Advertisement
ಪಾದ್ರಿ ಜಾನ್ ಫೀಟ್ ಅವರು ಈ ಕೊಲೆ ನಡೆಸಿದ್ದಾಗ 27ರ ಹರೆಯದ ತರುಣರಾಗಿದ್ದರು. ಕೊಲೆಗೀಡಾಗಿದ್ದ ಸೌಂದರ್ಯ ರಾಣಿ ಐರೀನ್ ಗಾರ್ಜಾ 25ರ ಹರೆಯದವಳಾಗಿದ್ದಳು. 1960ರ ಆ ದಿನಗಳಲ್ಲಿ ಪಾದ್ರಿ ಜಾನ್ ಫೀಟ್, ಟೆಕ್ಸಾಸ್‌ನ ಮೆಕಾಲೆನ್ ನಲ್ಲಿ ಸಂದರ್ಶಕ ಪಾದ್ರಿಯಾಗಿದ್ದರು. ಪವಿತ್ರ ಸಪ್ತಾಹದ ಒಂದು ದಿನ ಐರೀನ್ ಗಾರ್ಜಾ ಪಾಪ ನಿವೇದನೆಗಾಗಿ ಚರ್ಚಿಗೆ ಬಂದಿದ್ದಳು. ಆಗ ಪಾದ್ರಿ ಜಾನ್ ಫೀಟ್ ಅವರು ಪಾಪ ನಿವೇದನ ಕಾರ್ಯಕ್ರಮವನ್ನು ನಡೆಸಿಕೊಡತ್ತಿದ್ದರು. ಆಗಲೇ ಗಾರ್ಜಾಳೊಂದಿಗೆ ಸಂಪರ್ಕ ಬೆಳೆಸಿಕೊಂಡ ಪಾದ್ರಿ ಫೀಟ್ ಆಕೆಯನ್ನು ಕೊಂದು ಮುಗಿಸಿದರು.
Related Articles
Advertisement
ಪಾದ್ರಿ ಫೀಟ್ ಅವರು ಗಾರ್ಜಾಳ ಕೊಲೆ ಮಾಡಿದ್ದ ಸಂದರ್ಭದಲ್ಲಿ ಟೆಕ್ಸಾಸ್‌ನ ಕ್ರೈಸ್ತ ಸಮುದಾಯ ತುಂಬಾ ವಿಚಲಿತವಾಗಿತ್ತು. ಆಗ ಜಾನ್ ಎಫ್ ಕೆನಡಿ ಅವರು ಅಮೆರಿಕ ಅಧ್ಯಕ್ಷೀಯ ಚುನಾವಣಾ ಕಣದಲ್ಲಿದ್ದರು. ಕೆನಡಿ ಅವರು ಕ್ರೈಸ್ತ ಮತಸ್ಥರಾಗಿರುವುದರಿಂದ ಅವರಿಗೆ ಕ್ರೈಸ್ತ ಪಾದ್ರಿ ಫೀಟ್ ನಡೆಸಿದ ಗಾರ್ಜಾ ಕೊಲೆಯ ಕಳಂಕ ತಟ್ಟದಿರಲೆಂಬ ಕಾರಣಕ್ಕೆ ಗಾರ್ಜಾಳ ಕೊಲೆಯನ್ನು ಮುಚ್ಚಿ ಹಾಕುವ ಹುನ್ನಾರವೂ ನಡೆದಿತು.
ಈಗ 60 ವರ್ಷಗಳ ತರುವಾಯ ಕೊಲೆಗಾರ ಪಾದ್ರಿ ಫೀಟ್‌ನ ಅಪರಾಧ ಸಾಬೀತಾಗಿ, 87ರ ಹರೆಯದಲ್ಲಿರುವ ಆತನಿಗೆ ಜೀವಾವಧಿ ಜೈಲು ಶಿಕ್ಷೆಯಾಗಿರುವುದು ಕಾನೂನು ಕೈಗಳು ಎಷ್ಟು ಉದ್ದ ಎಂಬುದು ಅಮೆರಿಕದ ನ್ಯಾಯಾಂಗ ಚರಿತ್ರೆಯಲ್ಲಿ ದಾಖಲಾಗುವಂತಾಯಿತು.