Advertisement

“ಮತಾಂತರ ಮಾಡಿಕೊಳ್ಳಿ, ಇಲ್ಲ ದೇಶ ತೊರೆಯಿರಿ’

06:24 PM Oct 22, 2021 | Team Udayavani |

ಕಾಬೂಲ್‌: ತಾಲಿಬಾನ್‌ ಆಡಳಿತದ ಅಫ್ಘಾನಿಸ್ತಾನದಲ್ಲಿ ಈಗ ಸಿಖ್‌ ಧರ್ಮದವರಿಗಿದ್ದ ಬೆದರಿಕೆ ಹೆಚ್ಚಾಗಲಾರಂಭಿಸಿದೆ. “ಇಸ್ಲಾಂನ ಸುನ್ನಿ ಪಂಗಡಕ್ಕೆ ಮತಾಂತರವಾಗಿ ಇಲ್ಲವೇ ದೇಶ ತೊರೆಯಿರಿ’ ಎನ್ನುವ ಬೆದರಿಕೆಗಳನ್ನು ಹಾಕಲಾಗುತ್ತಿದೆ ಎನ್ನಲಾಗಿದೆ.

Advertisement

ತಾಲಿಬಾನ್‌ ಆಡಳಿತಕ್ಕೂ ಮೊದಲೂ ದೇಶದಲ್ಲಿ ಸಿಖ್‌ ಧರ್ಮದವರಿಗೆ ಭದ್ರ ನೆಲೆಯಿರಲಿಲ್ಲ. ತಾಲಿಬಾನ್‌ ಆಡಳಿತ ಆರಂಭವಾದ ಮೇಲಂತೂ ಪ್ರತಿದಿನ ಅವರು ಭಯದಿಂದಲೇ ಬದುಕುವಂತಾಗಿದೆ. ಅದಕ್ಕೆ ಸಾಕ್ಷಿಯೆನ್ನುವಂತೆ ಅ.5ರಂದು ಕಾಬೂಲ್‌ನ ಕರ್ತ್‌-ಎ-ಪರ್ವಾನ್‌ ಜಿಲ್ಲೆಯ ಗುರುದ್ವಾರಕ್ಕೆ ಲಗ್ಗೆ ಇಟ್ಟಿದ್ದ ತಾಲಿಬಾನಿಗಳು ಅಲ್ಲಿನ ಭದ್ರತಾ ಸಿಬ್ಬಂದಿಯನ್ನು ಕಟ್ಟಿ ಹಾಕಿ, ಅಲ್ಲಿದ್ದ ಜನರನ್ನು ಅವಮಾನಿಸಿದ್ದರು. ಇದೀಗ ಅವರಿಗೆ ಮತಾಂತರವಾಗುವಂತೆಯೂ ಬೆದರಿಕೆ ಹಾಕಲಾಗುತ್ತಿದೆ ಎನ್ನಲಾಗಿದೆ.

ಆಫ್ಘಾನ್ ನಲ್ಲಿ ಒಂದು ಕಾಲದಲ್ಲಿ ಹತ್ತಾರು ಸಾವಿರದಲ್ಲಿದ್ದ ಸಿಖ್‌ ಧರ್ಮದವರ ಸಂಖ್ಯೆ ಕಾಲಕ್ರಮೇಣ ಕಡಿಮೆಯಾಗಿದೆ.ಆಫ್ಘಾನ್ ಸರ್ಕಾರದ ವ್ಯವಸ್ಥಿತ ತಾರತಮ್ಯ ಮತ್ತು ಧಾರ್ಮಿಕ ಹಿಂಸಾಚಾರದಿಂದಾಗಿ ಅವರ ಸಂಖ್ಯೆ ಕ್ಷೀಣಿಸುತ್ತಿದೆ ಎಂದು ಹಕ್ಕುಗಳು ಮತ್ತು ಭದ್ರತೆಗಾಗಿ ಅಂತಾರಾಷ್ಟ್ರೀಯ ವೇದಿಕೆ (ಐಎಫ್ಎಫ್ಆರ್‌ಎಎಸ್‌) ತಿಳಿಸಿದೆ.

ಇದನ್ನೂ ಓದಿ:ಕಾನೂನು ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ಕೇಸ್ : ಪೋಲೀಸರ ಅಮಾನತು

Advertisement

Udayavani is now on Telegram. Click here to join our channel and stay updated with the latest news.

Next