Advertisement

Afghanistan series; ಸೂರ್ಯಕುಮಾರ್‌ ಯಾದವ್‌ಗೆ 7 ವಾರ ವಿಶ್ರಾಂತಿ?

11:50 PM Dec 24, 2023 | Team Udayavani |

ಹೊಸದಿಲ್ಲಿ: ಸೂರ್ಯ ಕುಮಾರ್‌ ಯಾದವ್‌ ಎಡ ಪಾದದ ನೋವಿಗೆ ಸಿಲುಕಿದ್ದು, 7 ವಾರಗಳ ಕಾಲ ವಿಶ್ರಾಂತಿ ಪಡೆಯ ಬೇಕಾದ ಸಾಧ್ಯತೆ ಇದೆ. ಹೀಗಾಗಿ ಅವರು ಮುಂಬರುವ ಅಫ್ಘಾನಿಸ್ಥಾನ ವಿರುದ್ಧದ ಸರಣಿಯಿಂದ ದೂರ ಉಳಿಯಲಿದ್ದಾರೆ.

Advertisement

ಅವರು ಎಡಗಾಲಿಗೆ ವಾಕಿಂಗ್‌ ಬೂಟ್‌ ಧರಿಸಿ, ಊರುಗೋಲಿನ ನೆರವಿನಿಂದ ನಡೆಯುತ್ತಿರುವ ವೀಡಿಯೋ ಒಂದನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದಾರೆ.

ಜನವರಿ 11 ರಿಂದ ತವರಿನಲ್ಲಿ ಪ್ರಾರಂಭವಾಗಲಿರುವ ಅಫ್ಘಾನಿಸ್ಥಾನ ವಿರುದ್ಧದ ಮೂರು ಪಂದ್ಯಗಳ ಟಿ 20I ಸರಣಿಯಲ್ಲಿ ಅವರ ಸ್ಥಾನಮಾನದ ಬಗ್ಗೆ ಯಾವುದೇ ಅಧಿಕೃತ ಘೋಷಣೆಯಾಗಿಲ್ಲ.

ಗಮನಾರ್ಹವಾಗಿ, ದಕ್ಷಿಣ ಆಫ್ರಿಕಾ ವಿರುದ್ಧ ಟಿ 20 ಸರಣಿಯಲ್ಲಿ ಸೂರ್ಯಕುಮಾರ್ ಎರಡು ಪಂದ್ಯಗಳಲ್ಲಿ 156 ರನ್ ಗಳಿಸಿದ್ದಕ್ಕಾಗಿ ‘ಸರಣಿ ಶ್ರೇಷ್ಠ ಆಟಗಾರ’ರಾಗಿದ್ದರು. ಇದರಲ್ಲಿ ಒಂದು ಶತಕ ಮತ್ತು ಅರ್ಧಶತಕ ಹೊಂದಿತ್ತು.

Advertisement

Udayavani is now on Telegram. Click here to join our channel and stay updated with the latest news.

Next