Advertisement
ಕಾಶ್ಮೀರದಲ್ಲಿ ಪರಿಸ್ಥಿತಿ ಈಗ ಹಂತ ಹಂತ ವಾಗಿ ತಿಳಿಯಾಗುತ್ತಿದೆ. ಕೆಲವೇ ದಿನಗಳ ಹಿಂದೆ ಪೋಸ್ಟ್‌ಪೇಯ್ಡ ಮೊಬೈಲ್ ಸಂಪರ್ಕಗಳನ್ನು ಸಕ್ರಿಯ ಗೊಳಿಸಲಾಗಿದೆ. 370ನೇ ವಿಧಿ ರದ್ದಾದ ಅನಂತರ ಕಾಶ್ಮೀರಿ, ಉರ್ದು ಹೊರತಾದ ಭಾಷೆ ಮಾತನಾಡುವ ಉಗ್ರರು ಕಾಣಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ಇಂತಹ ಉಗ್ರರ ಇರುವಿಕೆಯ ಬಗ್ಗೆ ಮಾಹಿತಿ ನೀಡುವಂತೆ ಭದ್ರತಾ ಸಂಸ್ಥೆಗಳಿಗೆ ಕೇಂದ್ರ ಗೃಹ ಸಚಿವಾಲಯವು ಸೂಚನೆ ನೀಡಿದೆ.
Related Articles
ಕಾಶ್ಮೀರದ ಸೇಬು ವರ್ತಕರು ಈಗ ಜೀವ ಭೀತಿ ಎದುರಿಸುತ್ತಿದ್ದಾರೆ. ಕಳೆದ ಕೆಲವು ದಿನಗಳಿಂದ ಕಾಶ್ಮೀರದಲ್ಲಿ ಇಬ್ಬರು ಸೇಬು ವರ್ತಕರನ್ನು ಉಗ್ರರು ಹತ್ಯೆಗೈದಿದ್ದಾರೆ. ಇದರಿಂದಾಗಿ ಕಾಶ್ಮೀರಕ್ಕೆ ಸೇಬು ಖರೀದಿಸಲು ಆಗಮಿಸುವ ಟ್ರಕ್‌ಗಳ ಸಂಖ್ಯೆಯಲ್ಲಿ ಇಳಿಮುಖವಾಗಿದೆ. ಕಾಶ್ಮೀರದ ಮುಖ್ಯ ವಹಿವಾಟು ಸೇಬು ಆಗಿದ್ದು, ಸೆಪ್ಟೆಂಬರ್‌ನಿಂದ ಡಿಸೆಂಬರ್ ಅವಧಿ ಯಲ್ಲಿ ಸೇಬು ವ್ಯಾಪಾರ ಜೋರಾಗಿ ನಡೆಯು ತ್ತದೆ. ಕಾಶ್ಮೀರದಲ್ಲಿ 2 ಸಾವಿರ ಟ್ರಕ್‌ಗಳಿದ್ದು, ಸೇಬು ಸೀಸನ್ ನಲ್ಲಿ ಸುಮಾರು 8 ಸಾವಿರ ಟ್ರಕ್‌ಗಳಿಂದ ಸೇಬುಗಳನ್ನು ಹೊರ ರಾಜ್ಯಗಳಿಗೆ ಸಾಗಿಸಲಾಗುತ್ತದೆ. ಇದಕ್ಕಾಗಿ ಹೆಚ್ಚಿನ ಪ್ರಮಾಣದಲ್ಲಿ ಹೊರರಾಜ್ಯದಿಂದ ಆಗಮಿಸುವ ಟ್ರಕ್‌ಗಳ ಮೇಲೆಯೇ ಸೇಬು ವ್ಯಾಪಾರ ಅವಲಂಬಿಸಿರುತ್ತದೆ. ಆದರೆ ಇಬ್ಬರು ಸೇಬು ಟ್ರಕ್ ಡ್ರೈವರುಗಳನ್ನೇ ಉಗ್ರರು ಹತ್ಯೆಗೈದಿರುವುದರಿಂದ ಸೇಬು ವಹಿವಾಟಿನ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ. ಅಷ್ಟೇ ಅಲ್ಲ, ಸೇಬು ಸಂಸ್ಕರಣೆ ಹಾಗೂ ಪ್ಯಾಕ್ ಮಾಡಲೂ ಕೂಲಿ ಕಾರ್ಮಿಕರು ಸಿಗದಂಥ ಪರಿಸ್ಥಿತಿ ನಿರ್ಮಾಣವಾಗಿದೆ.
Advertisement