Advertisement

ತೇಜ್‌ ಬಹಾದ್ದೂರ್‌ ಆಯ್ತು, ಈಗ ಸಿಆರ್‌ಪಿಎಫ್ ಜವಾನನ ರೋದನ, Watch

11:45 AM Jan 12, 2017 | udayavani editorial |

ಹೊಸದಿಲ್ಲಿ : ಕಳಪೆ ಆಹಾರ, ಕಳಪೆ ಸೌಕರ್ಯದ ವಿರುದ್ಧ ಬಿಎಸ್‌ಎಫ್ ಜವಾನ ತೇಜ್‌ ಬಹಾದ್ದೂರ್‌ ಧ್ವನಿ ಎತ್ತಿ ವಿವಾದ ಸೃಷ್ಟಿಸಿದ ಬಳಿಕ ಇದೀಗ ಸಿಆರ್‌ಪಿಎಫ್ ಕಾನ್‌ಸ್ಟೆಬಲ್‌ ಜೀತ್‌ ಸಿಂಗ್‌, ಪ್ರಧಾನಿ ಮೋದಿ ಅವರನ್ನು ಉದ್ದೇಶಿಸಿ ಯೂ ಟ್ಯೂಬ್‌ನಲ್ಲಿ ವಿಡಿಯೋ ಸಂದೇಶವೊಂದನ್ನು ಅಪ್‌ ಲೋಡ್‌, ಅರೆ ಸೈನಿಕ ದಳದ ಸಿಬಂದಿಗಳು ಪಡುತ್ತಿರುವ ಪಾಡಿನ ನೈಜ ಚಿತ್ರಣವನ್ನು ಮುಂದಿಟ್ಟಿದ್ದಾರೆ. 

Advertisement

‘ಸಾಮಾನ್ಯ ಶಿಕ್ಷಕ ವೃತ್ತಿಯಲ್ಲಿ ಇರುವವರಿಗೂ ರಜೆಗಳಿವೆ, ಪಾವತಿ ರಜೆಗಳಿವೆ ಮತ್ತು ಅವರಿಗೆ ಅವರ ಕುಟುಂಬ ಸದಸ್ಯರೊಂದಿಗೆ ರಜೆಯನ್ನು ಕಳೆಯುವ ಅವಕಾಶವಿದೆ. ಆದರೆ ನಾವು ದಟ್ಟ ಅರಣ್ಯಗಳಲ್ಲಿದ್ದುಕೊಂಡು, ಪ್ರಾಣದ ಹಂಗು ತೊರೆದು, ದೇಶಕ್ಕಾಗಿ ದುಡಿಯುತ್ತೇವೆ. ನಮಗೆ ಮಾತ್ರ ಒಂದು ದಿನವೂ ರಜೆಯೇ ಇಲ್ಲ; ನಾವು ನಮ್ಮ ಕುಟುಂಬದವರೊಡನೆ ಕಾಲ ಕಳೆಯುವುದಕ್ಕೆ ಅವಕಾಶವೇ ಇಲ್ಲ’ ಎಂದು ಜೀತ್‌ ಸಿಂಗ್‌ ವಿಡಿಯೋದಲ್ಲಿ ಅತ್ಯಂತ ಹೃದಯಸ್ಪರ್ಶಿಯಾಗಿ, ಪ್ರಧಾನಿ ಮೋದಿ ಸ್ಪಷ್ಟವಾಗಿ ಮನವರಿಗೆ ಮಾಡುವ ರೀತಿಯಲ್ಲಿ, ಗೋಗರೆದಿದ್ದಾನೆ. 

ಅರೆ ಸೈನಿಕ ದಳದ ಸಿಬಂದಿಗಳು ಮತ್ತು ಯೋಧರ ನಡುವೆ ತಾರತಮ್ಯ ಮಾಡಲಾಗುತ್ತಿದೆ. ಅಂತೆಯೇ ಅರೆ ಸೈನಿಕ ದಳದವರಿಗೆ ಸಿಗುತ್ತಿರುವ ಸೌಕರ್ಯಗಳ ಬಗ್ಗೆ ಪರಿಶೀಲನೆ ನಡೆಸುವಂತೆ ಜೀತ್‌ ಸಿಂಗ್‌ ಪ್ರಧಾನಿಗೆ ಮನವಿ ಮಾಡಿಕೊಂಡಿದ್ದಾನೆ.

Advertisement

Udayavani is now on Telegram. Click here to join our channel and stay updated with the latest news.

Next