Advertisement
ಅಫ್ಘಾನಿಸ್ಥಾನದ ಏಕೈಕ ಹೆಣ್ಣುಮಕ್ಕಳ ಬೋರ್ಡಿಂಗ್ ಸ್ಕೂಲ್‌ನ ಸ್ಥಾಪಕಿಯು ತಾಲಿಬಾನ್‌ನಿಂದ ತಮ್ಮ ವಿದ್ಯಾರ್ಥಿನಿಯರನ್ನು ರಕ್ಷಿಸುವ ಸಲುವಾಗಿ, ಎಲ್ಲ ವಿದ್ಯಾರ್ಥಿನಿಯರ ಶಾಲಾ ದಾಖಲೆಗಳನ್ನು ಸುಟ್ಟು ಹಾಕಿದ್ದಾರೆ! ನಾನು ಅವರ ದಾಖಲೆಗಳನ್ನು ಅಳಿಸಲೆಂದು ಹೀಗೆ ಮಾಡುತ್ತಿಲ್ಲ. ಬದಲಿಗೆ ಆ ಮಕ್ಕಳನ್ನು ಮತ್ತು ಅವರ ಕುಟುಂಬಗಳನ್ನು ರಕ್ಷಿಸುವ ಸಲುವಾಗಿ ಈ ಕೃತ್ಯ ಎಸಗುತ್ತಿದ್ದೇನೆ. ನನ್ನ ಹೃದಯ ಒಡೆದು ಚೂರಾಗಿದೆ ಎಂದಿದ್ದಾರೆ ಶಬಾನಾ ಬಾಸಿಜ್ ರಸಿಖ್.
Related Articles
Advertisement
“ಕಳೆದ 20 ವರ್ಷಗಳಲ್ಲಿ ಅಫ್ಘಾನಿಸ್ಥಾನದಲ್ಲಿ ಏನೇನನ್ನು ಸಾಧಿಸಲಾಗಿತ್ತೋ ಅವೆಲ್ಲವೂ ಸರ್ವನಾಶವಾಯಿತು. ಈಗ ಅಲ್ಲಿ ಏನೂ ಉಳಿದಿಲ್ಲ. ಎಲ್ಲ ಝೀರೋ ಆಗಿದೆ’. ಹೀಗೆ ಹೇಳುತ್ತಾ ಕಣ್ಣೀರಿಟ್ಟಿದ್ದು ಅಫ್ಘಾನ್‌ನ ಸೆನೆಟರ್ ನರೇಂದರ್ ಸಿಂಗ್ ಖಲ್ಸಾ. ರವಿವಾರ ಗಾಜಿಯಾಬಾದ್‌ಗೆ ಬಂದಿಳಿದ ಅವರು ತಮ್ಮ ನೋವನ್ನು ಈ ರೀತಿ ಹೊರಹಾಕಿದ್ದಾರೆ. “ಭಾರತ ನಮ್ಮ 2ನೇ ಮನೆ. ನಾವು ಅಫ^ನ್ನ ರಾದರೂ, ನಮ್ಮನ್ನು ಎಲ್ಲರೂ ಹಿಂದುಸ್ಥಾನಿಯರು ಎಂದೇ ಕರೆಯುತ್ತಿದ್ದರು. ಈಗ ಅಲ್ಲಿ ಏನೂ ಅಲ್ಲ. ದೇಶ ಬಿಟ್ಟು ಬರಲು ಬಹಳ ನೋವಾಯಿತು’ ಎಂದಿದ್ದಾರೆ.