Advertisement

ನಮ್ಮ ವಧೆ ಮಾಡಿ: ಶಿಕ್ಷಣ ವಂಚಿತ ಅಫ್ಘಾನ್‌ ಯುವತಿಯರ ಆಕ್ರೋಶ

09:50 AM Dec 26, 2022 | Team Udayavani |

ಕಾಬೂಲ್‌: “ನಮ್ಮನ್ನು ವಿಶ್ವವಿದ್ಯಾನಿಲಯಕ್ಕೆ ಹೋಗುವುದನ್ನು ತಡೆಯುವ ಬದಲು, ನಮ್ಮ ವಧೆ ಮಾಡಿದರೆ ಒಳ್ಳೆಯದಿತ್ತು,’ ಎಂದು ಮಹಿಳೆಯರಿಗೆ ವಿಶ್ವವಿದ್ಯಾನಿಲಯ ಪ್ರವೇಶ ನಿರಾಕರಿಸಿದ ತಾಲಿಬಾನ್‌ ಆದೇಶದ ವಿರುದ್ಧ ಅಫ್ಘಾನಿಸ್ಥಾನದ ಯುವತಿಯರು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

Advertisement

ನಿಷೇಧದ ಬಗ್ಗೆ ಪ್ರತಿಕ್ರಿಯಿಸಿದ 19 ವರ್ಷದ ಮಾರ್ವ, “ಮಹಿಳೆಯರು ದುರದೃಷ್ಟವಂತರು ಎಂದಾದರೆ ನಾವು ಈ ಭೂಮಿ ಮೇಲೆ ಹುಟ್ಟಲೇ ಬಾರದಿತ್ತು. ಇಲ್ಲಿ ಮಹಿಳೆಯರನ್ನು ಪಶುಗಳಂತೆ ನೋಡಲಾಗುತ್ತಿದೆ. ಪಶುಗಳು ತಮ್ಮ ಇಚ್ಛೆಗೆ ಅನುಸಾರವಾಗಿ ಹೋಗುತ್ತವೆ. ಆದರೆ ನಮಗೆ ಮನೆಯಿಂದ ಹೊರಗೆ ಕಾಲಿಡುವ ಹಕ್ಕು ಕೂಡ ಇಲ್ಲ,’ ಎಂದು ಬೇಸರ ವ್ಯಕ್ತಪಡಿಸಿದರು.

ನರ್ಸಿಂಗ್‌ ಪದವಿಯ ಪ್ರವೇಶ ಪರೀಕ್ಷೆಯಲ್ಲಿ ಉತ್ತಿರ್ಣವಾಗಿರುವ ಮಾರ್ವ, ಕೆಲವೇ ದಿನಗಳಲ್ಲಿ ವೈದ್ಯಕೀಯ ಕಾಲೇಜಿಗೆ ಹೋಗುವವರಿದ್ದರು. “ನನ್ನ ಸಹೋದರಿ ಆಕೆಯ ಗುರಿಯಂತೆ ಉನ್ನತ ಶಿಕ್ಷಣ ಪಡೆದು, ಜೀವನದಲ್ಲಿ ಉನ್ನತ ಸ್ಥಾನಕ್ಕೆ ಏರಬೇಕು ಎಂಬುದು ನನ್ನ ಅಭಿಲಾಷೆಯಾಗಿತ್ತು,’ ಎಂದು ಮಾರ್ವ ಅಣ್ಣ ಹಮೀದ್‌ ಪ್ರತಿಕ್ರಿಯಿಸಿದ್ದಾರೆ.

ಗೇಟ್‌ ಪಾಸ್‌: ತಾಲಿಬಾನ್‌ ಆದೇಶದ ಹಿನ್ನೆಲೆಯಲ್ಲಿ ಅಫ್ಘಾನಿಸ್ಥಾನದಲ್ಲಿ ಕೆಲಸ ಮಾಡುತ್ತಿರುವ ಪ್ರಮುಖ ಎನ್‌ಜಿಒಗಳು ಕಾರ್ಯನಿರ್ವಹಣೆ ಸ್ಥಗಿತಗೊಳಿಸಿವೆ. ಜತೆಗೆ ಅಲ್ಲಿ ಕೆಲಸ ಮಾಡುತ್ತಿದ್ದ ಮಹಿಳಾ ಉದ್ಯೋಗಿಗಳನ್ನು ವಜಾ ಮಾಡಿವೆ.

Advertisement

Udayavani is now on Telegram. Click here to join our channel and stay updated with the latest news.

Next