Advertisement

ಸೇನೆಗೆ ಮತ್ತಷ್ಟು ಬಲ: ಭಾರತೀಯ ವಾಯುಪಡೆಗೆ ಸೇರ್ಪಡೆಯಾಗಲಿವೆ ಮತ್ತೆ 3 ರಫೇಲ್ ಯುದ್ಧ ವಿಮಾನ

10:28 PM Nov 03, 2020 | sudhir |

ನವದೆಹಲಿ: ಲಡಾಖ್‌ ಗಡಿಯಲ್ಲಿ ಚೀನಾದ ಜತೆಗೆ ಬಿಕ್ಕಟ್ಟು ಮುಂದುವರಿದಿರುವಂತೆಯೇ ಭಾರತೀಯ ವಾಯುಪಡೆಗೆ ಮತ್ತಷ್ಟು ಬಲ ನೀಡುವಂತೆ ಇನ್ನೂ ಮೂರು ರಫೇಲ್‌ ಯುದ್ಧ ವಿಮಾನಗಳು ಬುಧವಾರ ಸಂಜೆ ಭಾರತಕ್ಕೆ ಬಂದಿಳಿಯಲಿದೆ. ಬುಧವಾರ ಬೆಳಗ್ಗೆ ಫ್ರಾನ್ಸ್‌ನಿಂದ ಟೇಕ್‌ ಆಫ್ ಆಗುವ ವಿಮಾನಗಳು ಸಂಜೆ ತಲುಪಲಿವೆ ಎಂದು ಮೂಲಗಳು ತಿಳಿಸಿವೆ.

Advertisement

ಮೊದಲ ಬ್ಯಾಚ್‌ನಲ್ಲಿ 5 ರಫೇಲ್‌ ಯುದ್ಧ ವಿಮಾನಗಳು ಜುಲೈ 28ರಂದು ಹರ್ಯಾಣದ ಅಂಬಾಲಾ ವಾಯುನೆಲೆ ತಲುಪಿದ್ದು, ಸೆ.10ರಂದು ಅದನ್ನು ವಾಯುಪಡೆಗೆ ಅಧಿಕೃತವಾಗಿ ಸೇರ್ಪಡೆ ಮಾಡಲಾಗಿತ್ತು. ಈಗ ಹೊಸದಾಗಿ 3 ವಿಮಾನಗಳು ಬರುವ ಕಾರಣ, ವಾಯುಪಡೆಗೆ 8 ರಫೇಲ್‌ ಫೈಟರ್‌ ಜೆಟ್‌ಗಳ ಬಲ ಬಂದಂತಾಗಲಿದೆ.

ಇದನ್ನೂ ಓದಿ:ಕಾವೂರು: ಚೂರಿಯಿಂದ ಇರಿದು ಮಲ್ಲಿ ಲೇಔಟ್ ನಿವಾಸಿಯ ಬರ್ಬರ ಹತ್ಯೆ!

ಒಟ್ಟು 36 ರಫೇಲ್‌ ವಿಮಾನಗಳು 2022ರ ಮಧ್ಯದಲ್ಲಿ ಭಾರತವನ್ನು ತಲುಪಲಿದೆ. 2016ರಲ್ಲಿ ಎನ್‌ಡಿಎ ಸರ್ಕಾರ 60 ಸಾವಿರ ಕೋಟಿ ರೂ. ಮೊತ್ತದ ಈ ಒಪ್ಪಂದಕ್ಕೆ ಸಹಿ ಹಾಕಿತ್ತು.

Advertisement

Udayavani is now on Telegram. Click here to join our channel and stay updated with the latest news.

Next