Advertisement
ಈಗ ಮತ್ತೆ ತಾಲಿಬಾನ್ ಮಹಿಳೆಯರಿಗೆ ಮತ್ತೊಂದು ಖಡಕ್ ವಾರ್ನ್ ಮಾಡಿದ್ದು, ತಾಲಿಬಾನ್ ಜೀನ್ಸ್ ಧರಿಸುವುದನ್ನು ನಿಷೇಧಿಸಿದೆ ಮತ್ತು ಹುಡುಗಿಯರು ನೇಲ್ ಪಾಲಿಶ್ ಬಳಸದಂತೆ ಮತ್ತು ಅದರಿಂದ ದೂರವಿರುವಂತೆ ಸೂಚಿಸಿದದ್ದಲ್ಲದೇ, ಈ ಆದೇಶವನ್ನು ಪಾಲಿಸದವರು ಶಿಕ್ಷೆಯನ್ನು ಅನುಭವಿಸಬೇಕಾಗುತ್ತದೆ ಎಂದು ಖಡಕ್ ಆಗಿ ಹೇಳಿರುವುದಾಗಿ ಸುದ್ದಿ ಸಂಸ್ಥೆಗಳು ವರದಿ ಮಾಡಿವೆ.
Related Articles
Advertisement
ಅಫ್ಗಾನ್ ನ ಪತ್ರಿಕೆ ಎಟಿಲಾಟ್ರೋಜ್ ಕೂಡ ಘಟನೆಯ ಬಗ್ಗೆ ವರದಿ ಮಾಡಿದ್ದು, ಸಾಂಪ್ರದಾಯಿಕ ಅಫ್ಘಾನ್ ಬಟ್ಟೆಗಳನ್ನು ಧರಿಸದ ಕಾರಣಕ್ಕಾಗಿ ಪತ್ರಿಕೆ ವರದಿಗಾರನನ್ನು ತಾಲಿಬಾನ್ ಉಗ್ರರು ಹಿಗ್ಗಾಮುಗ್ಗಾ ಥಳಿಸಿದ್ದಾರೆಂದು ವರದಿ ಮಾಡಿದೆ.
ಇನ್ನು, ಕಂದಹಾರ್ ನಲ್ಲಿ, ತಾಲಿಬಾನ್ ಮಹಿಳೆಯರು ಮತ್ತು ಹುಡುಗಿಯರಿಗೆ ಫತ್ವಾ ಹೊರಡಿಸಿದ್ದು, ತಾಲಿಬಾನ್ ಹೊರಡಿಸಿರುವ ಫತ್ವಾದಲ್ಲಿ ನೈಲ್ ಪಾಲಿಶ್ ಹಾಕುವುದನ್ನು ನಿಷೇಧಿಸಲಾಗಿದೆ ಎಂದು ಹೇಳಿದೆ. ಯಾರಾದರೂ ನೈಲ್ ಪಾಲಿಶ್ ಹಾಕಿರುವುದು ಕಂಡುಬಂದರೆ, ಅಂತಹವರ ಬೆರಳುಗಳನ್ನು ಕತ್ತರಿಸಲಾಗುತ್ತದೆ ಎಂದಿದೆ. ಮಾತ್ರವಲ್ಲದೇ, ಮಹಿಳೆಯರಿಗೆ ಪಾದರಕ್ಷೆಗಳನ್ನು ಧರಿಸುವುದರ ಮೇಲೂ ನಿಷೇಧ ಹೇರಿದ್ದು, ಹೀಲ್ ಸ್ಯಾಂಡಲ್ ಗಳನ್ನು ಧರಿಸದಂತೆ ತಾಲಿಬಾನ್ ಖಡಕ್ ವಾರ್ನ್ ಮಾಡಿದೆ.
ಇನ್ನು, ಅಫ್ಗಾನಿಸ್ತಾನದಲ್ಲಿ ತಾಲಿಬಾನ್ ಉಗ್ರರು ಮನ ಬಂದಂತೆ ಮೃಗೀಯ ಧೋರಣೆ ತೋರಿಸುತ್ತಿದ್ದು, ಈಗಾಗಲೇ ಅಫ್ಗಾನಿಸ್ತಾನದ ಹಲವಾರು ಯುವತಿಯರನ್ನು ಅಪಹರಿಸಿ ವಿದೇಶಗಳಲ್ಲಿ ಲೈಂಗಿಕ ದಂಧೆಗೆ ದೂಡುತ್ತಿದ್ದಾರೆ. ಮಾನಸಿಕ ಹಿಂಸೆ ಕೊಟ್ಟು ಬಲವಂತವಾಗಿ ಮದುವೆಯಾಗುತ್ತಿದ್ದಾರೆ ಎಂಬ ವರದಿಗಳು ಆಗುತ್ತಿವೆ. ತಮ್ಮ ಮೊದಲ ಆಡಳಿತದಲ್ಲೂ ತಾಲಿಬಾನ್ ಉಗ್ರರು ಮಹಿಳೆಯರ ಮೇಲೆ ಇದೇ ರೀತಿಯ ದೌರ್ಜನ್ಯ ಎಸಗಿದ್ದರು.
ಇದನ್ನೂ ಓದಿ : ಜಂಕ್ ಫುಡ್ ಬೇಡ, ಸಾಂಪ್ರದಾಯಿಕ ಭಾರತೀಯ ಆಹಾರ ಸೇವಿಸಿ : ವೆಂಕಯ್ಯ ನಾಯ್ಡು