ಕಾಬೂಲ್: ಅಫ್ಘಾನಿಸ್ಥಾನದ ಪಶ್ಚಿಮ ಭಾಗದಲ್ಲಿರುವ ಹೆರಾತ್ ಪ್ರಾಂತ್ಯದಲ್ಲಿ ಸೇನಾಪಡೆ ನಡೆಸಿದ ವೈಮಾನಿಕ ದಾಳಿಯಲ್ಲಿ 45 ಮಂದಿ ಮೃತಪಟ್ಟಿದ್ದಾರೆ.
ಈ ಪೈಕಿ ಎಂಟು ಮಂದಿ ನಾಗರಿಕರೂ ಸೇರಿದ್ದಾರೆ.
ಅದ್ರಾ ಸ್ಕಾನ್ ಜಿಲ್ಲೆಯಲ್ಲಿ ತಾಲಿಬಾನ್ ಉಗ್ರ ಸಂಘಟನೆಯ ಮಾಜಿ ನಾಯಕ ಕಾರಾಗೃಹದಿಂದ ಬಿಡುಗಡೆಯಾಗಿರುವುದನ್ನು ಸಂಭ್ರಮಿಸಲು ಸಾವಿರಾರು ಮಂದಿ ಸೇರಿರುವಾಗಲೇ ಈ ವೈಮಾನಿಕ ದಾಳಿ ನಡೆದಿದೆ.
ಈ ದಾಳಿಯಲ್ಲಿ ಉಗ್ರ ಸಂಘಟನೆಯ ಕೆಲ ನಾಯಕರು ಜೀವ ಕಳೆದುಕೊಂಡಿದ್ದಾರೆ.
ತಾಲಿಬಾನ್ ವಕ್ತಾರ ಕ್ವಾರಿ ಮೊಹಮ್ಮದ್ ಯೂಸುಫ್ ಅಹ್ಮದಿ ಹೇಳಿಕೆ ನೀಡಿ, ಎರಡು ವೈಮಾನಿಕ ದಾಳಿ ನಡೆದಿದೆ. ಅದರಲ್ಲಿ ಎಂಟು ಮಂದಿ ನಾಗರಿಕರು ಅಸುನೀಗಿದ್ದಾರೆ.
ಈ ಘಟನೆಯಲ್ಲಿ 12 ಮಂದಿ ಗಾಯಗೊಂಡಿದ್ದಾರೆ ಎಂದಿದ್ದಾನೆ. ನಾಗರಿಕರು ಅಸುನೀಗಿರುವ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅಫ್ಘಾನಿಸ್ತಾನ ಸರಕಾರ ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದೆ. ಕಾಬೂಲ್‌ನಲ್ಲಿರುವ ಅಮೆರಿಕದ ಶಾಂತಿದೂತ ಝಲ್ಮೆ ಖಲಿಝಾದ್ ವೈಮಾನಿಕ ದಾಳಿಯನ್ನು ಖಂಡಿಸಿದ್ದಾರೆ.