Advertisement
ಆಘಾತಕಾರಿ ವಿಷಯವೆಂದರೆ, ಶ್ರದ್ಧಾಳನ್ನು ಹತ್ಯೆ ಮಾಡಿರುವ ಬಗ್ಗೆ ಆರೋಪಿ ಯಾವುದೇ ಪಶ್ಚತ್ತಾಪ ವ್ಯಕ್ತಪಡಿಸಿಲ್ಲ.
ಪಾಲಿಗ್ರಾಫ್ ಪರೀಕ್ಷೆ ವೇಳೆ ಅಫ್ತಾಬ್, “ಶ್ರದ್ಧಾ ಪ್ರಕರಣದಲ್ಲಿ ಗಲ್ಲು ಶಿಕ್ಷೆ ವಿಧಿಸಿದರೂ ನನಗೆ ಯಾವುದೇ ಪಶ್ಚಾತ್ತಾಪವಿಲ್ಲ. ಸತ್ತ ನಂತರ ಸ್ವರ್ಗಕ್ಕೆ ಹೋದಾಗ ನನ್ನನ್ನು ರಾಜನಂತೆ ಬರಮಾಡಿಕೊಳ್ಳುತ್ತಾರೆ. ಸ್ವರ್ಗದಲ್ಲಿ ನನಗೆ ಯುವತಿಯರನ್ನು ಉಡುಗೊರೆಯಾಗಿ ನೀಡುತ್ತಾರೆ,’ ಎಂದು ಹೇಳಿದ್ದಾಗಿ ನವದೆಹಲಿಯ ವಿಧಿವಿಜ್ಞಾನ ಪ್ರಯೊಗಾಲಯದ ಸಿಬ್ಬಂದಿ ತಿಳಿಸಿದ್ದಾರೆ. ಇದೇ ವೇಳೆ 20ಕ್ಕೂ ಹೆಚ್ಚು ಹಿಂದೂ ಯುವತಿಯರೊಂದಿಗೆ ಡೇಟಿಂಗ್‌ನಲ್ಲಿ ತೊಡಗಿದ್ದ ಬಗ್ಗೆ ಆರೋಪಿ ಒಪ್ಪಿಕೊಂಡಿದ್ದಾನೆ.
Related Articles
“ಹಿಂದೂ ಯುವತಿಯರನ್ನು ಟಾರ್ಗೆಟ್ ಮಾಡಿ, ಬಂಬಲ್ ಆ್ಯಪ್ ಮೂಲಕ ಯುವತಿಯರ ಸಂಪರ್ಕ ಸಾಧಿಸಲಾಗುತಿತ್ತು. ನಂತರ ಪುಸಲಾಯಿಸಿ ಅವರನ್ನು ಬಲೆಗೆ ಬೀಳಿಸಿಕೊಳ್ಳಲಾಗುತ್ತಿತ್ತು. ಅವರನ್ನು ಒಲಿಸಿಕೊಳ್ಳಲು ಸುಗಂಧ ದ್ರವ್ಯ ಸೇರಿದಂತೆ ವಿವಿಧ ಗಿಫ್ಟ್ ಗಳನ್ನು ನೀಡಲಾಗುತ್ತಿತ್ತು. ಇದುವರೆಗೂ ಸುಮಾರು 20 ಹಿಂದೂ ಯುವತಿಯರೊಂದಿಗೆ ಡೇಟಿಂಗ್ ನಡೆಸಿದ್ದೇನೆ,’ ಎಂದು ಪೊಲೀಸರ ವಿಚಾರಣೆ ವೇಳೆ ಅಫ್ತಾಬ್ ಬಾಯ್ಬಿಟ್ಟಿದ್ದಾನೆ.
Advertisement
ಶ್ರದ್ಧಾಳ ಉಂಗುರ ಮತ್ತೊಬ್ಬಳಿಗೆ ಗಿಫ್ಟ್:ಶ್ರದ್ಧಾಳನ್ನು ಹತ್ಯೆ ಮಾಡಿದ ನಂತರ ಬಂಬಲ್ ಆ್ಯಪ್ ಮೂಲಕ ಮನೋವೈದ್ಯೆ ಒಬ್ಬರನ್ನು ಅಫ್ತಾಬ್ ಪರಿಚಯ ಮಾಡಿಕೊಂಡಿದ್ದ. ಅಲ್ಲದೇ ಆಕೆಯನ್ನು ಒಲಿಸಿಕೊಳ್ಳಲು ಶ್ರದ್ಧಾಳ ಉಂಗುರವನ್ನು ಆಕೆಗೆ ಉಡುಗೊರೆಯಾಗಿ ನೀಡಿದ್ದ. ಡೇಟಿಂಗ್ ಸಮಯದಲ್ಲಿ ಅನೇಕ ಬಗೆಯ ಸುಗಂಧ ದ್ರವ್ಯಗಳನ್ನು ಆಕೆಗೆ ಗಿಫ್ಟ್ ಆಗಿ ನೀಡಿದ್ದ. ಅಲ್ಲದೇ ಶ್ರದ್ಧಾಳ ಕತ್ತರಿಸಿದ ದೇಹ ಫ್ರಿಡ್ಜ್ ನಲ್ಲಿ ಇರಿಸಿದ್ದಾಗ ಆಕೆಯನ್ನು ಎರಡು ಬಾರಿ ಮನೆಗೆ ಕರೆದುಕೊಂಡು ಬಂದಿದ್ದ.
ಕೊಲೆ ಪ್ರಕರಣ ಹೊರಬಿದ್ದ ನಂತರ ಅಫ್ತಾಬ್ ಜತೆಗೆ ಡೇಟಿಂಗ್ ನಡೆಸಿದ್ದ ಮನೋವೈದ್ಯೆ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. “ಆತ ನನ್ನೊಂದಿಗೆ ಸಾಮಾನ್ಯರಂತೆ, ಏನು ಆಗಿಯೇ ಇಲ್ಲ ಎಂಬಂತೆ ಇರುತ್ತಿದ್ದ. ಅವನ ಮುಖದಲ್ಲಿ ಯಾವುದೇ ಭಯದ ಕುರುಹುಗಳು ಇರಲಿಲ್ಲ. ನನ್ನ ಬಗ್ಗೆ ತುಂಬ ಕಾಳಜಿ ತೋರುತ್ತಿದ್ದ. ಆತ ಹೆಚ್ಚು ಸಿಗರೇಟ್‌ಗಳನ್ನು ಸೇದುತ್ತಿದ್ದ. ಚಟವನ್ನು ಬಿಡುವುದಾಗಿ ಹೇಳುತ್ತಿದ್ದ,’ ಎಂದು ಮನೋವೈದ್ಯೆ ವಿವರಿಸಿದ್ದಾರೆ. ಆಫ್ತಾಬ್‌ನನ್ನು ಗುರುವಾರ ನಾರ್ಕೊ ಅನಾಲಿಸಿಸ್ ಪರೀಕ್ಷೆಗೆ ಒಳಪಡಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.