Advertisement

 ಏರೊಫಿಲಿಯಾ-2018 ರಾಷ್ಟ್ರೀಯ  ಮಟ್ಟದ ಸ್ಪರ್ಧೆ

03:06 PM Jan 27, 2018 | |

ಮಹಾನಗರ: ಅಡ್ಯಾರಿನಲ್ಲಿರುವ ಸಹ್ಯಾದ್ರಿ ಕಾಲೇಜಿನ ಬಾನಂಗಳದಲ್ಲಿ ಶುಕ್ರವಾರ ಲೋಹದ ಹಕ್ಕಿಗಳ ಮಾದರಿ ಪ್ರದರ್ಶನ ಜೋರಾಗಿತ್ತು. ಆಗಾಗ ಬಾನಂಗಳದಲ್ಲಿ ಹಾರಾಟ ನಡೆಸುವ ರಿಮೋಟ್‌ ವಿಮಾನ ನೆರೆದಿದ್ದ ಪ್ರೇಕ್ಷಕರನ್ನು ಆಕರ್ಷಿಸಿತ್ತು. ಇದಕ್ಕೆ ಸಾಕ್ಷಿಯಾದದ್ದು ಕಾಲೇಜಿನಲ್ಲಿ 2 ದಿನಗಳ ಕಾಲ ಆಯೋಜಿಸಿದ್ದ ಏರೊಫಿಲಿಯಾ- 2018 ರಾಷ್ಟ್ರೀಯ ಮಟ್ಟದ ಸ್ಪರ್ಧೆ. ಏರೋ ಮಾದರಿ ಸ್ಪರ್ಧೆಯಲ್ಲಿ ವಿವಿಧ ಪ್ರೌಢಶಾಲಾ ವಿಭಾಗದಿಂದ ಎಂಜಿನಿಯರಿಂಗ್‌ ಕಾಲೇಜು ವಿದ್ಯಾರ್ಥಿಗಳು ತಾವು ತಯಾರಿಸಿದ ವಿಮಾನ ಮಾದರಿಯನ್ನು ಪ್ರದರ್ಶಿಸಿದರು.

Advertisement

2.75 ಲಕ್ಷ ರೂ. ಬಹುಮಾನ
ಕಾರ್ಯಕ್ರಮದಕ್ಕೆ ಆಗಮಿಸಿದ ವಿದ್ಯಾರ್ಥಿ ಮತ್ತು ಸಾರ್ವಜನಿಕರೊಂದಿಗೆ ಗಣಿತ, ಇತಿಹಾಸ, ಕಲೆ, ಗ್ರಾಫಿಕ್ಸ್‌ ಹಾಗೂ ವಿಜ್ಞಾನದಲ್ಲಿ ತಮ್ಮ ಅನುಭವಗಳನ್ನು ಸ್ಪರ್ಧಿಗಳು ಹಂಚಿಕೊಂಡರು. ಏರೊಫಿಲಿಯಾ 2018ರ ಸ್ಪರ್ಧೆಯಲ್ಲಿ ವಿಜೇತರಾದವರಿಗೆ 2.75 ಲಕ್ಷ ರೂ. ನಗದು ಬಹುಮಾನ ನೀಡಲಾಗುತ್ತಿದ್ದು, ಭಾರತದ ಪ್ರಸಿದ್ಧ ಡ್ರೋಣ್‌ ಸ್ಪರ್ಧೆಗೆ 50 ಸಾವಿರ ರೂ. ನಗದು ಬಹುಮಾನ ನೀಡಲಾಗುವುದು.

ವಿದ್ಯಾರ್ಥಿಗಳು ತಯಾರಿಸಿದ ವಿವಿಧ ಮಾದರಿಯ ಏರ್‌ ಕ್ರಾಫ್ಟ್‌ನ ಮಾದರಿಗಳನ್ನು ವಿದ್ಯುತ್‌ಚಾಲಿತ ವ್ಯವಸ್ಥೆಯಲ್ಲಿ ರಿಮೋಟ್‌ ಕಂಟ್ರೋಲ್‌ ಮೂಲಕ ಪ್ರದರ್ಶಿಸಿದರು. ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದ ರೇಡಿಯೊ ಫೈಯರ್ಗಳು ಭಾಗವಹಿಸಿದ್ದು, ಸ್ಪರ್ಧೆಯ ವಿಶೇಷ ಆಕರ್ಷಣೆ.

ತಾಂತ್ರಿಕ ಚರ್ಚೆ
ಆರ್‌ಸಿ ಮಾಡೆಲಿಂಗ್‌ ಬಗ್ಗೆ ಅತಿಥಿಗಳಿಂದ ತಾಂತ್ರಿಕವಾಗಿ ಚರ್ಚೆ ನಡೆಯಿತು. ಈ ಬಾರಿ ಟೆಕ್ಸಾಸ್‌, ಲೇಕ್‌ ಲ್ಯಾಂಡ್‌. ಯುಎಸ್‌ಎ, ಫ್ಲೊರಿಡಾ ದೇಶಗಳಲ್ಲಿ ನಡೆದ ಎಸ್‌ಎಇ ಅಂತಾರಾಷ್ಟ್ರೀಯ ಏರೊ ಮಾಡೆಲಿಂಗ್‌ ಸ್ಪರ್ಧೆಗಳಲ್ಲಿ ಭಾಗವಹಿಸಿ ಅನುಭವ ಪಡೆದಿರುವ ತಂಡದ ಸದಸ್ಯರ ತಂಡ ಟೀಮ್‌ ಚಾಲೆಂಜರ್ಸ್‌ನಲ್ಲಿ ಇದೆ.

ಸ್ಪರ್ಧೆಯಲ್ಲಿನ ಆಕರ್ಷಣೆ
ಭಾರತ ಮತ್ತು ದುಬೈಗಳ 5 ವೃತ್ತಿಪರ ತಂಡಗಳಿಂದ ಫಕ್ಸ್ಡ್ ವಿಂಗ್‌, 3ಡಿ ಹೆಲಿಕಾಫ್ಟರ್‌ ಏರ್‌ ಶೋ ಪ್ರದರ್ಶನ, ಡಿಆರ್‌ಡಿಒ, ಏರ್‌ಫೋರ್ಸ್‌, ಇಸ್ರೋ ಮತ್ತು ಐಐಎಸ್‌ಸಿಗಳಿಂದ ತಜ್ಞರು ಭಾಗವಹಿಸುವಿಕೆ, ಏರೋ ಮಾದರಿ, ಡ್ರೋಣ್‌ ರೇಸ್‌ ಈ ಬಾರಿಯ ಶೋದ ಪ್ರಮುಖ ಆಕರ್ಷಣೆಯಾಗಿದೆ.

Advertisement

ತಂತ್ರಜ್ಞಾನ ಬೆಳೆಯುತ್ತಿದೆ 
ಕಾರ್ಯಕ್ರಮವನ್ನು ಗ್ರೂಪ್‌ ಕ್ಯಾ| ಎಂ.ಜೆ. ಅಗಸ್ಟಿನ್‌ ಉದ್ಘಾಟಿಸಿ, ತಂತ್ರಜ್ಞಾನ ಕ್ಷೇತ್ರ ದಿನದಿಂದ ದಿನಕ್ಕೆ ಬೆಳೆಯುತ್ತಿದೆ. ಅದರಂತೆಯೇ ಮಾನವ ಕೂಡ ಇದಕ್ಕೆ ಒಗ್ಗಿಕೊಂಡಿದ್ದಾನೆ ಎಂದು ಹೇಳಿದರು. ಮುಖ್ಯ ಅತಿಥಿ ಕರ್ನಲ್‌ ಮಹೇಂದ್ರ ಬಾಬು ಮಾತನಾಡಿ, ಪ್ಲೈಯಿಂಗ್‌ ಇಂದಿನ ದಿನದಲ್ಲಿ ಪ್ಯಾಷನ್‌ ಆಗಿ ಪರಿವರ್ತನೆಯಾಗಿದೆ ಎಂದರು. ಕಾಲೇಜಿನ ಉಪ ಪ್ರಾಂಶುಪಾಲ ಎಸ್‌.ಎಸ್‌. ಬಾಲಕೃಷ್ಣ, ಟೀಂ ಚಾಲೆಂಜ್‌ನ ಪ್ರಾಬಿಡ್‌ ಪಣಿಕ್ಕನ್‌ ಉಪಸ್ಥಿತರಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next