Advertisement
ಕೋಡ್ಕಣಿ ಗ್ರಾಮ ಪಂಚಾಯತದಲ್ಲಿ ಕಪ್ಪೆ ಕೂರ್ವೆ, ಮಾಸೂರುಕೂರ್ವೆ, ಐಗಳಕೂರ್ವೆ ಹಾಗೂ ಬೇಲೆ ಎಂಬ ನಡುಗಡ್ಡೆ ಗ್ರಾಮಗಳಿವೆ. ಈ ಪೈಕಿ ಐಗಳಕೂರ್ವೆ ಹಾಗೂ ಬೇಲೆಯಲ್ಲಿ ಮಾತ್ರ ಜನವಸತಿಯಿದೆ. ಆದರೆ ಜನವಸತಿ ಇಲ್ಲದ ಕಪ್ಪೆ ಕೂರ್ವೆ,ಮಾಸೂರುಕೂರ್ವೆಯ ಭೂಮಾಲಿಕತ್ವ ಹೊಂದಿದ ಗಜನಿಯ ರೈತರಿಗೆ ತಮ್ಮ ಜಮೀನಿಗೆ ಸಂಬಂಧಿ ಸಿಯಾವುದೇ ಸೌಲಭ್ಯಗಳೂ ದೊರೆಯುತ್ತಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.
ಸರಕಾರದ ಸೌಲಭ್ಯಗಳ ಬಳಕೆಯಲ್ಲಿ ವಿಚಿತ್ರ ಸ್ಥಿತಿ ನಿರ್ಮಾಣವಾಗಿದೆ ಎಂದು ಅಧಿಕಾರಿಗಳು ತಿಳಿಸುತ್ತಾರೆ. ಈ ಕೃಷಿ ಭೂಮಿಯಲ್ಲಿ ವ್ಯವಸಾಯಕ್ಕಾಗಿ ಸರ್ಕಾರದ ಸಹಕಾರವನ್ನು ಯಾಚಿಸಿದರೆ ಆ ಅರ್ಜಿಗಳು ತಿರಸ್ಕೃತವಾಗುತ್ತಲೇ ಬಂದಿವೆ. ಕೃಷಿ ಯೋಜನೆಗೆ
ಬೇಕಾದ ದಾಖಲಾತಿಗಳನ್ನು ಸಲ್ಲಿಸುವಾಗ ವಾಸ್ತವ್ಯದ ಮನೆ ನಂಬರ್ ಒಂದು ಪಂಚಾಯತಕ್ಕೆ ಸೇರಿದರೆ ಜಮೀನು ಇನ್ನೊಂದು ಪಂಚಾಯತಕ್ಕೆ ಸೇರಿದೆ.
Related Articles
Advertisement
ಎನ್.ಆರ್.ಇ.ಜಿ ಮತ್ತಿತರ ವಿವಿಧ ಯೋಜನೆಯ ಸೌಲಭ್ಯ ಪಡೆಯಲು ಕೋಡ್ಕಣಿ ಗ್ರಾಪಂ ವ್ಯಾಪ್ತಿಯಲ್ಲಿನ ರೈತರ ಜಮೀನುಗಳನ್ನುಅವರ ವಾಸ್ತವ್ಯವಿರುವ ಕಾಗಾಲ, ಬಾಡ ಹಾಗೂ ಹೆಗಡೆ ಗ್ರಾಪಂ ವ್ಯಾಪ್ತಿಗೆ ಸೇರಿಸುವುದೊಂದೇ ದಾರಿ ಉಳಿದಿದೆ. ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ 1993ರ ಅಧ್ಯಾಯ 3 ರನ್ವಯ ಯಾವುದೇ ಗ್ರಾಪಂ ವ್ಯಾಪ್ತಿಯಲ್ಲಿನ ಪ್ರದೇಶವನ್ನು ಇನ್ನೊಂದು ಗ್ರಾಪಂ ವ್ಯಾಪ್ತಿಗೆ ಸೇರಿಸುವ ಹಾಗೂ ಘೋಷಿಸುವ ಅಧಿಕಾರವು ಜಿಲ್ಲಾಧಿಕಾರಿಗಳಿಗೆ ಇರುವುದರಿಂದ ಈ ನಿಟ್ಟಿನಲ್ಲಿ ಕ್ರಮವಾಗಲಿ ಎಂದು ಆಗ್ರಹಿಸಿ ರೈತರು ಮನವಿ ಸಲ್ಲಿಸುತ್ತಲೇ ಬಂದಿದ್ದಾರೆ. ಈ ಪ್ರದೇಶವನ್ನು ಪ್ರವಾಸಿ ತಾಣವಾಗಿ ಅಭಿವೃದ್ಧಿ ಪಡಿಸಬಹುದು. ಕೃಷಿ ಕಾರ್ಯಚಟುವಟಿಕೆಗಳಿಗೆ ಬೇಕಾದ ಯಂತ್ರೋಪಕರಣಗಳನ್ನು ನೀಡಬೇಕು. ಗಜನಿಗಳಿಗೆ ರಕ್ಷಣಾ ಗೋಡೆ ನಿರ್ಮಿಸಬೇಕು. ಮಾಸೂರಿನಿಂದ ಶ್ರೀ ಬಬ್ರುಲಿಂಗೇಶ್ವರ ದೇವಸ್ಥಾನಕ್ಕೆ ತೂಗುಸೇತುವೆ ನಿರ್ಮಿಸಬೇಕು. ಎಲ್ಲ ಕೃಷಿ ಸೌಲಭ್ಯವನ್ನು ಒದಗಿಸಬೇಕು.
ಜಿ.ಕೆ. ಪಟಗಾರ ಕಾಗಾಲ, ರೈ ಶಂಕರ ಶರ್ಮಾ