Advertisement
ಇದನ್ನೂ ಓದಿ:Hubli; ದ್ವಂದ್ವತೆ, ತುಷ್ಟೀಕರಣ ಕಾಂಗ್ರೆಸ್ ರಕ್ತದ ಕಣಕಣದಲ್ಲಿದೆ: ಪ್ರಹ್ಲಾದ ಜೋಶಿ
Related Articles
Advertisement
ಶನಿವಾರ ರಾತ್ರಿ ಮನೆಯೊಳಗೆ ನುಗ್ಗಿದ ಭೂಪೇಂದ್ರ, ಸತೀಶ್ ಹಾಗೂ ಅವರ ಪತ್ನಿಗೆ ಗನ್ ಪಾಯಿಂಟ್ ಇಟ್ಟಾಗ, ಸತೀಶ್ ಸ್ನೇಹಿತ ಅಮಿತ್ ಮಧ್ಯಪ್ರವೇಶಿಸಿ ತಡೆಯಲು ಯತ್ನಿಸಿದ್ದ, ಆದರೆ ಅಷ್ಟರಲ್ಲಿ ಅಮಿತ್ ತಲೆಗೆ ಸುತ್ತಿಗೆಯಿಂದ ಹೊಡೆದಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ನಂತರ ಭೂಪೇಂದ್ರ ಸತೀಶ್ ಪತ್ನಿ ಹಾಗೂ ಅಮಿತ್ ಮೊಬೈಲ್ ಗಳನ್ನು ಕಸಿದುಕೊಂಡು ತೆರಳಿದ್ದ. ಸತೀಶ್ ಅವರನ್ನು ಕಾರಿನೊಳಗೆ ಕುಳಿತುಕೊಳ್ಳುವಂತೆ ಹೇಳಿ, ಭೂಪೇಂದ್ರ ಪತ್ನಿ ರೋಹಿಣಿ ಕಾರು ಚಲಾಯಿಸಿಕೊಂಡು ಹೋದ ಮೇಲೆ ರವೀಂದ್ರ ಮತ್ತು ಭೂಪೇಂದ್ರ ಜತೆಗೂಡಿದ್ದರು. ಸ್ವಲ್ಪ ದೂರ ಸಾಗಿದ ನಂತರ ಸತೀಶ್ ಅವರ ಕಾರನ್ನು ಅಲ್ಲೇ ಬಿಟ್ಟು, ಕ್ಯಾಬ್ ಗೆ ಸತೀಶ್ ಅವರನ್ನು ಕೂರಿಸಿ, ಕೈ-ಕಾಲು ಕಟ್ಟಿ, ಬಾಯಿಗೆ ಬಟ್ಟೆ ತುಂಬಿ ಹಿಂಬದಿ ಸೀಟ್ ನಲ್ಲಿ ಅಡಗಿಸಿ ಇಟ್ಟಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಸತೀಶ್ ಅವರ ಕ್ರೆಡಿಟ್ ಕಾರ್ಡ್ ಬಳಸಿ ಪೆಟ್ರೋಲ್ ತುಂಬಿಸಿಕೊಂಡು ಸುಮಾರು 800 ಕಿಲೋ ಮೀಟರ್ ದೂರ ತೆರಳಿದ್ದರು.
ಹಿಮಾಚಲ ಪ್ರದೇಶಕ್ಕೆ ತೆರಳಿದ ಮೇಲೆ ಅಪಹರಣಕಾರರು ಸತೀಶ್ ಅವರ ಪತ್ನಿಗೆ ಕರೆ ಮಾಡಿ 50 ಲಕ್ಷ ರೂಪಾಯಿ ಹಣ ಕೊಡುವಂತೆ ಬೇಡಿಕೆ ಇಟ್ಟಿದ್ದರು. ಅಷ್ಟರಲ್ಲಿ ಪೊಲೀಸರು ಆರು ತಂಡಗಳನ್ನು ರಚಿಸಿದ್ದರು. ಕ್ಷಿಪ್ರವಾಗಿ ಅಪಹರಣಕಾರರನ್ನು ಬಂಧಿಸಿ, ಸತೀಶ್ ಅವರನ್ನು ರಕ್ಷಿಸಿದ್ದು, ಮತ್ತೊಬ್ಬ ಆರೋಪಿ ರವೀಂದ್ರಗಾಗಿ ಶೋಧ ಕಾರ್ಯ ನಡೆಯುತ್ತಿದೆ ಎಂದು ವರದಿ ತಿಳಿಸಿದೆ.