Advertisement

ಲಾರ್ಡ್ಸ್‌ ಪಂದ್ಯದಿಂದ ಹಿಂದೆ ಸರಿದ ಅಫ್ರಿದಿ

07:25 AM May 18, 2018 | |

ಕರಾಚಿ: ಲಾರ್ಡ್ಸ್‌ನಲ್ಲಿ ಮೇ 31ರಂದು ವೆಸ್ಟ್‌ ಇಂಡೀಸ್‌ ವಿರುದ್ಧ ನಡೆಯಲಿರುವ ಸಹಾಯಾರ್ಥ ಟಿ20 ಪಂದ್ಯದಿಂದ ಪಾಕಿಸ್ಥಾನಿ ಆಲ್‌ರೌಂಡರ್‌ ಶಾಹಿದ್‌ ಅಫ್ರಿದಿ ಹಿಂದೆ ಸರಿದಿದ್ದಾರೆ. ಮಂಡಿನೋವಿನಿಂದಾಗಿ ಈ ನಿರ್ಧಾರಕ್ಕೆ ಬರಬೇಕಾಯಿತು ಎಂದು ಅವರು ತಿಳಿಸಿದ್ದಾರೆ.

Advertisement

ಶಾಹಿದ್‌ ಅಫ್ರಿದಿ ವಿಶ್ವ ಇಲೆವೆನ್‌ ತಂಡದಲ್ಲಿ ಸ್ಥಾನ ಪಡೆದಿದ್ದರು. ಸದ್ಯದಲ್ಲೇ ಬದಲಿ ಆಟಗಾರನನ್ನು ಹೆಸರಿಸಲಾಗುವುದು.

ಶಾಹಿದ್‌ ಅಫ್ರಿದಿ ವಿಶ್ವ ಇಲೆವೆನ್‌ ತಂಡ ಅಂತಿಮಗೊಂಡ ಬಳಿಕ ಹೊರನಡೆಯುತ್ತಿರುವ 2ನೇ ಆಟಗಾರ. ಇದಕ್ಕೂ ಮುನ್ನ ಬಾಂಗ್ಲಾದೇಶದ ಆಲ್‌ರೌಂಡರ್‌ ಶಕಿಬ್‌ ಅಲ್‌ ಹಸನ್‌ ವೈಯಕ್ತಿಕ ಕಾರಣಗಳಿಂದ ಹಿಂದೆ ಸರಿದಿದ್ದರು. ಶಕಿಬ್‌ ಬದಲು ನೇಪಾಲದ ಸಂದೀಪ್‌ ಲಮಿಚಾನೆ ಅವಕಾಶ ಪಡೆದಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next