Advertisement

ಭೀಮಾ ನದಿ ದಂಡೆಯ ಜನ ಜಾಗೃತವಾಗಿರಲು ಸೂಚನೆ

06:01 PM Jul 06, 2020 | Naveen |

ಅಫಜಲಪುರ: ಮಹಾರಾಷ್ಟ್ರದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗುತ್ತಿದ್ದು, ಅಲ್ಲಿನ ಜಲಾಶಯಗಳು ಭರ್ತಿಯಾಗಿ ಹೆಚ್ಚಾದ ನೀರನ್ನು ಯಾವುದೇ ಸಂದರ್ಭಲ್ಲಿ ಭೀಮಾ ನದಿಗೆ ನೀರು ಬರಬಹುದು. ಹೆಚ್ಚುವರಿ ನೀರು ಬಂದರೆ ಪ್ರವಾಹ ಉಂಟಾಗಲಿದೆ. ಹೀಗಾಗಿ ತಾಲೂಕಿನ ಭೀಮಾ ನದಿ ಪಾತ್ರದ ಜನರು ಜಾಗೃತೆಯಿಂದ ಇರುವಂತೆ ಭೀಮಾ ಏತ ನೀರಾವರಿ ಯೋಜನೆ ವಿಭಾಗದ ಇಇ ಅಶೋಕ ಕಲಾಲ್‌ ಸೂಚಿಸಿದ್ದಾರೆ.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಭೀಮಾ ನದಿಗೆ ಯಾವುದೇ ಕ್ಷಣದಲ್ಲೂ ಮಹಾರಾಷ್ಟ್ರದ ನೀರು ಬರುವ ಸಾಧ್ಯತೆ ಇದೆ. ಹೀಗಾಗಿ ನದಿ ದಂಡೆಯಲ್ಲಿರುವ ಗ್ರಾಮಗಳ ಜನರು ಜಾಗೃತೆಯಿಂದ ಇರಬೇಕು, ಜನ ನದಿ ದಡಕ್ಕೆ ಹೋಗಬಾರದು, ದನ ಮೇಯಿಸುವುದು, ಮೀನುಗಾರಿಕೆ ಮಾಡುವುದು ಸದ್ಯಕ್ಕೆ ಬೇಡ ಎಂದಿದ್ದಾರೆ. ಇನ್ನು ಸೊನ್ನ ಬ್ಯಾರೇಜ್‌ ಕೆಳಗಡೆ ಇರುವ ಘತ್ತರಗಿ, ದೇವಲ ಗಾಣಗಾಪುರ, ಚಿನಮಳ್ಳಿ ಬ್ಯಾರೇಜ್‌ಗಳು ಸುಸ್ಥಿತಿಯಲ್ಲಿರುವಂತೆ ನೋಡಿಕೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಈಗಾಗಲೇ ಬ್ಯಾರೇಜ್‌ ವ್ಯಾಪ್ತಿಯ ಅಳ್ಳಗಿ(ಬಿ) ಮತ್ತು ಬಳ್ಳೂಂಡಗಿ ಏತ ನೀರಾವರಿ ಮುಖ್ಯ ಕಾಲುವೆ, ಉಪಕಾಲುವೆಗಳಿಗೆ ನೀರು ಹರಿಸಲಾಗುತ್ತಿದ್ದು ರೈತರು ಉಪಯೋಗ ಪಡೆದುಕೊಳ್ಳಬೇಕೆಂದು ಮನವಿ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next