ನವದೆಹಲಿ: ದಕ್ಷಿಣ ದೆಹಲಿಯ ಮೆಹ್ರೌಲಿಯಲ್ಲಿ ನಡೆದ ದೇಶವನ್ನೇ ಬೆಚ್ಚಿ ಬೀಳಿಸಿದ್ದ ಶ್ರದ್ಧಾ ವಾಲ್ಕರ್ ಪ್ರಕರಣದ ಆರೋಪಿ ಅಫ್ತಾಬ್ ಅಮೀನ್ ಪೂನಾವಾಲಾನ ವಕೀಲರು ಶುಕ್ರವಾರ ಆತನ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ಬಿಡುಗಡೆಗೆ ಅರ್ಜಿ ಸಲ್ಲಿಸಿದ್ದಾರೆ.
ಪೂನಾವಾಲಾ ಜೈಲಿನೊಳಗೆ ನಡುಗುವ ಚಳಿಯಿಂದ ಬಳಲುತ್ತಿದ್ದಾರೆ ಮತ್ತು ಅವರ ಬಳಿ ಸಾಕಷ್ಟು ಬಟ್ಟೆಗಳಿಲ್ಲ. ಆದ್ದರಿಂದ, ದಿನನಿತ್ಯದ ವಸ್ತುಗಳು ಮತ್ತು ಬೆಚ್ಚಗಿನ ಬಟ್ಟೆಗಳನ್ನು ಖರೀದಿಸಲು ಹಣದ ತುರ್ತು ಅಗತ್ಯವಿದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.
ಆರೋಪಿಯು ತನ್ನ ಬ್ಯಾಂಕ್ ಖಾತೆಗಳಲ್ಲಿ ಸ್ವಲ್ಪ ಹಣವನ್ನು ಹೊಂದಿದ್ದಾನೆ ಮತ್ತು ಆರೋಪಿಯ ಡೆಬಿಟ್ ಕಾರ್ಡ್ / ಕ್ರೆಡಿಟ್ ಕಾರ್ಡ್‌ಗಳು ಪೊಲೀಸ್ ಅಧಿಕಾರಿಗಳ ಬಳಿ ಇವೆ ಎಂದು ತನ್ನ ವಕೀಲರಿಗೆ ಕಾರ್ಡ್‌ಗಳನ್ನು ಬಿಡುಗಡೆ ಮಾಡಲು ಕೋರಿದ ಅರ್ಜಿಯಲ್ಲಿ ತಿಳಿಸಲಾಗಿದೆ.
28ರ ಹರೆಯದ ಪೂನಾವಾಲಾ ನ ನ್ಯಾಯಾಂಗ ಬಂಧನ ಅವಧಿ ಮುಗಿದ ಕೂಡಲೇ ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಲಯಕ್ಕೆ ಹಾಜರುಪಡಿಸುವ ಸಾಧ್ಯತೆ ಇದೆ.
ದೆಹಲಿಯ ಸಾಕೇತ್ ಕೋರ್ಟ್ ಅಫ್ತಾಬ್ ನ್ಯಾಯಾಂಗ ಬಂಧನವನ್ನು 4 ದಿನಗಳವರೆಗೆ ವಿಸ್ತರಿಸಿದೆ. ಜನವರಿ 10 ರಂದು ಭೌತಿಕವಾಗಿ ಹಾಜರುಪಡಿಸುವಂತೆ ನ್ಯಾಯಾಲಯ ಸೂಚಿಸಿದೆ.