Advertisement

Adyar; ಬಸ್‌ ಢಿಕ್ಕಿ; ದ್ವಿಚಕ್ರ ವಾಹನ ಸವಾರ ಸಾವು

11:15 PM Feb 11, 2024 | Team Udayavani |

ಮಂಗಳೂರು: ಕೆಎಸ್ಸಾರ್ಟಿಸಿ ಬಸ್‌ ಢಿಕ್ಕಿಯಾಗಿ ದ್ವಿಚಕ್ರ ವಾಹನ ಸವಾರ ಮೃತಪಟ್ಟ ಘಟನೆ ರಾಷ್ಟ್ರೀಯ ಹೆದ್ದಾರಿಯ ಅಡ್ಯಾರ್‌ ಸಮೀಪದ ಅರ್ಕುಳ ದ್ವಾರದ ಬಳಿ ರವಿವಾರ ಬೆಳಗ್ಗೆ ಸಂಭವಿಸಿದೆ.

Advertisement

ಸ್ಥಳೀಯ ನಿವಾಸಿ ಚರಣ್‌ ರಾಜ್‌ (34) ಮೃತಪಟ್ಟವರು. ಇವರು ಒಳರಸ್ತೆಯಿಂದ ಹೆದ್ದಾರಿಗೆ ಪ್ರವೇಶಿಸುತ್ತಿದ್ದ ಸಂದರ್ಭ ಬಸ್‌ ಢಿಕ್ಕಿಯಾಗಿದೆ.

ಸ್ಥಳೀಯರ ಆಕ್ರೋಶ
ಈ ಸ್ಥಳದಲ್ಲಿ ಪದೇ ಪದೇ ಅಪಘಾತಗಳು ಸಂಭವಿಸುತ್ತಿವೆ. ಅವೈಜ್ಞಾನಿಕ ಕಾಮಗಾರಿ ಇದಕ್ಕೆ ಕಾರಣವಾಗಿದ್ದು ಹೆದ್ದಾರಿ ಪ್ರಾಧಿಕಾರ ಯಾವುದೇ ರೀತಿಯ ಸುರಕ್ಷತ ಕ್ರಮಗಳನ್ನು ಕೈಗೊಳ್ಳದೆ ನಿರ್ಲಕ್ಷ್ಯ ವಹಿಸುತ್ತಿದೆ ಎಂದು ದೂರಿದರು. ಕೆಲ ಹೊತ್ತು ವಾಹನ ಸಂಚಾರಕ್ಕೆ ಅಡ್ಡಿಯನ್ನುಂಟು ಮಾಡಿದರು.

ಬ್ಯಾರಿಕೇಡ್‌ ಇಲ್ಲದೆ ದುರಂತ
ಈ ಸ್ಥಳದಲ್ಲಿ ವಾಹನಗಳ ವೇಗ ತಡೆಯಲು ಬ್ಯಾರಿಕೇಡ್‌ ಹಾಕಲಾಗಿತ್ತು. ಆದರೆ ಶನಿವಾರ ರಾತ್ರಿ ಯಾವುದೋ ವಾಹನ ಢಿಕ್ಕಿಯಾಗಿ ಅದು ಬಿದ್ದಿತ್ತು. ಹಾಗಾಗಿ ಬಸ್‌ ವೇಗವಾಗಿ ಬಂದು ಢಿಕ್ಕಿ ಹೊಡೆದಿದೆ.

ರಸ್ತೆ ಗುಂಡಿಯಿಂದಾಗಿಯೂ ಅಪಘಾತಗಳು ಸಂಭವಿಸುತ್ತಿವೆ. ಇಲ್ಲಿ ಹಂಪ್ಸ್ ರಚಿಸಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ ಇಲ್ಲಿ ಹೆದ್ದಾರಿ ಕಾಮಗಾರಿ ನಡೆದ ಬಳಿಕ ಅಪಘಾತಗಳಲ್ಲಿ ಇದುವರೆಗೆ ಹತ್ತಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆಂದು ಸ್ಥಳಿಯರು ತಿಳಿಸಿದ್ದಾರೆ.

Advertisement

ಕಳೆದ ಡಿಸೆಂಬರ್‌ನಲ್ಲಿ ಇದೇ ಸ್ಥಳದಲ್ಲಿ ಬಸ್‌ ಢಿಕ್ಕಿಯಾಗಿ ಬೈಕ್‌ ಸವಾರ ರೋರ್ವರು ಮೃತಪಟ್ಟಿದ್ದರು.

ಈ ಅಪಘಾತ ಸ್ಥಳದ ಬಗ್ಗೆ ಉದಯವಾಣಿ ವರದಿ ಪ್ರಕಟಿಸಿತ್ತು.ಆದರೂ ಅಧಿಕಾರಿಗಳು ಎಚ್ಚೆತ್ತುಕೊಂಡಿಲ್ಲ.

ಒಬ್ಬನೇ ಪುತ್ರ
ಮೃತಪಟ್ಟ ಚರಣ್‌ ರಾಜ್‌ ಮೇರಮಜಲು ಅಬ್ಬೆಟ್ಟು ನಿವಾಸಿಯಾಗಿದ್ದು ಮೇಸಿŒ ಕೆಲಸ ಮಾಡಿಕೊಂಡಿದ್ದರು. ಬೆಳಗ್ಗೆ ಬೈಕ್‌ ನಲ್ಲಿ ಅಡ್ಯಾರ್‌ ಕಡೆಗೆ ಹೋಗುವಾಗ ದುರ್ಘ‌ಟನೆ ಸಂಭವಿ ಸಿದೆ. ಒಂದು ವರ್ಷದ ಹಿಂದೆ ಮದುವೆಯಾಗಿದ್ದು ಪುಟ್ಟ ಮಗುವಿದೆ. ಇವರು ಕುಟುಂಬದ ಆಧಾರ ವಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next