Advertisement

ಎಸ್‌ ಅಂತಾರೆ ಅದ್ವಿತಿ ಶೆಟ್ಟಿ

09:54 AM Mar 28, 2020 | Suhan S |

ಕನ್ನಡದ ನಟಿ ರಾಧಿಕಾ ಪಂಡಿತ್‌ ಅವರನ್ನೇ ಹೋಲುತ್ತಾರೆ ಎಂಬ ಮಾತಿಗೆ ಕಾರಣರಾಗಿರುವ ಅದ್ವಿತಿ ಶೆಟ್ಟಿ ಈಗ ಹೊಸದೊಂದು ಸಿನಿಮಾಗೆ ನಾಯಕಿಯಾಗಿದ್ದಾರೆ. ಈ ಹಿಂದೆ “ಫ್ಯಾನ್‌’ ಸಿನಿಮಾ ಮೂಲಕ ಜೋರು ಸುದ್ದಿಯಾಗಿದ್ದ ಅದ್ವಿತಿಶೆಟ್ಟಿ ಈಗ “ಎಸ್‌’ ಎಂಬ ಸಿನಿಮಾಗೆ ನಾಯಕಿ. ಈ ಚಿತ್ರಕ್ಕೆ ಪ್ರಜ್ವಲ್‌ ಅಭಿಮನ್ಯು ಹೀರೋ ಆಗಿದ್ದಾರೆ. ಈ ಹಿಂದೆ ಪ್ರಜ್ವಲ್‌ ಅಭಿಮನ್ಯು “ಒಂದು ಶಿಕಾರಿಯ ಕಥೆ’ ಸಿನಿಮಾ ಮಾಡಿದ್ದರು. ಅವರಿಗೆ ಇದು ಎರಡನೇ ಚಿತ್ರ.

Advertisement

ಇನ್ನು, ಚಿತ್ರವನ್ನು ವಿ.ದೇವದತ್ತ ನಿರ್ದೇಶನ ಮಾಡುತ್ತಿದ್ದಾರೆ. “ಸೈಕೋ’ ಸಿನಿಮಾ ನಿರ್ದೇಶಿಸಿದ್ದ ದೇವದತ್ತ, ಈಗ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ಚಿತ್ರಕ್ಕೆ ಆ್ಯಕ್ಷನ್‌-ಕಟ್‌ ಹೇಳುತ್ತಿದ್ದಾರೆ. ಶ್ರೀ ಮಹಾಬಲ ಕ್ರಿಯೇಷನ್ಸ್‌ ಬ್ಯಾನರ್‌ ಮೂಲಕ ನಾಗರಾಜು ಕೆ.ವಿ. ಅವರು ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ.

ತಮ್ಮ “ಎಸ್‌’ ಸಿನಿಮಾ ಬಗ್ಗೆ ಹೇಳುವ ನಿರ್ದೇಶಕರು, “ಇದೊಂದು ಯೂಥ್‌ ಲವ್‌ ಸ್ಟೋರಿಯಾಗಿದ್ದು, ಈಗಿನ ಟ್ರೆಂಡ್‌ಗೆ ತಕ್ಕಂತಹ ಕಥೆ ಇಲ್ಲಿರಲಿದೆ’ ಎನ್ನುತ್ತಾರೆ. ಚಿತ್ರಕ್ಕೆ ಸಭಾ ಕುಮಾರ್‌ ಛಾಯಾಗ್ರಹಣವಿದೆ. ಪ್ರದೀಪ್‌ ವರ್ಮ ಸಂಗೀತ ನೀಡುತ್ತಿದ್ದಾರೆ. ಕೆಂಪರಾಜ್‌ ಅವರು ಸಂಕಲನ ಮಾಡುತ್ತಿದ್ದಾರೆ. ಏಪ್ರಿಲ್‌ನಲ್ಲಿ ಚಿತ್ರೀಕರಣಕ್ಕೆ ಚಾಲನೆ ಸಿಗಲಿದ್ದು, ಬೆಂಗಳೂರು, ಚಿಕ್ಕಬಳ್ಳಾಪುರ, ದೊಡ್ಡ ಬಳ್ಳಾಪುರ, ಮಡಿಕೇರಿ, ಚಿಕ್ಕಮಗಳೂರು ಸುತ್ತಮುತ್ತಲ ತಾಣಗಳಲ್ಲಿ ಚಿತ್ರೀಕರಣ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next