Advertisement

ಅಡ್ಯಡ್ಕ: ಅಕ್ರಮ ಮದ್ಯ ಮಾರಾಟ ಆರೋಪಿ ಬಂಧನ

10:56 PM Mar 03, 2023 | Team Udayavani |

ಅರಂತೋಡು: ಸುಳ್ಯ ತಾಲೂಕಿನ ಅರಂತೋಡು ಗ್ರಾ. ಪಂ. ವ್ಯಾಪ್ತಿಯ ತೊಡಿಕಾನ ಗ್ರಾಮದ ಅಡ್ಯಡ್ಕ ಎಂಬಲ್ಲಿ ಅಕ್ರಮ ಮದ್ಯ ಮಾರಾಟ ಅಡ್ಡೆಗೆ ಸುಳ್ಯ ಪೊಲೀಸರು ದಾಳಿ ನಡೆಸಿ ಅಕ್ರಮ ಮದ್ಯವನ್ನು ವಶಪಡಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ.

Advertisement

ಬಂಧಿತ ಆರೋಪಿಯನ್ನು ಅಡ್ಯಡ್ಕ ನಿವಾಸಿ ಅಣ್ಣ ದೊರೈ ಎಂದು ಗುರುತಿಸಲಾಗಿದೆ.

ದಿಲೀಪ್‌ ಜಿ.ಅರ್‌ ಪೊಲೀಸ್‌ ಸುಳ್ಯ ಠಾಣೆಯ ಉಪ ನಿರೀಕ್ಷಕ ದಿಲೀಪ್‌ ಜಿ. ಆರ್‌. ಹಾಗೂ ಸಿಬಂದಿ ಅಡ್ಯಡ್ಕದಲ್ಲಿ ಅಣ್ಣದೊರೈ ಅವರ ಅಂಗಡಿ ಬಳಿ ತಲಪಿದಾಗ ಅಂಗಡಿಯೆದುರು ನಿಂತಿದ್ದ ಇಬ್ಬರು ಗಿರಾಕಿಗಳು ಮದ್ಯದ ಪ್ಯಾಕೆಟ್‌ಗಳೊಂದಿಗೆ ಓಡಿದರು. ಬಳಿಕ ಅಂಗಡಿಯನ್ನು ತಪಾಸಣೆ ನಡೆಸಿದಾಗ ಮದ್ಯವಿರುವ ಕೆಲವು ಬಾಕ್ಸ್‌ಗಳು ಪತ್ತೆಯಾದವು. ಸುಮಾರು 8,498 ರೂ. ಮೌಲ್ಯದ ಅಗ್ರಮ ಮದ್ಯವನ್ನು ವಶಪಡಿಸಿಕೊಳ್ಳಲಾಯಿತಲ್ಲದೇ ಅಂಗಡಿ ಮಾಲಕನನ್ನು ಬಂಧಿಸಿ ಅಬಕಾರಿ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next