Advertisement

ಆಫ್ಘನ್‌: ಹಿಂಸೆಯ ಮಧ್ಯೆ ಮುಗಿದ ಮತದಾನ

10:46 PM Sep 28, 2019 | Team Udayavani |

ಕಾಬೂಲ್‌: ಶನಿವಾರ ಜರುಗಿದ ಅಫ್ಘಾನಿಸ್ತಾನ ಅಧ್ಯಕ್ಷೀಯ ಚುನಾವಣೆಯ ಮತದಾನ, ಬಾಂಬ್‌ ಸ್ಫೋಟ, ಹಿಂಸಾಚಾರ ದಂಥ ಘಟನೆಗಳಿಗೆ ಸಾಕ್ಷಿಯಾಗಿದೆ. ಕುಂದುಜ್‌, ನಂಗಾರ್ಹರ್‌, ಕಾಬೂಲ್‌, ಬಾಮಿಯಾನ್‌, ಕಂದಹಾರ್‌ ಮುಂತಾದೆಡೆ ಮತಗಟ್ಟೆಗಳ ಮೇಲೆ ನಡೆದ ದಾಳಿಗಳಲ್ಲಿ ಇಬ್ಬರು ನಾಗರಿಕರು ಸಾವನ್ನಪ್ಪಿದ್ದು, 27 ಮಂದಿ ಗಾಯಗೊಂಡಿದ್ದಾರೆ.

Advertisement

ಉಳಿದೆಡೆ, ಮತದಾರರು ತಮ್ಮ ಹಕ್ಕುಗಳ ಚಲಾವಣೆಗೆ ಉತ್ಸಾಹ ತೋರಿದ್ದಾರೆ. ಮತದಾನ ಸಂಜೆ 5 ಗಂಟೆಗೆ ಮುಕ್ತಾಯವಾಗಿತ್ತಾದರೂ, ಮತಗಟ್ಟೆಗಳ ಮುಂದೆ ಮತ ದಾರರ ಉದ್ದುದ್ದ ಸಾಲುಗಳು ಇದ್ದಿದ್ದನ್ನು ಗಮನಿಸಿ ಮತ ದಾನದ ಅವಧಿಯನ್ನು ಇನ್ನೆರಡು ಗಂಟೆಗಳ ಕಾಲ ವಿಸ್ತರಿಸ ಲಾಗಿತ್ತು. ಹಾಲಿ ಅಧ್ಯಕ್ಷ ಅಶ್ರಫ್ ಘನಿ ಹಾಗೂ ಅವರ ರಾಜ ಕೀಯ ಕಡುವೈರಿ ಅಬ್ದುಲ್ಲಾ ಅಬ್ದುಲ್ಲಾ ನಡುವಿನ ಪ್ರತಿಷ್ಠೆಯಾಗಿ ಈ ಚುನಾವಣೆ ಮಾರ್ಪಟ್ಟಿದೆ. ಅ. 19ರ ನಂತರವೇ
ಫ‌ಲಿತಾಂಶ ಹೊರಬೀಳಲಿದೆ.

Advertisement

Udayavani is now on Telegram. Click here to join our channel and stay updated with the latest news.

Next