ಕಾಬೂಲ್: ಮಧ್ಯಮ ವೇಗಿ ಕರೀಂ ಜನತ್ 6 ವರ್ಷಗಳ ಬಳಿಕ ಅಫ್ಘಾನಿಸ್ಥಾನ ಏಕದಿನ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಅವರನ್ನು ಏಷ್ಯಾ ಕಪ್ ಪಂದ್ಯಾವಳಿಗಾಗಿ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.
ಕರೀಂ ಜನತ್ 2017ರ ಫೆಬ್ರವರಿಯಲ್ಲಿ ಜಿಂಬಾಬ್ವೆ ವಿರುದ್ಧ ಹರಾರೆಯಲ್ಲಿ ಏಕದಿನಕ್ಕೆ ಪದಾರ್ಪಣೆ ಮಾಡಿದ್ದರು. ಅನಂತರ ಮತ್ತೆಂದೂ ಅವರಿಗೆ ಏಕದಿನದಲ್ಲಿ ಆಡುವ ಅವಕಾಶ ಸಿಗಲಿಲ್ಲ. ಇವರಂತೆ ಶರಾಫುದ್ದೀನ್ ಅಶ್ರಫ್ 2022ರ ಜನವರಿ ಬಳಿಕ ಮೊದಲ ಸಲ ಏಕದಿನಕ್ಕೆ ಕರೆ ಪಡೆದಿದ್ದಾರೆ. ವಫಾದಾರ್ ಮೊಮಾಂಡ್ ಅವರನ್ನು ಕೈಬಿಡಲಾಗಿದೆ. ಹಶ್ಮತುಲ್ಲ ಶಾಹಿದಿ ತಂಡವನ್ನು ಮುನ್ನಡೆಸಲಿದ್ದಾರೆ.
ಅಫ್ಘಾನಿಸ್ಥಾನ ತಂಡ: ಹಶ್ಮತುಲ್ಲ ಶಾಹಿದಿ (ನಾಯಕ), ರೆಹಮಾನುಲ್ಲ ಗುರ್ಬಜ್, ಇಬ್ರಾಹಿಂ ಜದ್ರಾನ್, ರಿಯಾಜ್ ಹಸನ್, ರೆಹಮತ್ ಶಾ, ನಜೀಬುಲ್ಲ ಜದ್ರಾನ್, ಮೊಹಮ್ಮದ್ ನಬಿ, ಇಕ್ರಮ್ ಅಖೀಲ್, ರಶೀದ್ ಖಾನ್, ಗುಲ್ಬದಿನ್ ನೈಬ್, ಕರೀಂ ಜನತ್, ಅಬ್ದುಲ್ ರೆಹಮಾನ್, ಶರಾಫುದ್ದೀನ್ ಅಶ್ರಫ್, ಮುಜೀಬ್ ಉರ್ ರೆಹಮಾನ್, ನೂರ್ ಅಹ್ಮದ್, ಮೊಹಮ್ಮದ್ ಸಲೀಂ ಸಫಿ, ಫಜಲ್ ಹಕ್ ಫಾರೂಖಿ.
ಪಾಕ್ ತಂಡಕ್ಕೆ ಸೌದ್ ಶಕೀಲ್
ಪಾಕಿಸ್ಥಾನ ತನ್ನ ಏಷ್ಯಾ ಕಪ್ ತಂಡಕ್ಕೆ ಎಡಗೈ ಬ್ಯಾಟರ್ ಸೌದ್ ಶಕೀಲ್ ಅವರನ್ನು ಸೇರಿಸಿಕೊಂಡಿದೆ. ತಯ್ಯಬ್ ತಾಹಿರ್ ಮೀಸಲು ಆಟಗಾರನಾಗಿ ತಂಡದಲ್ಲೇ ಉಳಿಯಲಿದ್ದಾರೆ.
ತಟಸ್ಥ ತಾಣ ಶ್ರೀಲಂಕಾದಲ್ಲಿ ನಡೆದ ಅಫ್ಘಾನಿಸ್ಥಾನ ವಿರುದ್ಧದ ಏಕದಿನ ಸರಣಿಯನ್ನು 3-0 ಅಂತರದಿಂದ ವಶಪಡಿಸಿಕೊಂಡ ಪಾಕ್ ತಂಡ ರವಿವಾರ ಮುಲ್ತಾನ್‌ಗೆ ಆಗಮಿಸಿದೆ. ಮಂಗಳವಾರ ತನಕ ಇಲ್ಲಿ ಅಭ್ಯಾಸ ನಡೆಸಲಿದ್ದು, ಬುಧವಾರ ನೇಪಾಲ ವಿರುದ್ಧ ಉದ್ಘಾಟನ ಪಂದ್ಯದಲ್ಲಿ ಪಾಲ್ಗೊಳ್ಳಲಿದೆ.