತೆಯಲ್ಲಿ ಹರಡಿಕೊಂಡಿರುವುದರಿಂದ ದ್ವಿಚಕ್ರ ವಾಹನಗಳು ಆಯ ತಪ್ಪಿ ರಸ್ತೆ ಗುರುಳಿರುವ ಘಟನೆಗಳು ನಡೆದಿವೆ. ಇನ್ನೂ ಹೆಚ್ಚಿನ ಅನಾಹುತಗಳು ಸಂಭವಿಸುವ ಮುನ್ನಅಧಿಕಾರಿಗಳು ಎಚ್ಚೆತ್ತು ಕೊಂಡು ಜನರಹಿತ ದೃಷ್ಟಿಯಿಂದ ಶೀಘ್ರ ಅವಶೇಷಗಳನ್ನು ತೆರವುಗೊಳಿಸಬೇಕು ಎಂದು ನಗರದ ಜನತೆ ನಗರಸಭೆಯ ಅಧಿಕಾರಿಗಳನ್ನು ಆಗ್ರಹಿಸಿದ್ದಾರೆ.
ಮ್ಯಾನ್‌ಹೋಲ್ ಎತ್ತರಿಸುವ ಕಾಮಗಾರಿ ತೀರಾ ಅಗತ್ಯವಿತ್ತು.ಸದಸ್ಯರ ಆಗ್ರಹದ ಮೇರೆಗೆ ನಗರಸಭೆಈ ಕಾಮಗಾರಿ ಕೈಗೆತ್ತಿಕೊಂಡಿದೆ.ಅವಶೇಷಗಳ ತೆರವು ವಿಳಂಬವಾಗಿರುವ ಬಗ್ಗೆ ಅಧಿಕಾರಿಗಳ ಗಮನ ಸೆಳೆಯಲಾಗಿದೆ. ಶೀಘ್ರ ತೆರವುಗೊಳಿಸುವಂತೆ ಒತ್ತಾಯ ಹೇರಲಾಗಿದೆ.
– ಸೋಮಶೇಖರ್ (ಮಣಿ), ನಗರಸಭಾ ಸದಸ್ಯ.