Advertisement

ದುಶ್ಚಟಗಳಿಂದ ದೂರವಿರಲು ಯುವಕರಿಗೆ ಸಲಹೆ

08:07 PM Mar 02, 2021 | Adarsha |

ಹೂವಿನಹಿಪ್ಪರಗಿ: ಇಂದಿನ ಯುವ ಪೀಳಿಗೆ ಹಿರಿಯರ ಮಾತಿಗೆ ಮನ್ನಣೆ ನೀಡುವ ಜೊತೆಗೆ ದುಶ್ಚಟಗಳಿಂದ ದೂರವಿಬೇಕು ಎಂದು ರಾಷ್ಟ್ರೀಯ ಕಿಶೋರ ಸಂಸ್ಥೆಯ ತಾಲೂಕಿನ ಆಪ್ತ ಸಮಾಲೋಚಕ ಪರಶುರಾಮ ಸೌದಿ ಸಲಹೆ ನೀಡಿದರು.

Advertisement

ಬಸವನಬಾಗೇವಾಡಿ ತಾಲೂಕಿನ ದಿಂಡವಾರ ಗ್ರಾಮದ ಆರೋಗ್ಯ ಉಪ ಕೇಂದ್ರದಲ್ಲಿ ಸೋಮವಾರ ರಾಷ್ಟ್ರೀಯ ಕಿಶೋರ ಸಂಸ್ಥೆ ಹಮ್ಮಿಕೊಂಡಿದ್ದ ಹದಿಹರೆಯದ ಯುವಕರ ಸಮಸ್ಯೆಗಳ ಕುರಿತ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಇಂದಿನ ಯುವಕರು ಮನೆಯಲ್ಲಿ ತಂದೆ ತಾಯಿಯ ಮಾತಿಗೆ ಬೆಲೆ ನೀಡಬೇಕು. ಸಂಸ್ಕಾರಯುತ ಜೀವನ ಸಾಗಿಸುವ ಮಾರ್ಗದಲ್ಲಿ ನಡೆದರೆ ಭವಿಷ್ಯದಲ್ಲಿ ಜಾವಾಬ್ದಾರಿಯುತ ವ್ಯಕ್ತಿಯಾಗಲು ಸಾಧ್ಯ ಎಂದು ಹೇಳಿದರು. ಲೈಂಗಿಕ ಶಿಕ್ಷಣದ ಆಪ್ತ ಸಮಾಲೋಚಕ ಆರ್‌.ಎಸ್‌. ಲಿಂಗದಳ್ಳಿ ಮಾತನಾಡಿ, ಇಂದಿನ ಹದಿ ಹರಿಯದವರು ತಮ್ಮ ಮನಸ್ಸಿಗೆ ಬಂದಂತೆ ವಿಚಾರಿಸದೆ ಹಿರಿಯರಿಗೆ ಗೌರವಿಸುವ ಮನೋಭಾವ ಬೆಳೆಸಿಕ್ಕೊಳ್ಳಬೇಕು. ಶಿಕ್ಷಣ ಜೊತೆಗೆ ಉತ್ತಮ ಆರೋಗ್ಯದ ಕಡೆಗೆ ಗಮನ ಹರಿಸಬೇಕು ಎಂದರು.

ಸಮುದಾಯ ಆರೋಗ್ಯ ಅ ಧಿಕಾರಿ ಡಾ| ಶರಣಬಸು ಗುದ್ದಿ ಮಾತನಾಡಿ, ಹದಿ ಹರಿಯದವರಲ್ಲಿ ದೈಹಿಕ, ಮಾನಸಿಕ, ಬದಲಾವಣೆಗಳು ಮತ್ತು ಲೈಂಗಿಕ ಗುಪ್ತ ಕಾಯಿಲೆ ಮತ್ತು ಸಾಂಕ್ರಾಮಿಕ ರೋಗಗಳು ಪೌಷ್ಟಿಕ ಆಹಾರ ಮತ್ತು ಚರ್ಮ ತೊಂದರೆಗಳ ಬಗ್ಗೆ ವಿವರಣೆ ನೀಡಿದರು.

ಕಾರ್ಯಕ್ರಮದಲ್ಲಿ ಮುಖಂಡರಾದ ಶಿವಲಿಂಗ ನೆಗಿನಾಳ, ಶಿಕ್ಷಕರಾದ ಎಂ.ಬಿ. ಜೋಗಿ, ಎಂ.ಎಂ. ಪಠಾಣ, ಎಸ್‌.ಎಸ್‌. ತೋಟದ, ಆಂಗನವಾಡಿ ಕಾರ್ಯಕರ್ತೆ ಎಸ್‌.ಪಿ. ಕೋಲಕಾರ, ಆಶಾ ಕಾರ್ಯಾಕರ್ತೆ ಎಸ್‌.ಎಸ್‌.ಪಾಟೀಲ ಇದ್ದರು.

Advertisement

 

Advertisement

Udayavani is now on Telegram. Click here to join our channel and stay updated with the latest news.

Next