ನವದೆಹಲಿ: ಮುಂದಿನ 8-10 ವರ್ಷಗಳಲ್ಲಿ (2028ರ ವೇಳೆಗೆ) ಭಾರತವು ದೇಶೀಯವಾಗಿ ಅಭಿವೃದ್ಧಿಪಡಿಸಿದ ಮಧ್ಯಮ ಕ್ರಮಾಂಕದ ಹೆಲಿಕಾಪ್ಟರ್‌ಗಳನ್ನು ಹೊಂದಿರಲಿದೆ.
ರಷ್ಯಾ ನಿರ್ಮಿತ ಎಂಐ-17 ಕಾಪ್ಟರ್‌ಗಳ ಸ್ಥಾನವನ್ನು ಸ್ವದೇಶಿ ನಿರ್ಮಿತ ಕಾಪ್ಟರ್‌ಗಳು ಆಕ್ರಮಿಸಿಕೊಳ್ಳಲಿವೆ ಎಂದು ಹಿಂದುಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್(ಎಚ್‌ಎಎಲ್) ಹೇಳಿದೆ.
ರಷ್ಯಾದ ಎಂಐ-17 ಕಾಪ್ಟರ್‌ಗಳು ಹಂತ ಹಂತವಾಗಿ ದೂರ ಸರಿಯಲಿದ್ದು, 2028ರ ವೇಳೆಗೆ ಅದರ ಬಳಕೆ ಸ್ಥಗಿತಗೊಳ್ಳಲಿದೆ. ಭವಿಷ್ಯದ 13 ಟನ್ ತೂಕದ ಭಾರತೀಯ ಬಹೂಪಯೋಗಿ ಹೆಲಿಕಾಪ್ಟರ್(ಐಎಂಆರ್‌ಎಚ್)ನ ಪ್ರಾಥಮಿಕ ವಿನ್ಯಾಸವೂ ಸಿದ್ಧಗೊಂಡಿದೆ ಎಂದು ಎಚ್‌ಎಎಲ್ ಏರೋಡೈನಾಮಿಕ್ಸ್‌ನ ಚೀಫ್ ಮ್ಯಾನೇಜರ್(ವಿನ್ಯಾಸ) ಅಬ್ದುಲ್ ರಶೀದ್ ತಜಾರ್ ಹೇಳಿದ್ದಾರೆ.
ಈ ಹೆಲಿಕಾಪ್ಟರ್‌ನ ನೌಕಾ ಆವೃತ್ತಿಯನ್ನೂ ಅಭಿವೃದ್ಧಿಪಡಿಸುವ ಚಿಂತನೆ ಇದೆ. ನಾವೀಗ ಅನುದಾನಕ್ಕಾಗಿ ಕಾಯುತ್ತಿದ್ದೇವೆ. ಭದ್ರತೆಗೆ ಸಂಬಂಧಿಸಿದ ಕೇಂದ್ರ ಸಂಪುಟ ಸಮಿತಿಯ ಒಪ್ಪಿಗೆ ಸಿಕ್ಕ ನಾಲ್ಕು ವರ್ಷಗಳಲ್ಲೇ ಮಾದರಿ ಕಾಪ್ಟರ್‌ನ ಮೊದಲ ಹಾರಾಟಕ್ಕೆ ಸಿದ್ಧತೆ ಆರಂಭಿಸುತ್ತೇವೆ. ಅದಾದ 4 ವರ್ಷಗಳೊಳಗಾಗಿ ಪರೀಕ್ಷಾ ಪ್ರಮಾಣಪತ್ರ ಪಡೆಯುವ ನಿರೀಕ್ಷೆಯಿದೆ ಎಂದೂ ತಜಾರ್ ತಿಳಿಸಿದ್ದಾರೆ.
ಮುಂದಿನ 8-10 ವರ್ಷಗಳಲ್ಲಿ ನಮ್ಮ ವಾಯುಪಡೆಯ ಸಾರಿಗೆ ಕಾಪ್ಟರ್ ಆಗಿ ಮಧ್ಯಮ ಕ್ರಮಾಂಕದ ಹೆಲಿಕಾಪ್ಟರ್‌ಗಳು ಕಾರ್ಯನಿರ್ವಹಿಸಲಿವೆ ಎಂದೂ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.