Advertisement
ಟಿಕೆಟ್ ಗಾಗಿ ಸಹೋದರರ ನಡುವೆ ಸವಾಲ್ ಎನ್ನುವಂತೆ ಜಿಲ್ಲೆಯ ಅಫಜಲಪುರ ಕ್ಷೇತ್ರದಲ್ಲಿ ಎರಡು ರಾಷ್ಟ್ರೀಯ ಪಕ್ಷಗಳ ಟಿಕೆಟ್ ಗಾಗಿ ಸಹೋದರರ ನಡುವೆ ದೊಡ್ಡ ಕಾಳಗ ನಡೆದಿದ್ದು,ಪಕ್ಷದ ಹೈಕಮಾಂಡ್ ಗಳು ಇಕ್ಕಟ್ಟಿನಲ್ಲಿ ಸಿಲುಕುವಂತಾಗಿದೆ.
Related Articles
Advertisement
ಕಾಂಗ್ರೆಸ್ ನ ಹಾಲಿ ಶಾಸಕ ಎಂ. ವೈ .ಪಾಟೀಲ್ ವಯಸ್ಸಿನ ಕಾರಣ ಸ್ಪರ್ಧೆಯಿಂದ ಹಿಂದೆ ಸರಿಯಲು ನಿರ್ಧರಿಸಿದ್ದರಿಂದ ಅವರ ಮಕ್ಕಳಲ್ಲಿ ಟಿಕೆಟ್ ಗೆ ಸ್ಪರ್ಧೆ ಏರ್ಪಟ್ಟಿದೆ.ಎಂ ವೈ ಪಾಟೀಲ್ ಹಿರಿಯ ಪುತ್ರ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಅರುಣಕುಮಾರ ಪಾಟೀಲ್ ಕಾಂಗ್ರೆಸ್ ಟಿಕೆಟ್ ಪ್ರಬಲ ಒತ್ತಡ ಹಾಕುತ್ತಿದ್ದರೆ, ಶಾಸಕರ ಇನ್ನೋರ್ವ ಪುತ್ರ ಡಾ. ಸಂಜು ಪಾಟೀಲ್ ಸಹ ತಮಗೆ ಪಕ್ಷದ ಟಿಕೆಟ್ ನೀಡುವಂತೆ ಅರ್ಜಿ ಹಾಕಿದ್ದಾರಲ್ಲದೇ ತಮಗೆ ಟಿಕೆಟ್ ನೀಡಿದರೆ ಪಕ್ಷಕ್ಕೆ ಅನುಕೂಲ ಆಗುವುದು ಎಂದು ಹೇಳುತ್ತಿರುವುದು ಪಕ್ಷ ಇಕ್ಕಟ್ಟಿಗೆ ಸಿಲುಕಿದೆ. ಎಐಸಿಸಿ ಅಧ್ಯಕ್ಷ ಡಾ. ಮಲ್ಲಿಕಾರ್ಜುನ ಖರ್ಗೆ ಅವರು ಜಿಲ್ಲೆಯಾಗುವುದರಿಂದ ಎಲ್ಲ ಕ್ಷೇತ್ರಗಳು ಸವಾಲು ಆಗಿ ಮಾರ್ಪಟ್ಟಿವೆ. ಹೀಗಾಗಿ ಅಫಜಲಪುರ ಟಿಕೆಟ್ ಹಂಚಿಕೆ ಹೇಗೆ? ಎಂಬುದೇ ಹೈಕಮಾಂಡ್ ಗೆ ತಲೆ ನೋವಾಗಿ ಪರಿಣಮಿಸಿದೆ. ಒಂದು ವೇಳೆ ಅಫಜಲಪುರದಲ್ಲಿ ಗುತ್ತೇದಾರ ಸಹೋದರರಿಬ್ಬರು ಎದುರು- ಬದುರು ಸ್ಪರ್ಧಿಸಿದರೆ ಏನಾಗಬಹುದು ಎಂದು ಒಂದು ನಿಟ್ಟಿನಲ್ಲಿ ಅವಲೋಕಿಸಲಾಗುತ್ತಿದೆ. ಕಾಂಗ್ರೆಸ್ ದಿಂದ ಶಾಸಕರ ಪುತ್ರರಿಗೆ ಟಿಕೆಟ್ ಬೇಡ ಎಂದು ಕೆಲವರು ಪಕ್ಷದ ಹೈಕಮಾಂಡ್ ಮೇಲೆ ಒತ್ತಡ ಹಾಕುತ್ತಿದ್ದಾರೆ. ಮುಖಂಡರಾದ ರಾಜೇಂದ್ರ ಪಾಟೀಲ್ ರೇವೂರ, ಜೆ.ಎಂ ಕೊರಬು ಟಿಕೆಟ್ ಗಾಗಿ ಪೈಪೋಟಿ ನಡೆಸಿದ್ದು,ಮಣೆ ಹಾಕಬಹುದೇ? ಎಂಬುದನ್ನು ಕಾದು ನೋಡಬೇಕಿದೆ. ಇದನ್ನೂ ಓದಿ: ಕಾಂಗ್ರೆಸ್ ಅವಧಿಯಲ್ಲಿನ 59 ಪ್ರಕರಣಗಳು ಲೋಕಾಯುಕ್ತಕ್ಕೆ : ಸಿಎಂ ಬೊಮ್ಮಾಯಿ