Advertisement

ಹೋರಾಡಿ ಶರಣಾದ ಅಯರ್‌ಲ್ಯಾಂಡ್‌

10:20 AM Mar 18, 2017 | Team Udayavani |

ಗ್ರೇಟರ್‌ ನೋಯ್ಡಾ: ಆರಂಭಿಕ ಪಾಲ್‌ ಸ್ಟರ್ಲಿಂಗ್‌ ಅವರ ಆಲ್‌ರೌಂಡ್‌ ಆಟದ ಹೊರತಾಗಿಯೂ ಅಯರ್‌ಲ್ಯಾಂಡ್‌ ತಂಡವು ಶುಕ್ರವಾರ ನಡೆದ ದ್ವಿತೀಯ ಏಕದಿನ ಪಂದ್ಯದಲ್ಲಿ ಪ್ರಬಲ ಹೋರಾಟ ಸಂಘಟಿಸಿ ಅಫ್ಘಾನಿಸ್ಥಾನ ವಿರುದ್ಧ 34 ರನ್ನುಗಳಿಂದ ಶರಣಾಯಿತು. 

Advertisement

ಬೃಹತ್‌ ಮೊತ್ತದ ಈ ಹೋರಾಟದಲ್ಲಿ ಸ್ಟರ್ಲಿಂಗ್‌ ಬೌಲಿಂಗ್‌ ಮತ್ತು ಬ್ಯಾಟಿಂಗ್‌ನಲ್ಲಿ ಮಿಂಚಿದರೂ ತಂಡಕ್ಕೆ$ಗೆಲುವು ದೊರಕಿಸಿಕೊಡಲು ಅವರಿಂದ ಸಾಧ್ಯವಾಗಲಿಲ್ಲ. ಮೊದಲು ಬ್ಯಾಟಿಂಗ್‌ ನಡೆಸಿದ ಅಫ್ಘಾನಿಸ್ಥಾನವು ಸರಿಯಾಗಿ 50 ಓವರ್‌ಗಳಲ್ಲಿ 338 ರನ್‌ ಗಳಿಸಿ ಆಲೌಟಾಯಿತು. ಇದಕ್ಕುತ್ತರವಾಗಿ ದಿಟ್ಟ ಹೋರಾಟ ಸಂಘಟಿಸಿದ ಅಯರ್‌ಲ್ಯಾಂಡ್‌ ಅಂತಿಮವಾಗಿ 47.3 ಓವರ್‌ಗಳಲ್ಲಿ 304 
ರನ್‌ ಗಳಿಸಲಷ್ಟೇ ಶಕ್ತವಾಗಿ ಶರಣಾಯಿತು.

ಈ ಗೆಲುವಿನಿಂದ ಅಫ್ಘಾನಿಸ್ಥಾನ ತಂಡವು ಐದು ಪಂದ್ಯಗಳ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿತು. ಮೂರನೇ ಪಂದ್ಯ ಮಾ. 19ರಂದು ನಡೆಯಲಿದೆ.

ಅಫ್ಘಾನಿಸ್ಥಾನ ಬೃಹತ್‌ ಮೊತ್ತ ಪೇರಿಸಿದ್ದರೂ ಸ್ಟರ್ಲಿಂಗ್‌ ತನ್ನ 10 ಓವರ್‌ಗಳ ದಾಳಿಯಲ್ಲಿ 55 ರನ್ನಿಗೆ 6 ವಿಕೆಟ್‌ ಕಿತ್ತು ಗಮನ ಸೆಳೆದರು. ಅಸYರ್‌ ಸ್ಟಾನಿಜಾಯ್‌ 101 ರನ್‌ ಗಳಿಸಿದರು. 90 ಎಸೆತ ಎದುರಿಸಿದ ಅವರು 6 ಬೌಂಡರಿ ಮತ್ತು 6 ಸಿಕ್ಸರ್‌ ಬಾರಿಸಿದರು.

ಬ್ಯಾಟಿಂಗ್‌ನಲ್ಲೂ ಮಿಂಚಿದ ಸ್ಟರ್ಲಿಂಗ್‌ 80 ಎಸೆತ ಎದುರಿಸಿ 95 ರನ್‌ ಹೊಡೆದರು. 9 ಬೌಂಡರಿ ಮತ್ತು 5 ಸಿಕ್ಸರ್‌ ಬಾರಿಸಿದ್ದರು. ಅಯರ್‌ಲ್ಯಾಂಡಿನ ಕುಸಿತಕ್ಕೆ ಕಾರಣರಾದ ರಶೀದ್‌ ಖಾನ್‌ ತನ್ನ 9.3 ಓವರ್‌ಗಳ ದಾಳಿಯಲ್ಲಿ 43 ರನ್ನಿಗೆ 6 ವಿಕೆಟ್‌ ಕಿತ್ತರು.

Advertisement

ಸಂಕ್ಷಿಪ್ತ ಸ್ಕೋರು: ಅಫ್ಘಾನಿಸ್ಥಾನ 338 (ಮೊಹಮ್ಮದ್‌ ಶಾಜಾದ್‌ 63, ನೂರ್‌ ಅಲಿ ಜದ್ರಾನ್‌ 25, ರಹಮತ್‌ ಶಾ 68, ಅಸYರ್‌ ಸ್ಟಾನಿಜಾಯ್‌ 101, ಶಫೀಖುಲ್ಲ 35, ಜಾರ್ಜ್‌ ಡಾಕ್ರೆಲ್‌ 45ಕ್ಕೆ 2ಪಾಲ್‌ ಸ್ಟರ್ಲಿಂಗ್‌ 55ಕ್ಕೆ 6); ಅಯರ್‌ಲ್ಯಾಂಡ್‌ 47.3 ಓವರ್‌ಗಳಲ್ಲಿ 304 ಆಲೌಟ್‌ (ಎಡ್‌ ಜಾಯ್ಸ 55, ಪಾಲ್‌ ಸ್ಟರ್ಲಿಂಗ್‌ 95, ವಿಲಿಯಮ್‌ ಪೋರ್ಟರ್‌ಫೀಲ್ಡ್‌ 45, ಸ್ಟುವರ್ಟ್‌ ಥಾಮ್ಸನ್‌ 37, ದೌಲತ್‌ ಜದ್ರಾನ್‌ 52ಕ್ಕೆ 3, ರಶೀದ್‌ ಖಾನ್‌ 43ಕ್ಕೆ 6).

Advertisement

Udayavani is now on Telegram. Click here to join our channel and stay updated with the latest news.

Next