Advertisement

ಮಹಿಳಾ ದಿನಾಚರಣೆ : 23 ವರ್ಷಗಳ ನಂತರ ಭಾರತೀಯ ನೌಕಾಪಡೆಗೆ ಮಹಿಳೆಯರ ನೇಮಕ

03:24 PM Mar 08, 2021 | Team Udayavani |

ನವದೆಹಲಿ : 23 ವರ್ಷಗಳ ನಂತ್ರ ನಾಲ್ವರು ಮಹಿಳಾ ಅಧಿಕಾರಿಗಳನ್ನು ಭಾರತೀಯ ನೌಕಾ ಪಡೆಗೆ ನೇಮಿಸಿ, ಯುದ್ಧ ನೌಕೆಗಳಲ್ಲಿ ಕಾರ್ಯ ನಿರ್ವವಹಿಸಲು ಅವಕಾಶ ಕೊಡಲಾಗಿದೆ. ಇದು ಮಹಿಳೆಯರ ದಿಟ್ಟ ಹೆಜ್ಜೆ ಎಂದು ಭಾರತೀಯ ನೌಕಾ ಪಡೆಯ ವಕ್ತಾರರು ತಿಳಿಸಿದ್ದಾರೆ.

Advertisement

ಇವರಲ್ಲಿ ಇಬ್ಬರನ್ನು ಐ ಎನ್ ಎಸ್ ವಿಕ್ರಮಾದಿತ್ಯದಲ್ಲಿ ಏರ್ ಕ್ರಾಫ್ಟ್ ಕೆರೀರ್ ಗಳಲ್ಲಿ ನೇಮಕ ಮಾಡಿದ್ರೆ, ಇನ್ನು ಇಬ್ಬರು ಮಹಿಳಾ ಅಧಿಕಾರಿಗಳನ್ನ, ಟ್ಯಾಂಕರ್ ಶಿಪ್ ಐ ಎನ್ ಎಸ್ ಶಕ್ತಿಗೆ ನಿಯೋಜನೆ ಮಾಡಲಾಗಿದೆ ಎಂದು ಮಹಿಳಾ ದಿನದ ಅಂಗವಾಗಿ ನೌಕಾ ಪಡೆಯ ವಕ್ತಾರರು ತಿಳಿಸಿದ್ದಾರೆ.

1998 ರಲ್ಲಿ ಮೊದಲ ಬಾರಿಗೆ ಮಹಿಳಾ ಅಧಿಕಾರಿಗಳನ್ನು ಆನ್‌ ಬೋರ್ಡ್ ಯುದ್ಧ ನೌಕೆಗಳಲ್ಲಿ ನಿಯೋಜಿಸಲು ಪ್ರಾರಂಭಿಸಲಾಯಿತು. ಆದ್ರೆ ಕೆಲವು ಸಮಸ್ಯೆಗಳಿಂದಾಗಿ ನಿರ್ಧಾರವನ್ನು ಶೀಘ್ರದಲ್ಲೇ ಬದಲಾಯಿಸಲಾಗಿತ್ತು.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಹಿಳಾ ಅಧಿಕಾಯೊರಿಬ್ಬರು, ಮಹಿಳಾ ಅಧಿಕಾರಿಗಳನ್ನು ಇತ್ತೀಚೆಗೆ ಎರಡು ವಿಭಿನ್ನ ಯುದ್ಧನೌಕೆಗಳಲ್ಲಿ ನಿಯೋಜಿಸಲಾಗಿದೆ. ಟ್ಯಾಂಕರ್ ಹಡಗಿನ ಐ ಎನ್‌ ಎಸ್ ಶಕ್ತಿಯಲ್ಲಿ ನಿಯೋಜಿಸಲಾದ ಮಹಿಳಾ ಅಧಿಕಾರಿಗಳಲ್ಲಿ ವೈದ್ಯರೊಬ್ಬರು ಇದ್ದಾರೆ. ಅವರನ್ನು ಭಾರತೀಯ ನೌಕಾಪಡೆಯು ವೈದ್ಯರಾಗಿ ಮತ್ತು ಆನ್‌ ಬೋರ್ಡ್ ಯುದ್ಧನೌಕೆಯಲ್ಲಿ ಸೇವೆ ಸಲ್ಲಿಸಲು ಅವಕಾಶವನ್ನು ನೀಡಲಾಗಿದೆ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next