Advertisement
ಮಂಗಳವಾರವೇ ಸಿಎಂ ಕುಮಾರಸ್ವಾಮಿ ಅವರು ವಿಶ್ವಾಸಮತ ಪ್ರಕ್ರಿಯೆ ಪೂರ್ಣಗೊಳಿಸಿರುವ ಕಾರಣ ಅರ್ಜಿ ವಾಪಸ್ ಪಡೆಯುತ್ತಿರುವುದಾಗಿ ಪಕ್ಷೇತರ ಶಾಸಕರಾದ ಆರ್.ಶಂಕರ್ ಮತ್ತು ಎಚ್.ನಾಗೇಶ್ ಪರ ವಕೀಲರು ಕೋರಿಕೊಂಡರು.
ಕರ್ನಾಟಕದ ಸಮ್ಮಿಶ್ರ ಸರಕಾರದ ಪತನ ಕುರಿತು ಬುಧವಾರ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ವಾದ್ರಾ, ಎಲ್ಲವನ್ನೂ ಖರೀದಿಸಲಾಗುವುದಿಲ್ಲ, ಎಲ್ಲರನ್ನೂ ಮೂರ್ಖರನ್ನಾಗಿಸಲು ಆಗುವುದಿಲ್ಲ ಮತ್ತು ಪ್ರತಿಯೊಂದು ಸುಳ್ಳು ಕೂಡ ಬಹಿರಂಗವಾಗಲೇಬೇಕು ಎಂಬ ಸತ್ಯವು ಒಂದಲ್ಲ ಒಂದು ದಿನ ಬಿಜೆಪಿಗೆ ಅರಿವಾಗಲಿದೆ. ಅಲ್ಲಿಯವರೆಗೆ ಬಿಜೆಪಿಯ ನಿರಂತರ ಭ್ರಷ್ಟಾಚಾರ, ಜನರ ಹಿತಾಸಕ್ತಿ ಕಾಪಾಡಬೇಕಾದಂಥ ಸಂಸ್ಥೆಗಳ ವ್ಯವಸ್ಥಿತ ನಾಶ, ಹಲವು ದಶಕ ಗಳ ಪರಿಶ್ರಮ ಮತ್ತು ತ್ಯಾಗದಿಂದ ಕಟ್ಟಿರುವಂಥ ಪ್ರಜಾಪ್ರಭುತ್ವ ವ್ಯವಸ್ಥೆ ಯನ್ನೇ ದುರ್ಬಲಗೊಳಿಸುವಂಥ ಪ್ರಕ್ರಿಯೆಯನ್ನು ನಮ್ಮ ದೇಶದ ನಾಗರಿಕರು ಸಹಿಸಿಕೊಳ್ಳಲೇಬೇಕಾಗು ತ್ತದೆ ಎಂದು ಟ್ವೀಟ್ ಮಾಡಿದ್ದಾರೆ.
ಪಟ್ಟಭದ್ರರ ದುರಾಸೆಯೇ
ಗೆದ್ದಿತು: ರಾಹುಲ್
ಕರ್ನಾಟಕದ ಬೆಳವಣಿಗೆಗಳ ಕುರಿತು ಪ್ರತಿಕ್ರಿಯಿಸಿರುವ ಕಾಂಗ್ರೆಸ್‌ನಾಯಕ ರಾಹುಲ್ ಗಾಂಧಿ, ಅಧಿ ಕಾರಕ್ಕೆ ಬಂದ ಮೊದಲ ದಿನ ದಿಂದಲೇ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರಕಾರವನ್ನು ಪಟ್ಟಭದ್ರ ಹಿತಾಸಕ್ತಿಗಳು ಟಾರ್ಗೆಟ್ ಮಾಡ ಲಾರಂಭಿಸಿದ್ದವು. ಒಳಗಿರುವವರು ಮತ್ತು ಹೊರಗಿರುವ ಪಟ್ಟಭದ್ರರು ಅಧಿಕಾರದ ಕಡೆಗಿನ ತಮ್ಮ ನಡಿಗೆಗೆ ಸಮ್ಮಿಶ್ರ ಸರಕಾರವೇ ಅಡ್ಡಿ ಎಂದು ಭಾವಿಸಿದ್ದರು. ಅವರ ದುರಾಸೆ ಕೊನೆಗೂ ಗೆದ್ದಿತು. ಆದರೆ ಪ್ರಜಾತಂತ್ರ, ಪ್ರಾಮಾಣಿಕತೆ ಮತ್ತು ಕರ್ನಾಟಕದ ಜನರು ಸೋತರು ಎಂದು ಟ್ವೀಟ್ ಮಾಡಿದ್ದಾರೆ. ಇದು ಸರಕಾರ ಉರುಳಲು ಪಕ್ಷದ ನಾಯಕರೂ ಕಾರಣ ಎಂದು ಪರೋಕ್ಷವಾಗಿ ಉಲ್ಲೇಖೀಸಿದಂತಿದೆ .