Advertisement

ಮಧುಮೇಹಿಗಳಿಗೆ ಬ್ಲ್ಯಾಕ್ ಫಂಗಸ್ ಅಪಾಯಕಾರಿ..!? ಮುನ್ನೆಚ್ಚರಿಕಾ ಕ್ರಮಗಳೇನು..?

07:39 PM May 25, 2021 | Team Udayavani |

ಕೋವಿಡ್ ಸೋಂಕಿನ ಜೊತೆಗೆ ಭಾರತದಲ್ಲಿ ಬ್ಲ್ಯಾಕ್ ಫಂಗಸ್ ಸಮಸ್ಯೆಯು ದಿನನಿತ್ಯ ಹೆಚ್ಚಳವಾಗುತ್ತಿದ್ದು, ಮತ್ತಷ್ಟು ಆತಂಕ ಸೃಷ್ಟಿಸಿದೆ. ಕರ್ನಾಟಕದಲ್ಲಿಯೂ ಬ್ಲ್ಯಾಕ್ ಫಂಗಸ್ ಸಮಸ್ಯೆಗೀಡಾದ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿದೆ. ಕೋವಿಡ್ ಸೋಂಕಿಗೆ  ಒಳಗಾಗಿ ಚಿಕಿತ್ಸೆ ಪಡೆಯುವ ಮಧುಮೇಹ ರೋಗಿಗಳಲ್ಲಿ ಮತ್ತು ಚಿಕಿತ್ಸೆಯ ಸಂದರ್ಭದಲ್ಲಿ ಅತಿಯಾಗಿ ಸ್ಟಿರಾಯ್ಡ್‌ ನೀಡಲಾದ ರೋಗಿಗಳಲ್ಲಿ ಈ ಬ್ಲ್ಯಾಕ್‌ ಫಂಗಸ್‌ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚು ಎಂದು ವೈದ್ಯಕೀಯ ವರದಿಗಳು ತಿಳಿಸಿವೆ.

Advertisement

ಇದನ್ನೂ ಓದಿ : ನಿಮ್ಮನ್ನು ಗೆಲ್ಲಿಸಿದ್ದು ವೇಸ್ಟ್ : ಸಂಸದೆ ಸುಮಲತಾ ಫೇಸ್‌ಬುಕ್ ಪೋಸ್ಟ್ ಗೆ ನೆಟ್ಟಿಗರು ಕಿಡಿ

ಕೋವಿಡ್ 19 ಸೋಂಕಿನ ಚಿಕಿತ್ಸೆಯ ಸಂದರ್ಭದಲ್ಲಿ ನೀಡುವ ಕೆಲವು ಔಷಧಗಳಿಂದಾಗಿ ರಕ್ತದಲ್ಲಿ ಸಕ್ಕರೆ ಪ್ರಮಾಣ  ಏರಿಕೆಯಾಗುತ್ತದೆ ಇದು ಮಧುಮೇಹ ರೋಗಿಗಳಿಗೆ ಅಪಾಯ ಉಂಟು ಮಾಡುವ ಸಾಧ್ಯತೆ ಇದೆ. ಸಾಮಾನ್ಯ ಆರೋಗ್ಯವಂತರೂ ಮಧುಮೇಹಕ್ಕೆ ಕಾಯಿಲೆಗೆ ಒಳಗಾಗುವ ಸಾಧ್ಯತೆಯೂ ಹೆಚ್ಚಿದೆ. ಇನ್ನು, ಕೆಲವೊಮ್ಮೆ ಆಮ್ಲಜನಕ ಪೂರಣದ ವೇಳೆಯೂ ಫಂಗಸ್‌ ದಾಳಿ ಡೆಸುವ ಸಾಧ್ಯತೆ ಇದೆ.

ಬ್ಲ್ಯಾಕ್ ಫಂಗಸ್ ಎಂದರೇನು..?

ಬ್ಲ್ಯಾಕ್ ಫಂಗಸ್  ಸೋಂಕು ಹಬ್ಬಿದರೆ, ಆಗ ಮುಖದಲ್ಲಿ ಬದಲಾವಣೆಗಳು ಕಂಡುಬರುತ್ತದೆ.. ಕೆಲವೊಂದು ಸಲ ಇದು ಒಳಗಿನ ಅಂಗಾಂಗಗಳ ಮೇಲೆ ಕೂಡ ಪರಿಣಾಮ ಬೀರಬಹುದು. ಕೆಲವೊಂದು ತೀವ್ರ ರೀತಿಯ ಲಕ್ಷಣಗಳು ಇದರಿಂದ ಕಂಡುಬರುತ್ತದೆ. ಅತಿಯಾದ ತಲೆನೋವು, ದೃಷ್ಟಿ ಮಂದವಾಗುವುದು, ದವಡೆ ಮತ್ತು ಮುಖದ ಭಾಗಗಳಲ್ಲಿ ಊತ, ಮಾನಸಿಕ ಗೊಂದಲ, ಮೂಗಿನ ಮೇಲೆ ಕಪ್ಪು ಬಣ್ಣ ಮೂಡುತ್ತದೆ. ಇದು ಬಾಯಿಗೆ ಹಬ್ಬಿದರೆ ಅದರಿಂದ ಹಲ್ಲುಗಳು ಮತ್ತು ದವಡೆ ಮೇಲೆ ಕೂಡ ಪರಿಣಾಮವಾಗಬಹುದು. ಈ ಖಾಯಿಲೆ ಕೋವಿಡ್ ನಂತಲ್ಲ. ಫಂಗಸ್ ನ ಬೀಜಕ ಗಾಳಿಯಲ್ಲಿ ಇರುತ್ತದೆ. ಉಸಿರಾಡುವಾಗ ಮೂಗಿಗೆ ಹೋಗಿ ದ್ವಿಗುಣ ಆಗಬಹುದು. ಸಾಮಾನ್ಯ ಮನುಷ್ಯರಲ್ಲಿ ಇದು ದ್ವಿಗುಣಗೊಳ್ಳುವ ಸಾಧ್ಯತೆ  ಕಡಿಮೆ ಇದ್ದು, ರೋಗ ನಿರೋಧಕ ಶಕ್ತಿ ಕಡಿಮೆ ಇದ್ದವರಲ್ಲಿ ಅದು ದ್ವಿಗುಣಗೊಂಡು ಸೈನಟೀಸ್ ಸಮಸ್ಯೆ ಹೆಚ್ಚಾಗುವ ಸಾಧ್ಯತೆ ಇದೆ.

Advertisement

ಇದನ್ನೂ ಓದಿ : ಯಾಸ್ ಚಂಡಮಾರುತದ ಭೀತಿ: ಪಶ್ಚಿಮಬಂಗಾಳದಿಂದ 9 ಲಕ್ಷ, ಒಡಿಶಾದಿಂದ 2ಲಕ್ಷ ಜನರ ಸ್ಥಳಾಂತರ

ಬ್ಲ್ಯಾಕ್ ಫಂಗಸ್ ನ ಲಕ್ಷಣಗಳೇನು…?

  • ಮೂಗಿನಿಂದ ಕಪ್ಪು ಬಣ್ಣದ ರಕ್ತಸಿಕ್ತ ದ್ರವ
  • ಸೈನಟಿಸ್-ಅತಿಯಾದ ಮೂಗು ಕಟ್ಟುವಿಕೆ ಮತ್ತು ನೋವು
  • ಕೆನ್ನೆಯ ಮೂಳೆಯ ಮೇಲೆ ನೋವು
  • ಒಂದು ಬದಿಯ ಮುಖದ ನೋವು, ಮರಗಟ್ಟುವಿಕೆ ಅಥವಾ ತಲೆನೋವು, ಹಲ್ಲುನೋವು
  • ಮಸುಕಾದ ದೃಷ್ಟಿ, ಎದೆ ನೋವು, ಉಸಿರಾಟದ ಸಮಸ್ಯೆ

ಯಾರಿಗೆ ಬ್ಲ್ಯಾಕ್ ಫಂಗಸ್ ಮಾರಕ..?

  • ಅನಿಯಂತ್ರಿತ ಮಧುಮೇಹ ಸಮಸ್ಯೆ ಇರುವವರಿಗೆ ಬ್ಲ್ಯಾಕ್ ಫಂಗಸ್ ಸಮಸ್ಯೆಯನ್ನು ದೊಡ್ಡ ಪ್ರಮಾಣದಲ್ಲಿ ಸಮಸ್ಯೆ ತಂದೊಡ್ಡಬಹುದು.
  • ದೀರ್ಘಕಾಲ ಐಸಿಯುನಲ್ಲಿ ಚಿಕಿತ್ಸೆ ಪಡೆದು ಮನೆಗೆ ಮರಳಿರುವವರು
  • ರೋಗ ನಿರೋಧಕ ಶಕ್ತಿ ಕಡಿಮೆಯಾಗಿ ಸ್ಟಿರಾಯ್ಡ್ ಗಳನ್ನು ಹೆಚ್ಚು ಬಳಕೆ ಮಾಡುತ್ತಿರುವವರು
  • ಅಂಗಾಂಗ ಕಸಿ,  ಗಂಭೀರ ಅನಾರೋಗ್ಯ ಸಮಸ್ಯೆ ಇರುವವರು ಎಚ್ಚರಿಕೆಯಿಂದಿರುವುದು ಉತ್ತಮ

ಬ್ಲ್ಯಾಕ್ ಫಂಗಸ್ ನಿಂದ ರಕ್ಷಣೆ ಹೇಗೆ..? ಚಿಕಿತ್ಸೆ..?

ಅಲ್ಪ ಪ್ರಮಾಣದಲ್ಲಿ ಸೋಂಕು ಲಕ್ಷಣಗಳಿರುವಾಗಲೇ ಸೂಕ್ತ ಚಿಕಿತ್ಸೆ ಪಡೆಯುವುದು ಒಳ್ಳೆಯದು.  ಮೂಗು ಕಟ್ಟುವ ಪ್ರತಿ ಸಮಸ್ಯೆಗಳು ಬ್ಲಾಕ್ ಫಂಗಸ್ ಸಮಸ್ಯೆ ಅಲ್ಲ ಹಾಗಾಗಿ ಆತುರತೆ ಬೇಕಾಗಿಲ್ಲ. ಬ್ಲ್ಯಾಕ್ ಫಂಗಸ್  ರೋಗಶಾಸ್ತ್ರವನ್ನು ಪತ್ತೆ ಹಚ್ಚಲು ಕೆಒಎಚ್ ಸ್ಟೇನಿಂಗ್, ಮೈಕ್ರೋಸ್ಕೋಪಿ, ಫಂಗಲ್ ಕಲ್ಚರ್, ಬಯೋಕ್ಸಿ, ಮಾಲ್ಡಿಟಾಫ್ (MALDITOF) ನಂತಹ ಪರೀಕ್ಷೆಗಳನ್ನು ಮಾಡಿಸಬಹುದಾಗಿದೆ.

ಇದನ್ನೂ ಓದಿ : ಕೇಂದ್ರ ನೌಕರರ ತುಟ್ಟಿಭತ್ಯೆ ಏರಿಕೆ..! ಸಂಪೂರ್ಣ ಮಾಹಿತಿಗೆ ಈ ಸುದ್ದಿ ಓದಿ

Advertisement

Udayavani is now on Telegram. Click here to join our channel and stay updated with the latest news.

Next