Advertisement

ಆಘ್ಘನ್‌ ವಿವಿ ಓಪನ್‌: ಕ್ಯಾಂಪಸ್‌ ಪ್ರವೇಶಿಸಿದ ವಿದ್ಯಾರ್ಥಿನಿಯರು

07:45 PM Feb 03, 2022 | Team Udayavani |

ಜಲಾಲಾಬಾದ್‌: ಅಫ್ಘಾನಿಸ್ತಾನವು ತಾಲಿಬಾನ್‌ ವಶವಾದ ಬಳಿಕ ಇದೇ ಮೊದಲ ಬಾರಿಗೆ ವಿಶ್ವವಿದ್ಯಾಲಯಗಳ ಬಾಗಿಲು ತೆರೆದಿದ್ದು, ಹೆಣ್ಣುಮಕ್ಕಳು ಕೂಡ ಮತ್ತೆ ಕಾಲೇಜು ಮೆಟ್ಟಿಲು ಹತ್ತಿದ್ದಾರೆ.

Advertisement

ಈವರೆಗೆ ವಿದ್ಯಾರ್ಥಿಗಳು ಮಾತ್ರ ಕ್ಯಾಂಪಸ್‌ ಪ್ರವೇಶಿಸಿದ್ದರು. ಆದರೆ, ವಿದ್ಯಾರ್ಥಿನಿಯರಿಗೆ ಮಾತ್ರ ಅನುಮತಿ ಸಿಕ್ಕಿರಲಿಲ್ಲ. ಈಗಲೂ ತಾಲಿಬಾನ್‌ ಆಡಳಿತದಿಂದ ಅಧಿಕೃತ ಘೋಷಣೆ ಹೊರಬೀಳದಿದ್ದರೂ, ವಿದ್ಯಾರ್ಥಿಗಳು ಮತ್ತು ವಿದ್ಯಾರ್ಥಿನಿಯರು ತರಗತಿಗಳಲ್ಲಿ ಪ್ರತ್ಯೇಕವಾಗಿ ಕುಳಿತುಕೊಳ್ಳಬೇಕು ಎಂಬ ಷರತ್ತಿನೊಂದಿಗೆ ಹೆಣ್ಣುಮಕ್ಕಳಿಗೆ ಪ್ರವೇಶಾವಕಾಶ ಕಲ್ಪಿಸಲಾಗಿದೆ ಎಂದು ಶಿಕ್ಷಣ ಅಧಿಕಾರಿಗಳು ತಿಳಿಸಿದ್ದಾರೆ.

ಜಲಾಲಾಬಾದ್‌ನಲ್ಲಿನ ನಂಗರ್‌ಹಾರ್‌ ವಿಶ್ವವಿದ್ಯಾಲಯದಲ್ಲಿ ಪ್ರತ್ಯೇಕ ಬಾಗಿಲಿನ ಮೂಲಕ ವಿದ್ಯಾರ್ಥಿನಿಯರು ತರಗತಿಗಳಿಗೆ ಹಾಜರಾಗುತ್ತಿದ್ದಾರೆ. ಈಗಾಗಲೇ ಕೆಲವು ಖಾಸಗಿ ವಿವಿಗಳು ತೆರೆದಿದ್ದರೂ, ವಿದ್ಯಾರ್ಥಿನಿಯರು ಮಾತ್ರ ಕಾಲೇಜುಗಳತ್ತ ಮುಖ ಮಾಡಿಲ್ಲ.

“ಈಗಾಗಲೇ ತರಗತಿಗಳನ್ನು ಲಿಂಗಾನುಸಾರ ಪ್ರತ್ಯೇಕಿಸಲಾಗಿದೆ. ಆದರೆ, ಪುರುಷ ಉಪನ್ಯಾಸಕರೇ ನಮಗೂ ಪಾಠ ಮಾಡುತ್ತಾರಾ, ತರಗತಿಯ ಹೊರಗೆ ನಾವು ಗಂಡುಮಕ್ಕಳೊಂದಿಗೆ ಮಾತನಾಡಬಹುದಾ ಎಂಬುದನ್ನು ಯಾರೂ ಸ್ಪಷ್ಟಪಡಿಸಿಲ್ಲ’ ಎಂದು ನಂಗರ್‌ಹಾರ್‌ ವಿವಿಯ ವೈದ್ಯಕೀಯ ವಿದ್ಯಾರ್ಥಿನಿಯೊಬ್ಬರು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next