Advertisement

ಮೈಸೂರು ಚಾಮರಾಜೇಂದ್ರ ಮೃಗಾಲಯಕ್ಕೆ ಆಫ್ರಿಕಾದ ಚೀತಾ: 30 ದಿನದ ಬಳಿಕ ವೀಕ್ಷಣೆಗೆ ಅವಕಾಶ

05:10 PM Aug 18, 2020 | sudhir |

ಮೈಸೂರು: ಮೈಸೂರು ಚಾಮರಾಜೇಂದ್ರ ಮೃಗಾಲಯಕ್ಕೆ ಆಫ್ರಿಕಾದಿಂದ ಮೂರು ಚೀತಾಗಳು ಆಗಮಿಸಿವೆ.

Advertisement

ಅಂತಾರಾಷ್ಟ್ರೀಯ ಪ್ರಾಣಿ ವಿನಿಮಯದ ಅಡಿ ಮೈಸೂರು ಚಾಮರಾಜೇಂದ್ರ ಮೃಗಾಲಯಕ್ಕೆ ಮೂರು ಆಫ್ರಿಕಾದ ಚೀತಾಗಳನ್ನು ತರಲಾಗಿದೆ.

ಈ ಹಿಂದೆ ಮೃಗಾಲಯದಲ್ಲಿ ಇದ್ದ ಒಂದೇ ಒಂದು ಚೀತಾ ವಯೋಸಹಜವಾಗಿ ಕಳೆದ ವರ್ಷ ಮೃತಪಟ್ಟಿತ್ತು.ಅಂದಿನಿಂದ ಖಾಲಿಯಾಗಿ ಉಳಿದಿದ್ದ ಚೀತಾ ಮನೆಗೆ ಇಂದು ಮೂರು ಮರಿಗಳ ಆಗಮನವಾಗಿದೆ.

ಸದ್ಯ 30 ದಿನಗಳ ಕ್ವಾರಂಟೈನ್ (ನಿಗಾದಲ್ಲಿ) ಇಟ್ಟು ಬಳಿಕ ಸಾರ್ವಜನಿಕ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next