Advertisement

ಎಎಫ್ ಸಿ ಏಶ್ಯನ್‌ ಕಪ್‌ ಫ‌ುಟ್‌ಬಾಲ್‌ ಭಾರತಕ್ಕೆ ಆತಿಥೇಯ ಯುಎಇ ಸವಾಲು

12:30 AM Jan 10, 2019 | |

ಅಬುಧಾಬಿ: ಎಎಫ್ ಸಿ ಏಶ್ಯನ್‌ ಕಪ್‌ ಫ‌ುಟ್‌ಬಾಲ್‌ ಕೂಟದ ಮೊದಲ ಪಂದ್ಯದಲ್ಲಿ ಥಾಯ್ಲೆಂಡ್‌ ವಿರುದ್ಧ ಜಯಿಸಿರುವ ಭಾರತ, ಗುರುವಾರ ಅತಿಥೇಯ ಯುನೈಟೆಡ್‌ ಅರಬ್‌ ಎಮಿರೇಟ್ಸ್‌ ತಂಡವನ್ನು ಎದುರಿಸಲು ಸಜ್ಜಾಗಿದೆ.ಗುರುವಾರ “ಸಯ್ಯದ್‌ ನ್ಪೋರ್ಟ್ಸ್ ಸಿಟಿ ಸ್ಟೇಡಿಯಂ’ನಲ್ಲಿ ನಡೆಯಲಿರುವ ಈ ಪಂದ್ಯ ಎರಡು ತಂಡಗಳಿಗೂ ಮಹತ್ವದ್ದಾಗಿದೆ. 

Advertisement

ಬೆಹ್ರೈನ್‌ ತಂಡದ ವಿರುದ್ಧ ಮೊದಲ ಪಂದ್ಯವನ್ನು ಡ್ರಾ ಮಾಡಿಕೊಂಡು ನಿರಾಶದಾಯಕ ಆರಂಭ ಪಡೆದ ಯುಎಇ ಟ್ರ್ಯಾಕ್‌ಗೆ ಬರಬೇಕಿದೆ. ಅಲ್ಲದೆ ಯುಎಇ ತಂಡಕ್ಕಿದು ತವರಿನ ಪಂದ್ಯ. ಹೀಗಾಗಿ ಫೇವರೆಟ್‌ ತಂಡವಾದರೂ ಒತ್ತಡ ಜಾಸ್ತಿಯಾಗಿದೆ.

ಥಾಯ್ಲೆಂಡನ್ನು ಮಣಿಸಿದ ಉತ್ಸಾಹದಲ್ಲಿರುವ ಸುನೀಲ್‌ ಚೆಟ್ರಿ ಪಡೆ ಯುಎಇಯನ್ನೂ ಸೋಲಿಸಿದರೆ ಹೆಚ್ಚಿನ ಆತ್ಮವಿಶ್ವಾಸದಿಂದ ಮುಂದಿನ ಸವಾಲನ್ನು ಎದುರಿಸಬಹುದಾಗಿದೆ. ಆದರೆ ಥಾಯ್ಲೆಂಡ್‌ ತಂಡಕ್ಕೆ ಹೋಲಿಸಿದರೆ ಯುಎಇ ಹೆಚ್ಚು ಬಲಿಷ್ಠ ತಂಡವಾಗಿ ಗೋಚರಿಸುತ್ತಿದೆ. ಅಲ್ಲದೇ ಅರಬ್‌ ತಂಡದ ವಿರುದ್ಧ ಭಾರತದ ದಾಖಲೆ ಉತ್ತಮವಾಗೇನೂ ಇಲ್ಲ.

ಯುಎಇ ತಂಡದ ಆಟವನ್ನು ಮೊದಲೇ ಅರಿತು ಆಡಿದರೆ ಭಾರತಕ್ಕೆ ಹೆಚ್ಚಿನ ಪ್ರಯೋಜನವಾಗಬಹುದು. ದೊಡ್ಡ ಮಟ್ಟದ ಗೆಲುವಲ್ಲದಿದ್ದರೂ ಪಂದ್ಯ ಡ್ರಾಗೊಂಡರೂ ಭಾರತಕ್ಕೆ ಇದು ಉತ್ತಮ ಫ‌ಲಿತಾಂಶವಾಗಲಿದೆ. “ಎ’ ಗುಂಪಿನಲ್ಲಿ ಅಗ್ರಸ್ಥಾನವನ್ನು ಭದ್ರಪಡಿಸಿಕೊಳ್ಳಲು ಈ ಫ‌ಲಿತಾಂಶ ನೆರವಾಗಲಿದೆ. ಆಗ ಭಾರತ 55 ವರ್ಷಗಳ ಬಳಿಕ ಎಎಫ್ಸಿ ಏಶ್ಯನ್‌ ಕಪ್‌ ಕೂಟದಲ್ಲಿ ಮುಂದಿನ ಸುತ್ತು ಪ್ರವೇಶಿಸಿದ ಹೆಗ್ಗಳಿಕೆಗೆ ಪಾತ್ರವಾಗಲಿದೆ.

ಇತಿಹಾಸ ಯುಎಇ ಪರ
ಯುಎಇ ವಿರುದ್ಧ ಭಾರತ ಈವರೆಗೆ ಒಟ್ಟು 13 ಪಂದ್ಯಗಳನ್ನು ಆಡಿದ್ದು, ಎರಡರಲ್ಲಷ್ಟೇ ಗೆದ್ದಿದೆ. ಎಂಟರಲ್ಲಿ ಸೋಲನುಭವಿಸಿದೆ. 3 ಪಂದ್ಯಗಳನ್ನು ಡ್ರಾ ಮಾಡಿಕೊಂಡಿದೆ. ಏಶ್ಯನ್‌ ಕಪ್‌ ಕೂಟದಲ್ಲಂತೂ 4 ಬಾರಿ ಯುಎಇಯನ್ನು ಎದುರಿಸಿರುವ ಭಾರತ ಒಂದರಲ್ಲೂ ಗೆಲುವು ದಾಖಲಿಸಿಲ್ಲ. ಎಲ್ಲ 4 ಪಂದ್ಯಗಳನ್ನೂ ಸೋತಿದೆ. ಇತಿಹಾಸವನ್ನು ಗಮನಿಸಿದರೆ ಭಾರತದ ಪಾಲಿಗೆ ಇದು ಕಠಿನ ಪಂದ್ಯವಾಗಬಹುದು.

Advertisement
Advertisement

Udayavani is now on Telegram. Click here to join our channel and stay updated with the latest news.

Next