Advertisement

ಅ. 15ರ ಬಳಿಕ ನಿರ್ಬಂಧ ಸಡಿಲಿಕೆ, ನಿಯಮ ಬಿಗಿ

11:08 PM Oct 05, 2020 | mahesh |

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅ. 15ರ ಬಳಿಕ ಕೆಲವೊಂದು ನಿರ್ಬಂಧಗಳನ್ನು ಸಡಿಲಿಕೆ ಮಾಡಲಾಗುವುದು. ಆದರೆ ಕೋವಿಡ್ ನಿಗ್ರಹದ ಹಿನ್ನೆಲೆಯಲ್ಲಿ ಸಾರ್ವಜನಿಕರು ಪಾಲಿಸಬೇಕಾದ ನಿಯಮಗಳಲ್ಲಿ ಯಾವುದೇ ಸಡಿಲಿಕೆ ಇರುವುದಿಲ್ಲ. ಮಾಸ್ಕ್ ಧಾರಣೆ, ಸಾಮಾಜಿಕ ಅಂತರ ಪಾಲನೆ ಇತ್ಯಾದಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಲೇಬೇಕು ಎಂದು ಜಿಲ್ಲಾಧಿಕಾರಿ ಡಾ| ಕೆ.ವಿ. ರಾಜೇಂದ್ರ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Advertisement

ಆದರೆ ಇದೇ ವೇಳೆ ಕೊರೊನಾ ವೈರಸ್‌ ಸೋಂಕು ಹರಡದಂತೆ ಮುಂಜಾಗ್ರತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಸಂಬಂಧ ನಿಯಮಗಳನ್ನು ಇನ್ನಷ್ಟು ಬಿಗಿಗೊಳಿಸಲಾಗಿದೆ. ನಿಯಮ ಉಲ್ಲಂಘಿಸುವವರ ಮೇಲೆ ಕಠಿನ ಕ್ರಮ ಕಾದಿದೆ.

ಶಾಲೆ, ಕಾಲೇಜು, ಶಿಕ್ಷಣ ಮತ್ತು ತರಬೇತಿ ಸಂಸ್ಥೆಗಳ ಕೆಲವು ಚಟುವಟಿಕೆಗಳಿಗೆ ಪರಿಸ್ಥಿತಿಯನ್ನು ಆಧರಿಸಿ ಅ. 15ರ ಅನಂತರ ಹಂತ-ಹಂತವಾಗಿ ಅನುಮತಿ ದೊರಕಲಿದೆ. ಕಂಟೈನ್ಮೆಂಟ್‌ ವಲಯ ಹೊರತಾಗಿ ಇತರೆಡೆಗಳಲ್ಲಿ ಈಜುಕೊಳ, ಸಿನೆಮಾ ಮಂದಿರ/ ರಂಗಮಂದಿರ/ ಮಲ್ಟಿಪ್ಲೆಕ್ಸ್‌ಗಳನ್ನು, ಮನೋರಂಜನಾ ಉದ್ಯಾನಗಳು ಮತ್ತು ಅದೇ ರೀತಿಯ ಸ್ಥಳಗಳನ್ನು ತೆರೆಯಲು ಷರತ್ತುಗಳನ್ನೊಳಗೊಂಡು ಅನುಮತಿ ನೀಡಲಾಗುತ್ತದೆ. ಒಳಾಂಗಣ ಸ್ಥಳಗಳಲ್ಲಿ 200 ಜನರ ಪರಿಮಿತಿಗೆ ಒಳಪಟ್ಟು ಸಭಾ ಭವನದ ಒಟ್ಟು ಸಾಮರ್ಥ್ಯದ ಗರಿಷ್ಠ ಶೇ. 50ರಷ್ಟಕ್ಕೆ ಕೆಲವೊಂದು ಷರತ್ತುಗಳೊಂದಿಗೆ ಅನುಮತಿ ದೊರೆಯಲಿದೆ.

ಜಿಲ್ಲೆಯೊಳಗೆ ಹಾಗೂ ಜಿಲ್ಲೆಯ ಹೊರಗೆ ಓಡಾಟಕ್ಕೆ ಯಾವುದೇ ನಿರ್ಬಂಧವಿರುವುದಿಲ್ಲ. ಅಂತಾರಾಷ್ಟ್ರೀಯ ವಿಮಾನ ಪ್ರಯಾಣದ ಮೇಲೆ ನಿರ್ಬಂಧ ಮುಂದುವರಿಯಲಿದೆ ಎಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next