ಕೆರೂರ: ಕಂದಾಯ ಇಲಾಖೆಯ ಸಹಯೋಗದಲ್ಲಿ ತಾಲೂಕು, ಹೋಬಳಿ ಮಟ್ಟದಲ್ಲಿ ಏರ್ಪಡಿಸುವ ಪಿಂಚಣಿ ಅದಾಲತ್ (ಸಾಮಾಜಿಕ ಭದ್ರತಾ ಯೋಜನೆಗಳ ಮಂಜೂರಾತಿ) ಸೌಲಭ್ಯಗಳ ಸದು ಪಯೋಗವನ್ನು ಅರ್ಹರು ಪಡೆಯುವಂತೆ ನೂತನ ಉಪತಹಶೀಲ್ದಾರ್ ರಾಜಶೇಖರ ಸಾತಿಹಾಳ ಹೇಳಿದರು.
ಸ್ಥಳೀಯ ನಾಡಕಚೇರಿ ಆವರಣದಲ್ಲಿ ಸೋಮವಾರ ಆಯೋಜಿಸಿದ್ದ ಕೆರೂರ ಹೋಬಳಿ ಮಟ್ಟದ ಪಿಂಚಣಿ ಅದಾಲತ್‌ನಲ್ಲಿ ಫಲಾನುಭವಿಗಳಿಗೆ ಮಂಜೂರಾತಿ ಪತ್ರ ವಿತರಿಸಿ ಅವರು ಮಾತನಾಡಿದರು.
ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಸರ್ಕಾರದಸವಲತ್ತುಗಳು ತಲುಪಬೇಕು. ಈ ನಿಟ್ಟಿನಲ್ಲಿ ಜವಾಬ್ದಾರಿಯುತ ಪ್ರತಿಯೊಬ್ಬರು ಕೈ ಜೋಡಿಸಿಯೋಜನೆಗಳ ಸಾಕಾರಕ್ಕೆ ಮುಂದಾಗಬೇಕು. ಕಂದಾಯ ಇಲಾಖೆಯಿಂದ ಅಂಗವಿಕಲ, ವಿಧವಾ, ಸಂಧ್ಯಾ ಸುರಕ್ಷಾ ವೇತನ ಮುಂತಾದ ಹಲವು ಪಿಂಚಣಿ ಯೋಜನೆ ಅರ್ಹರಿಗೆ ತಲುಪಿಸಬೇಕು ಎಂದು ಹೇಳಿದರು. ಹೋಬಳಿ ಮಟ್ಟದ ಪಿಂಚಣಿ ಅದಾಲತ್‌ನಲ್ಲಿ ಸ್ಥಳೀಯ ಹಾಗೂ ಸುತ್ತಲಿನ ಗ್ರಾಮೀಣ ಪ್ರದೇಶದ ಹಲವಾರು ಅರ್ಹ ಫಲಾನುಭವಿಗಳಿಗೆ ವಿವಿಧ ಯೋಜನೆಗಳ ಮಂಜೂರಾತಿ ಪತ್ರಗಳನ್ನು ಅಧಿಕಾರಿಗಳು ವಿತರಿಸಿದರು.
ಕಂದಾಯ ನಿರೀಕ್ಷಕ ಎಂ.ಬಿ. ಮಲಕನವರ, ಗ್ರಾಮ ಲೆಕ್ಕಾಧಿಕಾರಿ ಎ.ಬಿ. ಮುಜಾವರ, ಪವಿತ್ರಾ ಪೂಜಾರ, ಸಿದ್ದಾರ್ಥ ಹಟ್ಟಿ, ಮಂಜುನಾಥ ಗಿರಿಯಣ್ಣವರ,ವೆಂಕಟೇಶ, ವಿ.ವಿ. ಗ್ಯಾಟೀನ್, ಗ್ರಾಮ ಸಹಾಯಕಪ್ರದೀಪ ತುಳಸಿಗೇರಿ, ಅಬ್ದುಲ್ ಡಾಲಾಯತ ಇತರರು ಇದ್ದರು.