Advertisement
ನಗರದ ಕೊಡವ ಸಮಾಜದಲಿ ಇಗ್ಗುತಪ್ಪ ಕೊಡವ ಕೇರಿ ವತಿಯಿಂದ ನಡೆದ ಕೈಲ್ ಮುಹೂರ್ತ ಹಬ್ಬ ಹಾಗೂ ವಾರ್ಷಿಕ ಮಹಾಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
Related Articles
Advertisement
ಕೊಡವ ಕೇರಿ ಅಧ್ಯಕ್ಷೆ ಕಾವೇರಿ ಪೂಣಚ್ಚ ಮಾತನಾಡಿ, ಕೊಡವರ ಕೇರಿಯೆಂದರೆ ಒಂದು ಸಂಸಾರವಿದ್ದಂತೆ. ಕೇರಿ ವ್ಯಾಪ್ತಿಯಲ್ಲಿ ಏನೇ ಕಷ್ಟ ನಷ್ಟಗಳು ಸಂಭವಿಸಿದರೆ ಎಲ್ಲರೂ ಸ್ಪಂದಿಸುವಂತಾಗಬೇಕು ಎಂದರು.
ಸಮುದಾಯ ಬಾಂಧವರು ಸದಸ್ಯತ್ವವನ್ನು ಪಡೆದುಕೊಂಡು ಸಂಘದ ಕಾರ್ಯಕ್ರಮಗಳಿಗೆ ಸಹಕಾರ ನೀಡುತ್ತಿರುವುದು ಉತ್ತಮ ಬೆಳವಣಿಗೆ. ಮುಂದೆ ಸಂಘದ ವತಿಯಿಂದ ನಡೆಯುವ ಎಲ್ಲಾ ಕಾರ್ಯಕ್ರಮಗಳಲ್ಲಿ ಸದಸ್ಯರು ಸಕ್ರಿಯವಾಗಿ ಪಾಲ್ಗೊಂಡು ಸಂಘಟನೆಯನ್ನು ಬಲಗೊಳಿಸುವಂತೆ ಕರೆ ನೀಡಿದರು.
ಕೇರಿಯ ಖಜಾಂಚಿ ಪಿ.ಹರೀಶ್ ಮುತ್ತಪ್ಪ ಲೆಕ್ಕ ಪತ್ರ ಮಂಡಿಸಿದರು. ಕಾರ್ಯದರ್ಶಿ ಬೊಳ್ಳಚಂಡ ಲೀಲಾ ಸುಬ್ಬಯ್ಯ ಅವರು ವಾರ್ಷಿಕ ವರದಿ ಓದಿದರು.
10ನೇ ತರಗತಿ ಸಿಬಿಎಸ್‌ಸಿ ಪರೀಕ್ಷೆಯಲ್ಲಿ ಶೇ. 95 ರಷ್ಟು ಅಂಕಗಳಿಸಿದ ಬಿದೀಶ್ ಹಾಗೂ ಅಸಾಧಾರಣ ಪ್ರತಿಭೆಗಾಗಿ ವಿದ್ಯಾರ್ಥಿ ಕಾರ್ತಿಕ್ ಕುಟ್ಟಪ್ಪ ಅವರನ್ನು ಸಮ್ಮಾನಿಸಲಾಯಿತು .
ವಿವಿಧ ಸ್ಪರ್ಧೆಸಭಾ ಕಾರ್ಯಕ್ರಮಕ್ಕೂ ಮೊದಲು ಕೈಲ್ ಮುಹೂರ್ತ ಹಬ್ಬದ ಪ್ರಯುಕ್ತ ಬೆಳಗ್ಗೆಯಿಂದಲೇ ವಿವಿಧ ಆಟೋಟ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ತೆಂಗಿನಕಾಯಿಗೆ ಕಲ್ಲು ಹೊಡೆಯುವುದು, ಓಟ, ನಿಂಬೆ ಚಮಚದ ಓಟ, ಮಕ್ಕಳಿಗೆ ಕಾಳು ಹೆಕ್ಕುವ ಸ್ಪರ್ಧೆ, ಮ್ಯೂಸಿಕಲ್ ಚೇರ್ ಮತ್ತಿತರ ಸ್ಪರ್ಧೆಗಳಲ್ಲಿ ಸಮುದಾಯ ಬಾಂಧವರು ಉತ್ಸಾಹದಿಂದ ಪಾಲ್ಗೊಂಡರು. ವೇದಿಕೆಯಲ್ಲಿ ಇಗ್ಗುತಪ್ಪ ಕೊಡವ ಕೇರಿ ಪದಾಧಿಕಾರಿಗಳಾದ ನಂಜಪ್ಪ, ಕುಮಾರ್, ಬಿ. ಪ್ರಕಾಶ್ ಹಾಜರಿದ್ದರು. ಕೊಡವರ ಆಹಾರ ಪದ್ಧತಿಯನ್ನು ಪರಿಚಯಿಸುವ ನಿಟ್ಟಿನಲ್ಲಿ ಮೇಳದ ಸಂದರ್ಭ ವಿಶಿಷ್ಟ ಖಾದ್ಯಗಳ ಆಹಾರ ಪ್ರದರ್ಶನವನ್ನು ಆಯೋಜಿಸಲಾಗಿತ್ತು.