Advertisement

Pak-Afghans: ಪಾಕ್‌ ಕಸ್ಟಮ್ಸ್‌ ವಿರುದ್ಧ ಆಫ್ಘನ್ನರ ದಾಳಿ

08:48 PM Oct 17, 2023 | Team Udayavani |

ಕರಾಚಿ: ಪಾಕಿಸ್ತಾನದ ಕಸ್ಟಮ್ಸ್‌, ಪೊಲೀಸ್‌ ಮತ್ತು ರೇಂಜರ್ಸ್‌ ಸಿಬ್ಬಂದಿ ವಿರುದ್ಧ ಅಫ್ಘಾನಿಸ್ತಾನ ನಾಗರಿಕರು ದಾಳಿ ನಡೆಸಿದ್ದಾರೆ. ಆ ದೇಶದ ವಾಣಿಜ್ಯ ರಾಜಧಾನಿ ಕರಾಚಿಯಲ್ಲಿ ವಾಸಿಸುತ್ತಿರುವ ಆಫ್ಘನ್‌ ನಾಗರಿಕರು ಅಕ್ರಮವಾಗಿ ಹೊಂದಿರುವ ಕೆಲವು ವಸ್ತುಗಳನ್ನು ವಶಪಡಿಸಿಕೊಳ್ಳುವ ನಿಟ್ಟಿನಲ್ಲಿ ದಾಳಿ ನಡೆಸಲು ಉದ್ದೇಶಿಸಲಾಗಿತ್ತು.

Advertisement

ಆದರೆ, ದಾಳಿ ನಡೆಸಲು ಹೋದ ಅಧಿಕಾರಿಗಳು ಮತ್ತು ಸಿಬ್ಬಂದಿ ವಿರುದ್ಧವೇ ಆಫ್ಘನ್‌ ನಾಗರಿಕರು ಪ್ರತಿ ದಾಳಿ ನಡೆಸಿದ್ದಾರೆ. ಬಡಿಗೆ ಮತ್ತು ಇತರ ವಸ್ತುಗಳನ್ನು ಹಿಡಿದುಕೊಂಡು ಯೋಧರನ್ನು, ಪೊಲೀಸರು ಅಟ್ಟಿಸಿಕೊಂಡು ಬರುತ್ತಿರುವ ವಿಡಿಯೋ ಈಗ ವೈರಲ್‌ ಆಗಿದೆ.

Advertisement

Udayavani is now on Telegram. Click here to join our channel and stay updated with the latest news.

Next