Advertisement

ಸೋಲಿನ ಭೀತಿಯಲ್ಲಿ ಕಾಂಗ್ರೆಸ್‌ ಹತಾಶ

11:48 AM Apr 08, 2019 | Naveen |

ಅಫಜಲಪುರ: ಒಂಭತ್ತು ಬಾರಿ ವಿಧಾನಸಭೆ, ಎರಡು ಬಾರಿ ಲೋಕಸಭೆಗೆ ಆಯ್ಕೆಯಾಗಿ ಯಾವುದೇ ಅಭಿವೃದ್ಧಿ ಮಾಡದ ಮಲ್ಲಿಕಾರ್ಜುನ ಖರ್ಗೆ ಹಾಗೂ ಕಾಂಗ್ರೆಸ್ಸಿಗರಿಗೆ ಈಗ ಸೋಲಿನ ಭಯ ಶುರುವಾಗಿ, ಹತಾಶರಾಗಿದ್ದಾರೆ ಎಂದು ಬಿಜೆಪಿ ಅಭ್ಯರ್ಥಿ ಡಾ| ಉಮೇಶ ಜಾಧವ ಹೇಳಿದರು.

Advertisement

ಪಟ್ಟಣದ ಶಾರದಾ ಕಲ್ಯಾಣ ಮಂಟಪದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಕಲಬುರಗಿ ಯಾವ ರೀತಿಯ ಅಭಿವೃದ್ಧಿಯನ್ನು ಕಂಡಿಲ್ಲ. 45 ವರ್ಷ ಅಧಿ ಕಾರದಲ್ಲಿದ್ದರೂ ಕಲಬುರಗಿ ಹಿಂದುಳಿಯಲು ಖರ್ಗೆ ಕಾರಣವಾಗಿದ್ದಾರೆ. ಸೋಲಿಲ್ಲದ ಸರದಾರ, ಅಭಿವೃದ್ಧಿ ಹರಿಕಾರ ಎಂದು ತಮ್ಮನ್ನು ತಾವು ಕರೆದುಕೊಳ್ಳುವ ಖರ್ಗೆ ಅವರು ಅಭಿವೃದ್ಧಿ ಹೆಸರಲ್ಲಿ ಮತ ಕೇಳುತ್ತಿದ್ದೇನೆ ಎನ್ನುವುದೇ ಹಾಸ್ಯಾಸ್ಪದ ಸಂಗತಿಯಾಗಿದೆ. ಅವರು ಅಭಿವೃದ್ಧಿ ಮಾಡಿದ್ದರೆ ಕಲಬುರಗಿ ಯಾಕೆ ಇಷ್ಟೊಂದು ಹಿಂದುಳಿಯುತ್ತಿತ್ತು ಎಂದು ಪ್ರಶ್ನಿಸಿದರು.

ಜನರಿಗೆ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸದವರು ಅಭಿವೃದ್ಧಿ ಹರಿಕಾರ ಹೇಗಾಗುತ್ತಾರೆ? ಇಂತ ಸುಳ್ಳಿನ ಸರದಾರನಿಗೆ ಈ ಬಾರಿ ಮತದಾರರು ತಕ್ಕ ಪಾಠ ಕಲಿಸಲಿದ್ದಾರೆ ಎಂದರು. 11 ಬಾರಿ ಮಲ್ಲಿಕಾರ್ಜುನ ಖರ್ಗೆ ಅವರು ಮುಗª ಮತದಾರರನ್ನು ಮರಳು ಮಾಡಿ ಅ ಧಿಕಾರ ಅನುಭವಿಸಿ ಅಭಿವೃದ್ಧಿ ಮಾಡದೆ ಕುಟುಂಬದ ಆದಾಯ ಹೆಚ್ಚಿಸಿಕೊಂಡಿದ್ದಾರೆ. 45ರಿಂದ 50 ವರ್ಷಗಳ ಕಾಲ ಅ ಧಿಕಾರ ಅನುಭವಿಸಿಯೂ ಅಭಿವೃದ್ಧಿ ಮಾಡಿಲ್ಲ.

ನನಗೊಂದು ಅವಕಾಶ ಕೊಟ್ಟು ನೋಡಿ 45 ವರ್ಷಗಳಿಂದ ಆಗದ ಅಭಿವೃದ್ಧಿಯನ್ನು ಕೇವಲ ಐದು ವರ್ಷಗಳಲ್ಲಿ ಮಾಡಿ ತೋರಿಸಿ,
ಮಾತು ಉಳಿಸಿಕೊಳ್ಳುತ್ತೇನೆ. ಅಲ್ಲದೇ ಈಗಾಗಲೇ ಕಾಂಗ್ರೆಸ್‌ನವರಿಗೆ
ಭಯ ಶುರುವಾಗಿದೆ. ಹೀಗಾಗಿ ಹಿಂಬಾಗಿಲಿನಿಂದ ನನ್ನನ್ನು ಸೋಲಿಸುವ ಪ್ರಯತ್ನ ನಡೆಸಿದ್ದಾರೆ ಎಂದು ಆರೋಪಿಸಿದರು. ಮಾಜಿ ಸಚಿವರಾದ ಮಾಲೀಕಯ್ಯ ಗುತ್ತೇದಾರ ಮಾತನಾಡಿ, ಸೋಲಿಲ್ಲದ ಸರದಾರನನ್ನು ಸೋಲಿಸುವುದೇ ನಮ್ಮ ಮೊದಲ ಗುರಿಯಾಗಿದೆ. ಲೋಕಸಭೆ ಚುನಾವಣೆ ಬಳಿಕ ರಾಜ್ಯ ಸಮ್ಮಿಶ್ರ ಸರ್ಕಾರ ಪತನವಾಗಲಿದೆ. ಮತ್ತೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ಯಡಿಯೂರಪ್ಪ ಮುಖ್ಯಮಂತ್ರಿ ಆಗಲಿದ್ದಾರೆ ಎಂದರು.

ಶಾಸಕ ದತ್ತಾತ್ರೇಯ ಪಾಟೀಲ, ಮುಖಂಡ ದೊಡ್ಡಪ್ಪಗೌಡ ಪಾಟೀಲ ನರಿಬೋಳ ಜಂಟಿಯಾಗಿ ಮಾತನಾಡಿ, ಕಾಂಗ್ರೆಸ್‌ ನಾಯಕರು ಸೋಲಿನ ಹತಾಶೆಯಲ್ಲಿ ತೀರಾ ಕೀಳುಮಟ್ಟದ ರಾಜಕೀಯ ಮಾಡುತ್ತಿದ್ದಾರೆ. ಬಿಜೆಪಿ ಬೆಂಬಲಿಗರನ್ನು ಅಪಹರಿಸಿ
ಹಲ್ಲೆ ಮಾಡುವುದು, ಹಿಂಬಾಗಿಲಿನಿಂದ ಮೋಸದ ರಾಜಕೀಯ ಮಾಡುವುದನ್ನು ಮಾಡುತ್ತಿದ್ದಾರೆ. ಇದರ ವಿರುದ್ಧ ನಾವು ಚುನಾವಣಾ ಆಯೋಗಕ್ಕೆ ದೂರು ನೀಡುತ್ತೇವೆ ಎಂದರು. ಜಿಲ್ಲೆಯ ರಾಜಕೀಯದಲ್ಲಿ ದಿ. ಚಂದ್ರಶೇಖರ ಪಾಟೀಲ ರೇವೂರ (ಬಿ),ಮಾಲೀಕಯ್ಯ ಗುತ್ತೇದಾರ ನೇರ ನುಡಿಯ ಜನನಾಯಕರಾಗಿದ್ದಾರೆ. ಅವರು ನುಡಿದಂತೆ ನಡೆದವರು, ಹೀಗಾಗಿಯೇ ಅವರನ್ನು ಕಂಡರೆ ಬಹಳಷ್ಟು ಮಂದಿಗೆ ಭಯವಿದೆ
ಎಂದರು.

Advertisement

ಮಂಡಲ ಅದ್ಯಕ್ಷ ಸೂರ್ಯಕಾಂತ ನಾಕೇದಾರ, ಮಾಜಿ ಮಂತ್ರಿ ಎ.ಬಿ ಮಾಲಕರೆಡ್ಡಿ, ಸುಶೀಲ ನಮೋಶಿ, ನಿತೀನ್‌ ಗುತ್ತೇದಾರ, ಗೋವಿಂದ ಭಟ್‌, ರಮೇಶ ನಿಲಗಾರ, ಅಶೋಕ ಬಗಲಿ, ಸುನೀಲ್‌
ಶೆಟ್ಟಿ, ಬಸವರಾಜ ಸಪ್ಪನಗೋಳ, ಶಂಕು ಮ್ಯಾಕೇರಿ ಹಾಗೂ ಇತರರು ಇದ್ದರು.

ದೇವೇಗೌಡ ಮಕ್ಕಳು, ಮೊಮ್ಮಕ್ಕಳಿಗಾಗಿ ಕಣ್ಣೀರು ಹಾಕಿ ಮತ ಕೇಳುತ್ತಾರೆ, ಕಲಬುರಗಿಯಲ್ಲಿ ಖರ್ಗೆ ಎಲ್ಲ ಹಿರಿಯರು, ಶಾಸಕರು, ಸಚಿವರನ್ನು ತುಳಿದು ತನ್ನ ಮಗನನ್ನು ಸಚಿವರನ್ನಾಗಿಸಿ ಅಧಿ ಕಾರ ಅನುಭವಿಸುತ್ತಾರೆ. ಹೀಗಾಗಿ ಈ ಬಾರಿ ಲೋಕಸಭೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭಾರಿ ಅಂತರದಲ್ಲಿ ಮತದಾರರು ಸೋಲಿಸಲಿದ್ದಾರೆ. ಇತಿಹಾಸದಲ್ಲಿ ಖರ್ಗೆ ಮೊದಲ ಬಾರಿಗೆ ಸೋತು ಮನೆ ಹಿಡಿಯಲಿದ್ದಾರೆ.
ಸಸಬಾಬುರಾವ ಚಿಂಚನಸೂರ,
ಮಾಜಿ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next