Advertisement
ಡಿಆರ್ ಕಾಂಗೊಡೆಮಾಕ್ರಾಟಿಕ್ ರಿಪಬ್ಲಿಕ್ ಆಫ್ ಕಾಂಗೊದಲ್ಲಿ ಮಾರ್ಚ್‌ನಲ್ಲಿ ಮೊದಲ ಕೋವಿಡ್ ಪ್ರಕರಣ ದೃಢಪಟ್ಟಿತ್ತು. ಆದರೆ ಸೋಂಕು ಮೊದಲೇ ಬಂದಿರಬೇಕೆಂದು ಕಿನ್‌ಶಾಸದಲ್ಲಿನ ವೈದ್ಯರೊಬ್ಬರು ಅಭಿಪ್ರಾಯಪಡುತ್ತಾರೆ. ವೈದ್ಯಕೀಯ ಸಿಬಂದಿ ಗೊತ್ತಿಲ್ಲದೆ ಈಗಾಗಲೇ ಕೋವಿಡ್ ಅಪಾಯಕ್ಕೆ ತೆರೆದುಕೊಂಡಿದ್ದಾರೆ ಮತ್ತು ಅವರು ಒಂದು ಬಗೆಯ ನಿರೋಧಕ ಶಕ್ತಿಯನ್ನು ಬೆಳೆಸಿಕೊಂಡಿದ್ದಾರೆ ಎಂದವರು ಹೇಳುತ್ತಾರೆ. ಡಿಆರ್ ಕಾಂಗೊದಲ್ಲಿ ವೈದ್ಯಕೀಯ ಉಪಕರಣಗಳ ಕೊರತೆಯಿಂದಾಗಿ ಕೆಲವೇ ಕೋವಿಡ್ ಪರೀಕ್ಷೆಗಳನ್ನು ನಡೆಸಲಾಗಿದೆ. ಮೇ 18ರ ತನಕ ಇಡೀ ದೇಶದಲ್ಲಿ ಕೇವಲ 4,493 ಮಂದಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದೆ. ದೇಶದಲ್ಲಿ ಈಗ 1,600ಕ್ಕಿಂತ ಅಧಿಕ ದೃಢಪಟ್ಟ ಪ್ರಕರಣಗಳಿದ್ದು 60ಕ್ಕಿಂತ ಹೆಚ್ಚು ಸಾವುಗಳು ಸಂಭವಿಸಿವೆ. ಆಫ್ರಿಕದ ರಾಷ್ಟ್ರಗಳ ಪೈಕಿ ಇದು 9ನೇ ಗರಿಷ್ಠ ಪೀಡಿತ ರಾಷ್ಟ್ರವಾಗಿದೆ. ಸರಕಾರ ಲಾಕ್‌ಡೌನ್ ಜಾರಿಗೊಳಿಸಿದ್ದು ದೇಶದ 26 ಪ್ರಾಂತಗಳ ಪೈಕಿ 7ರಲ್ಲಿ ಕೋವಿಡ್ ಸೋಂಕು ಹಬ್ಬಿದೆ.
ಕೀನ್ಯಾ ರಾಜಧಾನಿ ನೈರೋಬಿಯ ದೊಡ್ಡ ಸಾರ್ವಜನಿಕ ಆಸ್ಪತ್ರೆಗೆ ಡಿಸೆಂಬರ್ ಮತ್ತು ಮಾರ್ಚ್‌ನಲ್ಲಿ ಕ್ಷಯ, ನ್ಯುಮೋನಿಯ ಮತ್ತು ಅಸ್ತಮಾದಂಥ ಉಸಿರಾಟ ಸಂಬಂಧಿ ಕಾಯಿಲೆಗಳಿಗಾಗಿ ಭರ್ತಿಯಾಗುವವರ ಸಂಖ್ಯೆ ಶೇ. 40ರಷ್ಟು ಏರಿಕೆಯಾಗಿತ್ತು. ರಾಷ್ಟ್ರವ್ಯಾಪಿ ರಾತ್ರಿ ಕರ್ಫ್ಯೂ ಜಾರಿಗೊಳಿಸಿದ ಬಳಿಕ ಆಸ್ಪತ್ರೆಗೆ ದಾಖಲಾಗುವ ರೋಗಿಗಳ ಸಂಖ್ಯೆ ಕಡಿಮೆಯಾಯಿತು. ಆದರೆ ಆಸ್ಪತ್ರೆಯ ಶವಾಗಾರಕ್ಕೆ ಬರುವ ಶವಗಳ ಸಂಖ್ಯೆ ಜಾಸ್ತಿಯಾಯಿತು.
ಕೀನ್ಯಾದಲ್ಲಿ ಈ ತನಕ 44,851 ಮಂದಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದೆ. ಕೋವಿಡ್ ಪತ್ತೆಯಾದಲ್ಲಿ ತಮ್ಮನ್ನು ಕ್ವಾರಂಟೈನ್ ಕೇಂದ್ರಗಳಿಗೆ ಕಳುಹಿಲಾಗುತ್ತದೆಯೆಂದು ಜನರು ಆಸ್ಪತ್ರೆಗಳಿಗೆ ತೆರಳಲು ಅಂಜುತ್ತಿದ್ದಾರೆ. ಕ್ವಾರಂಟೈನ್ ಕೇಂದ್ರಗಳಲ್ಲಿ ಜನರು ತಮ್ಮ ಖರ್ಚನ್ನು ತಾವೇ ಭರಿಸಬೇಕಾಗುತ್ತದೆ. ಕ್ವಾರಂಟೈನ್ ಕೇಂದ್ರಗಳಲ್ಲಿ ಮೂಲಸೌಕರ್ಯಗಳಿಲ್ಲದೆ ಸ್ಥಿತಿ ಶೋಚನೀಯವಾಗಿದೆ. ನೈಜೀರಿಯ
ನೈಜೀರಿಯದಲ್ಲಿ ಕೋವಿಡ್ ಪತ್ತೆಗೆ ಬಹಳ ಕಡಿಮೆ ಪರೀಕ್ಷೆಗಳನ್ನು ನಡೆಸಲಾಗಿದೆ. ನೈಜೀರಿಯದ ಅತಿಹೆಚ್ಚು ಜನಬಾಹುಳ್ಯದ ಕಾನೊ ರಾಜ್ಯದಲ್ಲಿ ಮೂರು ತಿಂಗಳುಗಳಿಂದ ಹೆಚ್ಚು ಜನರು ಅಸ್ವಸ್ಥರಾಗುತ್ತಿರುವ ಮತ್ತು ಮೃತಪಡುತ್ತಿರುವ ವರದಿಗಳು ಬರುತ್ತಿವೆ. “ಇಷ್ಟೊಂದು ಸಂಖ್ಯೆಯಲ್ಲಿ ಶವಗಳು ಬರುತ್ತಿರುವುದನ್ನು ನಾನೆಂದೂ ನೋಡಿಲ್ಲ. ಸುಮಾರು 60 ವರ್ಷಗಳ ಹಿಂದೆ ಕಾಲರಾ ಸಾಂಕ್ರಾಮಿಕ ಹಬ್ಬಿದ್ದ ಸಂದರ್ಭವನ್ನು ನಮ್ಮ ಹೆತ್ತವರು ಹೇಳುತ್ತಿದ್ದರು’ ಎಂದು ನಗರದ ದಫನ ಭೂಮಿಯಲ್ಲಿ ಗೋರಿ ಅಗೆಯುವ ವ್ಯಕ್ತಿ ಹೇಳುತ್ತಾನೆ. ಅಸ್ತಮಾ, ನ್ಯುಮೋನಿಯ, ಟಿಬಿ, ಎದೆನೋವು, ಗಂಟಲು ಕೆರೆತ ಮುಂತಾದ ರೋಗಲಕ್ಷಣಗಳೊಂದಿಗೆ ಬರುವ ಜನರ ಸಂಖ್ಯೆ ಹೆಚ್ಚಿದೆಯೆಂದು ಆಸ್ಪತ್ರೆಯ ಔಷಧ ವಿಭಾಗದ ಮುಖ್ಯಸ್ಥ ಪ್ರೊ| ಮೂಸಾ ಬಾಬಾ-ಶಾನಿ ಹೇಳುತ್ತಾರೆ. 20 ಕೋಟಿ ಜನಸಂಖ್ಯೆಯೊಂದಿಗೆ ಆಫ್ರಿಕದ ಗರಿಷ್ಠ ಜನಸಂಖ್ಯೆಯುಳ್ಳ ರಾಷ್ಟ್ರವೆನಿಸಿರುವ ನೈಜೀರಿಯದಲ್ಲಿ ಈವರೆಗೆ 33,970 ಕೋವಿಡ್ ಪರೀಕ್ಷೆಗಳನ್ನು ನಡೆಸಲಾಗಿದೆ. ದೇಶದಲ್ಲಿ 6,000ಕ್ಕೂ ಅಧಿಕ ದೃಢಪಟ್ಟ ಪ್ರಕರಣಗಳಿವೆ.
Related Articles
ಆಫ್ರಿಕದ ಎರಡನೆ ಅತಿಹೆಚ್ಚು ಜನಸಂಖ್ಯೆಯನ್ನು ಹೊಂದಿರುವ (10 ಕೋಟಿ) ಇಥಿಯೋಪಿಯದಲ್ಲಿ ನಾಲ್ಕಕ್ಕಿಂತ ಹೆಚ್ಚು ಜನರು ಒಂದೆಡೆ ಸೇರುವುದನ್ನು ನಿಷೇಧಿಸಲಾಗಿದೆ. ಅಲ್ಲಿ ಉಸಿರಾಟ ಸಂಬಂಧಿ ಸೋಂಕುಗಳು ಸಾಮಾನ್ಯವಾಗಿವೆ. ಇಥಿಯೋಪಿಯದಲ್ಲಿ ಈವರೆಗೆ 59,029 ಮಂದಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದೆ ಮತ್ತು 400ಕ್ಕಿಂತ ಕಡಿಮೆ ಕೋವಿಡ್ ಪ್ರಕರಣಗಳು ಪತ್ತೆಯಾಗಿವೆ.
Advertisement
ಉಗಾಂಡಉಗಾಂಡ ಪೂರ್ವ ಆಫ್ರಿಕದ ರಾಷ್ಟ್ರಗಳಲ್ಲೇ ಅತಿ ಹೆಚ್ಚು ಕಟ್ಟುನಿಟ್ಟಿನ ಲಾಕ್‌ಡೌನ್ ಜಾರಿಗೊಳಿಸಿದೆ. ವ್ಯಾಪಾರಿಗಳು ತಮ್ಮ ಮನೆಗೆ ಕೋವಿಡ್ ಒಯ್ಯುವ ಅಪಾಯವನ್ನು ತಪ್ಪಿಸಲು ಮಾರುಕಟ್ಟೆಯಲ್ಲೇ ನಿದ್ರಿಸುವಂತೆ ಅವರಿಗೆ ಆದೇಶಿಸಲಾಗಿದೆ. ಉಗಾಂಡದಲ್ಲಿ ಕೇವಲ 260 ಪ್ರಕರಣಗಳು ವರದಿಯಾಗಿವೆ ಮತ್ತು ಯಾವುದೇ ಸಾವು ಸಂಭವಿಸಿಲ್ಲ. ದೇಶದಲ್ಲಿ ಈವರೆಗೆ 87,832 ಮಂದಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದೆ. ಮುಂದಿನ ಎರಡು ವಾರಗಳಲ್ಲಿ 6 ವರ್ಷಕ್ಕಿಂತ ಹೆಚ್ಚಿನ ವಯಸ್ಸಿನ ಎಲ್ಲರಿಗೆ ಉಚಿತ ಮಾಸ್ಕ್ ವಿತರಿಸುವುದಾಗಿ ಸರಕಾರ ತಿಳಿಸಿದೆ.