Advertisement

ಬ್ರಾಡ್‌ಮನ್‌ ಸರಾಸರಿ ಮೀರಿಸಿದ ಅಫ್ಘಾನ್‌ ಕ್ರಿಕೆಟಿಗ

01:04 PM Jan 10, 2018 | Team Udayavani |

ಲಂಡನ್‌: ಕ್ರಿಕೆಟಿನ ಬ್ಯಾಟಿಂಗ್‌ ಸರಾಸರಿ ವಿಷಯಕ್ಕೆ ಬಂದಾಗ ಆಸ್ಟ್ರೇಲಿಯದ ಸರ್‌ ಡೊನಾಲ್ಡ್‌ ಬ್ರಾಡ್‌ಮನ್‌ ಬಹಳ ಎತ್ತರದಲ್ಲಿ ಕಾಣಿಸಿಕೊಳ್ಳುತ್ತಾರೆ. ಟೆಸ್ಟ್‌ ಹಾಗೂ ಪ್ರಥಮ ದರ್ಜೆ ಕ್ರಿಕೆಟ್‌ಗಳೆರಡರಲ್ಲೂ ಡಾನ್‌ ಸರ್ವಾಧಿಕ ಸರಾಸರಿ ಹೊಂದಿದ್ದಾರೆ.

Advertisement

ಟೆಸ್ಟ್‌ ಕ್ರಿಕೆಟ್‌ನಲ್ಲಿ 99.94 ಸರಾಸರಿ ಹೊಂದಿರುವ ಬ್ರಾಡ್‌ಮನ್‌, ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 95.14 ಸರಾಸರಿ ದಾಖಲಿಸಿದ್ದಾರೆ. ಒಟ್ಟು 234 ಪ್ರಥಮ ದರ್ಜೆ ಪಂದ್ಯಗಳಿಂದ 28,067 ರನ್‌ ಪೇರಿಸಿರುವುದು ಬ್ರಾಡ್‌ಮನ್‌ ಸಾಧನೆ. ಆದರೆ ಅಫ್ಘಾನಿಸ್ಥಾನದ ಯುವ ಕ್ರಿಕೆಟಿಗನೋರ್ವ ಪ್ರಥಮ ದರ್ಜೆಯಲ್ಲಿ ಬ್ರಾಡ್‌ಮನ್‌ ಸರಾಸರಿಯನ್ನು ಮೀರಿದ್ದೀಗ ಸುದ್ದಿಯಾಗಿದೆ. 18ರ ಹರೆಯದ ಈತನ ಹೆಸರು ಬಹೀರ್‌ ಷಾ.  ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಕನಿಷ್ಠ ಸಾವಿರ ರನ್‌ ಗಳಿಸಿದವರ ಬ್ಯಾಟಿಂಗ್‌ ಸರಾಸರಿಯನ್ನು ಗಣನೆಗೆ ತೆಗೆದುಕೊಂಡಾಗ ಬಹೀರ್‌ ಷಾ ಬ್ರಾಡ್‌ಮನ್‌ಗಿಂತ ಎತ್ತರದಲ್ಲಿ ಕಾಣಿಸಿಕೊಳ್ಳುತ್ತಾರೆ ಎಂದು ಐಸಿಸಿ ತನ್ನ ವೆಬ್‌ಸೈಟ್‌ನಲ್ಲಿ ಉಲ್ಲೇಖೀಸಿದೆ. ಸದ್ಯ ಬಹೀರ್‌ ಬ್ಯಾಟಿಂಗ್‌ ಸರಾಸರಿ 121.77 ಆಗಿದೆ.

2017ರಲ್ಲಿ ಪ್ರಥಮ ದರ್ಜೆ ಕ್ರಿಕೆಟಿಗೆ ಅಡಿಯಿರಿಸಿದ ಬಹೀರ್‌ ಷಾ, ಸ್ಪೀನ್‌ ಘರ್‌ ರೀಜನ್‌ ತಂಡದ ಪರ ಆಡುತ್ತ ಅಮೊ ರೀಜನ್‌ ವಿರುದ್ಧದ ಮೊದಲ ಪಂದ್ಯದಲ್ಲೇ 256 ರನ್‌ ಬಾರಿಸಿದರು. ಈವರೆಗಿನ 12 ಇನ್ನಿಂಗ್ಸ್‌ಗಳಿಂದ ಬಹೀರ್‌ 1,096 ರನ್‌ ಪೇರಿಸಿದ್ದು, ಇದರಲ್ಲಿ ಒಂದು ತ್ರಿಶತಕ ಹಾಗೂ ಶತಕ ಕೂಡ ಸೇರಿದೆ.

“ಇದುನ ನನ್ನ ಕ್ರಿಕೆಟ್‌ ಬದುಕಿನ ಅವಿಸ್ಮರಣೀಯ ಕ್ಷಣ’ ಎಂದು ಹಾಶಿಮ್‌ ಆಮ್ಲ ಅವರನ್ನು ಮಾದರಿಯಾಗಿ ಇರಿಸಿಕೊಂಡಿರುವ ಬಹೀರ್‌ ಷಾ ಪ್ರತಿಕ್ರಿಯಿಸಿದ್ದಾರೆ. ಇದೇ ಉನ್ನತ ಸರಾಸರಿ ಉಳಿಸಿಕೊಂಡು ಹೋಗುವುದು ಅವರ ಗುರಿ.

Advertisement

Udayavani is now on Telegram. Click here to join our channel and stay updated with the latest news.

Next