ಅಫಜಲಪುರ: ಕಳೆದ ವರ್ಷ ಮಳೆಗಾಲದಲ್ಲಿ ಮುಂಗಾರು ಮತ್ತು ಹಿಂಗಾರು ಕೈಕೊಟ್ಟಿದ್ದರಿಂದ ಅಂತರ್ಜಲ ಮಟ್ಟ ಕುಸಿತವಾಗಿ ಕುಡಿಯುವ ನೀರಿಗಾಗಿ ಜನ ಪರದಾಡುವಂತಾಗಿದೆ.
Advertisement
ತಾಲೂಕಿನ ಚವಡಾಪುರ ಗ್ರಾಮ, ಚವಡಾಪುರ ತಾಂಡಾ ಹಾಗೂ ರೇವೂರ (ಕೆ), ಹೊಸೂರ, ಗೊಬ್ಬೂರ (ಬಿ), ಸ್ಟೇಷನ್ ಗಾಣಗಾಪುರ, ರೇವೂರ (ಬಿ), ದೇವಲ ಗಾಣಗಾಪುರ, ಕೋಗನೂರ, ಬಳೂರ್ಗಿ, ಅಂಕಲಗಾ, ಚಿಂಚೋಳಿ, ಮಾತೋಳಿ, ಹಳೀಯಾಳ ಸೇರಿದಂತೆ ತಾಲೂಕಿನ ಬಹುತೇಕ ಗ್ರಾಮಗಳಲ್ಲೀಗ ಜಲಕ್ಷಾಮ ಉಂಟಾಗಿದೆ. ಇದರಿಂದಾಗಿ ಜನರು ಕುಡಿಯುವ ನೀರಿಗಾಗಿ ಪರದಾಡಿ ಸುಸ್ತಾಗಿದ್ದಾರೆ. ಮೈಲುಗಟ್ಟಲೆ ಅಲೆಯಬೇಕು ಹೊಲಗದ್ದೆ: ಅಂತರ್ಜಲ ಮಟ್ಟ ಕುಸಿತದಿಂದ ಗ್ರಾಮಗಳಲ್ಲಿರುವ ನೀರಿನ ಮೂಲಗಳೆಲ್ಲ ಖಾಲಿಯಾಗಿವೆ. ಅಂತರ್ಜಲ ಮಟ್ಟ ಕುಸಿದು ಹನಿ ನೀರೂ ಬಾರದಂತ ಪರಿಸ್ಥತಿ ನಿರ್ಮಾಣವಾಗಿದೆ. ಜನ ಸಾಮಾನ್ಯರು ನೀರಿಗಾಗಿ ಮೈಲಿಗಟ್ಟಲೆ ಅಲೆದಾಡಿ, ಹೊಲ ಗದ್ದೆ ತುಳಿದು ನೀರು ಹೊತ್ತು ತರುವಂತ ಪರಿಸ್ಥಿತಿ ನಿರ್ಮಾಣವಾಗಿದೆ.
Related Articles
Advertisement
ಪ್ಲಾಸ್ಟಿಕ್ ಕೊಡಗಳ ಖರೀದಿ ಜೋರು: ದೂರದಿಂದ ನೀರು ಹೊತ್ತು ತಂದು ಸಂಗ್ರಹಿಸಿಡುವ ಕೆಲಸ ಜನಸಾಮಾನ್ಯರಿಗೆ ತಲೆ ನೋವಾಗಿದೆ. ನೀರು ಸಂಗ್ರಹಿಸಿಡಲು ಜನತೆ ಪ್ಲಾಸ್ಟಿಕ್ ಕೊಡಗಳ ಮೊರೆ ಹೋಗಿದ್ದಾರೆ. ಅಗತ್ಯಕ್ಕೂ ಮಿರಿ ಪ್ಲಾಸ್ಟಿಕ್ ಕೊಡಗಳನ್ನು ಖರೀದಿಸಿ ನೀರು ಸಂಗ್ರಹಿಸಿಟ್ಟುಕೊಳ್ಳುತ್ತಿದ್ದಾರೆ. ಹೀಗಾಗಿ ಕೊಡಗಳ ಮಾರಾಟ ಜೋರಾಗಿ ನಡೆದಿದೆ.