ನವದೆಹಲಿ : ದೇಶಕ್ಕೆ 32 ವರ್ಷಗಳ ಕಾಲ ಅಮೋಘ ಸೇವೆ ಸಲ್ಲಿಸಿದ ಐಎನ್‌ಎಸ್ ಅಜಯ್ ಸೇನೆಯಿಂದ ನಿವೃತ್ತಿಗೊಂಡಿದೆ. ಮುಂಬೈನ ನೇವಲ್ ಡಾಕ್‌ಯಾರ್ಡ್‌ನಲ್ಲಿ ಸಾಂಪ್ರದಾಯಿಕ ರೀತಿಯಲ್ಲಿ ಸಮಾರಂಭವನ್ನು ನಡೆಸಲಾಯಿತು.
ಹಡಗಿನಿಂದ ರಾಷ್ಟ್ರೀಯ ಧ್ವಜ, ನೌಕಾ ಧ್ವಜವನ್ನು ಸೂರ್ಯಾಸ್ತದ ಸಮಯದಲ್ಲಿ ಕೊನೆಯ ಬಾರಿಗೆ ಇಳಿಸಲಾಯಿತು, ಇದರೊಂದಿಗೆ ಸೇನೆಗೆ ಸಲ್ಲಿಸಿದ ಅಮೋಘ ಸೇವೆ ಕೊನೆಗೊಂಡಂತಾಗಿದೆ.
ಐಎನ್ಎಸ್ ಅಜಯ್ ಜನವರಿ 24, 1990 ರಂದು ತನ್ನ ಸೇವೆ ಪ್ರಾರಂಭಿಸಿದ್ದು ಮಹಾರಾಷ್ಟ್ರ ನೌಕಾ ಪ್ರದೇಶದ ಫ್ಲಾಗ್ ಆಫೀಸರ್ ಕಮಾಂಡಿಂಗ್ ಅವರ ಕಾರ್ಯಾಚರಣೆಯ ನಿಯಂತ್ರಣದಲ್ಲಿ 23 ನೇ ಪ್ಯಾಟ್ರೋಲ್ ವೆಸೆಲ್ ಸ್ಕ್ವಾಡ್ರನ್‌ನ ಭಾಗವಾಗಿತ್ತು.
ಈ ಹಡಗು 32 ವರ್ಷಗಳಿಗಿಂತಲೂ ಹೆಚ್ಚು ಕಾಲ ನೌಕಾ ನೆಲೆಯಲ್ಲಿ ಸೇವೆಯನ್ನು ನೀಡಿತ್ತು ಅಲ್ಲದೆ ಕಾರ್ಗಿಲ್ ಯುದ್ಧದ ಸಮಯದಲ್ಲಿ ನೌಕಾ ಕಾರ್ಯಾಚರಣೆಗಳಲ್ಲಿ ಪ್ರಮುಖ ಪಾತ್ರ ವಹಿಸಿತ್ತು ಎನ್ನಲಾಗಿದೆ.
ಇದನ್ನೂ ಓದಿ : ‘ಕಾಂತಾರ’ ಚಿತ್ರದ ರಿಷಬ್ ಪಾತ್ರವನ್ನು ‘ಅಪ್ಪು’ ಮಾಡಬೇಕಿತ್ತು, ಆದರೆ…