Advertisement

ಕಾಪಿ ಮಾಡುವವರ ಮೇಲೆ ಯೋಗಿ ಕಣ್ಣು!

02:21 AM Mar 31, 2017 | Team Udayavani |

ಲಕ್ನೋ: ಮಹಿಳೆಯರನ್ನು ಚುಡಾಯಿಸುವವರ ವಿರುದ್ಧ ರೋಮಿಯೋ ನಿಗ್ರಹ ಪಡೆ ರಚಿಸಿ ಸುದ್ದಿಯಾದ ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌, ಈಗ ಪರೀಕ್ಷೆಗಳಲ್ಲಿ ನಕಲು ಹೊಡೆಯುವವರ ಮೇಲೆ ಕಣ್ಣಿಟ್ಟಿದ್ದಾರೆ. ಪರೀಕ್ಷೆಯಲ್ಲಿ ನಕಲು ಮಾಡುವವರು ಮಾತ್ರವಲ್ಲ, ನಕಲಿಗೆ ಸಹಕರಿಸುವ ಪರೀಕ್ಷಾ ಕೇಂದ್ರಗಳ ಉಸ್ತುವಾರಿ ಹೊತ್ತವರು ಮತ್ತು ನಿಗಾ ವಹಿಸುವವರ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳುವುದಾಗಿ ಯೋಗಿ ಸರಕಾರ ಹೇಳಿದೆ. ಈಗಾಗಲೇ ನಕಲು ಮಾಡುತ್ತಿದ್ದ 1,500 ವಿದ್ಯಾರ್ಥಿಗಳನ್ನು ವಶಕ್ಕೆ ಪಡೆಯಲಾಗಿದೆ. ಯಾರಾದರೂ ಕಾಪಿ ಮಾಡುವುದನ್ನು ನೋಡಿದರೆ ಕೂಡಲೇ ಸಂದೇಶ ಕಳುಹಿಸಿ ಎಂದು ಸಹಾಯವಾಣಿ ಸಂಖ್ಯೆಯನ್ನು ಹಾಗೂ ವಾಟ್ಸ್‌ಆ್ಯಪ್‌ ಸಂಖ್ಯೆಯನ್ನೂ ನೀಡಲಾಗಿದೆ.

Advertisement

ಯೋಗಿಗೆ ಝೆಡ್‌+ ಭದ್ರತೆ: ಇದೇ ವೇಳೆ, ಸಿಎಂ ಯೋಗಿ ಆದಿತ್ಯನಾಥ್‌ರಿಗೆ ಅತ್ಯುನ್ನತ ದರ್ಜೆಯ ‘ಝೆಡ್‌ ಪ್ಲಸ್‌ ವಿವಿಐಪಿ ಸಶಸ್ತ್ರ’ ಭದ್ರತೆಯನ್ನು ಗುರುವಾರ ಒದಗಿಸಲಾಗಿದೆ. ಅದರಂತೆ, 25-28 ಕಮಾಂಡೋಗಳು ಅತ್ಯಾಧುನಿಕ ಶಸ್ತ್ರಾಸ್ತ್ರಗಳೊಂದಿಗೆ ಭದ್ರತೆ ನೀಡಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next