Advertisement

ಚೆನ್ನೈ ಪ್ರತಿಮೆ ಮನುಷ್ಯ ನಿವೃತ್ತಿ?

11:02 PM Sep 18, 2020 | mahesh |

ಚೆನ್ನೈ: ಕಳೆದ 37 ವರ್ಷಗಳಿಂದ ಚೆನ್ನೈನ ವಿಜಿಪಿ ಯೂನಿವರ್ಸಲ್‌ ಕಿಂಗ್‌ಡಮ್‌ ಥೀಮ್‌ ಪಾರ್ಕ್‌ನ ಪ್ರವೇಶ ದ್ವಾರದಲ್ಲಿ ಪ್ರತಿಮೆಯಂತೆ ನಿಂತು, ಥೀಮ್‌ ಪಾರ್ಕ್‌ಗೆ ಬರುವ ಎಲ್ಲರಿಗೂ ಚಿರಪರಿಚಿತರಾಗಿದ್ದ ಅಬ್ದುಲ್‌ ಅಜೀಜ್‌ (56), ತಮ್ಮ ದೀರ್ಘ‌ಕಾಲದ ವೃತ್ತಿಯನ್ನು ಸದ್ಯದಲ್ಲೇ ತೊರೆಯುವ ಬಗ್ಗೆ ಚಿಂತನೆ ನಡೆಸಲಾರಂಭಿಸಿದ್ದಾರೆ.

Advertisement

1985ರಲ್ಲಿ ಇಲ್ಲಿ ಕೆಲಸಕ್ಕೆ ಸೇರಿದ್ದ ಅವರಿಗೆ ಪ್ರವೇಶ ದ್ವಾರದಲ್ಲಿ ರಾಜಸೇವಕನ ಉಡುಪಿನಲ್ಲಿ ದ್ವಾರದ ಮುಂದೆ ಪ್ರತಿಮೆಯಂತೆ ನಿಲ್ಲುವ ಕೆಲಸವನ್ನು ನೀಡಲಾಗಿತ್ತು. ಹೀಗೆ, ನಿಂತ ಕಡೆ ನಿಲ್ಲುವ ಉದ್ಯೋಗವನ್ನು ಕಳೆದ 37 ವರ್ಷಗಳಿಂದಲೂ ಶ್ರದ್ಧೆಯಿಂದ ಮಾಡುತ್ತಾ ಬಂದಿರುವ ಅವರೀಗ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ.

ದೇಶದಲ್ಲಿ ಕೊರೊನಾ ಲಾಕ್‌ಡೌನ್‌ ಜಾರಿಯಾದಾಗಿನಿಂದ ಇಲ್ಲಿಯವರೆಗೆ ಥೀಮ್‌ ಪಾರ್ಕ್‌ ಮುಚ್ಚಿದೆ. ಸದ್ಯಕ್ಕೆ ಅದು ಮತ್ತೆ ಶುರುವಾದ ಸೂಚನೆಗಳಿಲ್ಲ. ಅಲ್ಲಿನ ಆಡಳಿತ ಮಂಡಳಿಯಲ್ಲಿ ವಿಚಾರಿಸಿದರೆ ಅ. 1ರಿಂದ ಪಾರ್ಕ್‌ ಶುರುವಾಗುತ್ತದೆ ಎಂಬ ಉತ್ತರ ಬರುತ್ತದಾದರೂ ಆ ಬಗ್ಗೆ ಖಚಿತತೆ ಇಲ್ಲ. ಹಾಗಾಗಿ, ಸಂಬಳವಿಲ್ಲದೆ ಕಷ್ಟಪಡುವಂತಾಗಿದೆ ಅಬ್ದುಲ್‌ ಅವರ ಜೀವನ. “”ಮಾರ್ಚ್‌ ತಿಂಗಳಲ್ಲಿ ನಾನು ಕಡೆಯ ಸಂಬಳ ಪಡೆದದ್ದು. ಹಾಗಾಗಿ, ಜೀವನ ಕಷ್ಟವಾಗಿದೆ. ಬೇರೆ ಉದ್ಯೋಗ ಹುಡುಕುವ ಆಲೋಚನೆಯಲ್ಲಿದ್ದೇನೆ” ಎಂದಿದ್ದಾರೆ ಅವರು.

Advertisement

Udayavani is now on Telegram. Click here to join our channel and stay updated with the latest news.

Next