Advertisement

ದಸರಾ ಬಳಿಕ ಎಲ್ಲ ತರಗತಿಯವರಿಗೂ ಬಿಸಿಯೂಟ

12:22 AM Oct 05, 2021 | Team Udayavani |

ಬೆಂಗಳೂರು: ದಸರಾ ರಜೆ ಬಳಿಕ 1ರಿಂದ 5ನೇ ತರಗತಿ ವಿದ್ಯಾರ್ಥಿಗಳಿಗೂ ಭೌತಿಕ ತರಗತಿ ಆರಂಭದ ಜತೆಗೆ 1ರಿಂದ 10ನೇ ತರಗತಿ ವರೆಗಿನ ಎಲ್ಲ ವಿದ್ಯಾರ್ಥಿಗಳಿಗೆ ಬಿಸಿಯೂಟ ಸಿಗಲಿದೆ.

Advertisement

ಅ. 10ರಿಂದ ಅ. 20ರ ವರೆಗೆ ದಸರಾ ರಜೆ ಇರಲಿದೆ. ಈಗಾಗಲೇ ಸರಕಾರ 6ರಿಂದ 12ನೇ ತರಗತಿ ವಿದ್ಯಾರ್ಥಿಗಳಿಗೆ ಪೂರ್ಣ ಪ್ರಮಾಣದಲ್ಲಿ ತರಗತಿ ಆರಂಭಿಸಿದೆ. ಆದರೆ ಬಿಸಿಯೂಟ ಆರಂಭಿಸಿಲ್ಲ. ದಸರಾ ರಜೆ ಮುಗಿಯುತ್ತಿದ್ದಂತೆ 1ರಿಂದ 5ನೇ ವಿದ್ಯಾರ್ಥಿಗಳಿಗೆ ಭೌತಿಕ ತರಗತಿಯ ಜತೆಗೆ ಎಲ್ಲ ವಿದ್ಯಾರ್ಥಿಗಳಿಗೂ ಬಿಸಿಯೂಟ ನೀಡಲಾಗುತ್ತದೆ.

ಈಗ ಕೋವಿಡ್‌ ಕಡಿಮೆಯಾಗುವ ಜತೆಗೆ 3ನೇ ಅಲೆಯ ಆತಂಕ ಕ್ಷೀಣಿಸಿರುವುದರಿಂದ ಶಾಲೆಗಳಲ್ಲಿ ಭೌತಿಕ ತರಗತಿ ಆರಂಭದ ಜತೆಗೆ ಬಿಸಿಯೂಟ ನೀಡಲು ಸರಕಾರ ನಿರ್ಧರಿಸಿದೆ.

ಶಾಲೆಗಳಿಗೆ ಸೂಚನೆ
ಈಗಾಗಲೇ ನೀಡಿರುವ ಎಸ್‌ಒಪಿಯನ್ನು ಪಾಲಿಸಿ ಬಿಸಿಯೂಟ ನೀಡಬೇಕಿದೆ. ಇದಕ್ಕೆ ಬೇಕಾದ ಸಿದ್ಧತೆಯನ್ನು ಈಗಿನಿಂದಲೇ ಆರಂಭಿಸಿಕೊಳ್ಳಬೇಕು. ಬಿಸಿಯೂಟ ಸಿದ್ಧ ಪಡಿಸುವ ಕೊಠಡಿಯ ಸ್ವಚ್ಛತೆ, ಬಿಸಿಯೂಟ ವಿತರಣೆಗೆ ಬೇಕಾದ ವ್ಯವಸ್ಥೆ ಸಹಿತ ಎಲ್ಲವನ್ನೂ ಸಮರ್ಪಕವಾಗಿ ಸಿದ್ಧಪಡಿಸಿಕೊಳ್ಳುವಂತೆ ಶಾಲೆಗಳಿಗೆ ಸೂಚನೆ ನೀಡಲಾಗಿದೆ ಎಂದು ಶಿಕ್ಷಣ ಸಚಿವ ಬಿ.ಸಿ. ನಾಗೇಶ್‌ ಮಾಹಿತಿ ನೀಡಿದರು.

ತರಗತಿ ಆರಂಭದ ಜತೆಗೆ ಬಿಸಿಯೂಟ ಒದಗಿಸುವಂತೆ ಮಾಜಿ ಸಚಿವ ಸುರೇಶ್‌ ಕುಮಾರ್‌ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದರು.

Advertisement

ಇದನ್ನೂ ಓದಿ:ಬಾಲಬ್ರೂಯಿಯಲ್ಲೇ ಕಾನ್‌ಸ್ಟಿಟ್ಯೂಷನ್‌ ಕ್ಲಬ್‌: ಕಾಗೇರಿ

Advertisement

Udayavani is now on Telegram. Click here to join our channel and stay updated with the latest news.

Next