Advertisement

ಭಾರತದ ವಿಮಾನ ಅಡ್ಡಗಟ್ಟಿದ ಪಾಕಿಸ್ಥಾನ

01:26 AM Oct 18, 2019 | Team Udayavani |

ಹೊಸದಿಲ್ಲಿ: ದಿಲ್ಲಿಯಿಂದ ಅಫ್ಘಾನಿಸ್ಥಾನದ ಕಾಬೂಲ್‌ಗೆ ಹೊರಟಿದ್ದ ಸ್ಪೈಸ್‌ಜೆಟ್‌ ವಿಮಾನವನ್ನೇ ಭಾರತೀಯ ವಾಯು ಪಡೆ ವಿಮಾನ ಎಂದು ಭಾವಿಸಿ ಪಾಕಿಸ್ಥಾನದ ವಾಯು ಪ್ರದೇಶದಲ್ಲಿ ಆತಂಕದ ಸನ್ನಿವೇಶ ನಿರ್ಮಾಣ ಮಾಡಿದ ಪ್ರಸಂಗ ಕಳೆದ ತಿಂಗಳು ನಡೆದಿರುವುದು ತಿಳಿದುಬಂದಿದೆ.

Advertisement

ಸೆ. 23ರಂದು ಸ್ಪೈಸ್‌ಜೆಟ್‌ ವಿಮಾನವು 120 ಪ್ರಯಾಣಿಕರನ್ನು ಹೊತ್ತು ಕಾಬೂಲ್‌ಗೆ ತೆರಳುತ್ತಿದ್ದ ವೇಳೆ, ಪಾಕಿಸ್ಥಾನದ ವಾಯು ಪ್ರದೇಶದಲ್ಲಿ ಹಾರಾಡುತ್ತಿತ್ತು. ಈ ವೇಳೆ ಹಠಾತ್ತನೆ ಪಾಕಿಸ್ಥಾನದ ಎರಡು ಎಫ್ 16 ವಿಮಾನಗಳು ಸ್ಪೈಸ್‌ಜೆಟ್‌ ವಿಮಾನವನ್ನು ಸಂಪರ್ಕಿಸಿ ಮಾಹಿತಿಯನ್ನು ಕೇಳಿದವು.

ಸ್ಪೈಸ್‌ಜೆಟ್‌ ವಿಮಾನದ ಪೈಲಟ್‌ ಅಗತ್ಯ ಮಾಹಿತಿ ನೀಡಿ ದರೂ, ವಿಮಾನವನ್ನು ಕೆಳಹಂತದಲ್ಲಿ ಹಾರಾಟ ನಡೆಸುವಂತೆ ಪದೇ ಪದೆ ಎಫ್ 16 ಯುದ್ಧ ವಿಮಾನದ ಪೈಲಟ್‌ಗಳು ಸೂಚಿ ಸುತ್ತಿದ್ದರು. ಅಷ್ಟೇ ಅಲ್ಲ, ಸ್ಪೈಸ್‌ಜೆಟ್‌ ವಿಮಾನವನ್ನೂ ಎಫ್ 16 ಯುದ್ಧ ವಿಮಾನಗಳು ಸುತ್ತುವರಿದಿದ್ದವು. ಅನಂತರ, ಇದು ಪ್ರಯಾಣಿಕ ವಿಮಾನ ಎಂಬುದು ಖಚಿತವಾದ ಅನಂತರ ಅಫ್ಘಾನಿ ಸ್ತಾನದ ವಾಯುಗಡಿಯವರೆಗೂ ಎಫ್-16ಯುದ್ಧ ವಿಮಾನ ಗಳು ರಕ್ಷಣೆ ಒದಗಿಸಿದವು ಎಂದು ತಿಳಿದುಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next