ಕೆಂಭಾವಿ: ಪುಸ್ತಕಗಳನ್ನು ಬರೆದು ಅವುಗಳನ್ನು ಕೇವಲ ಬಿಡುಗಡೆಗೆ ಸೀಮಿತಗೊಳಿಸದೆ, ಯುವಕರು ಅವುಗಳ ಅಧ್ಯಯನಕ್ಕೆ ಮುಂದಾಗುವಂತೆ ಹುರಿದುಂಬಿಸುವ ಕೆಲಸ ಸಾಹಿತಿಗಳು ಮಾಡಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ ನೂತನ ಜಿಲ್ಲಾಧ್ಯಕ್ಷ ಡಾ| ಸಿದ್ಧಪ್ಪ ಹೊಟ್ಟಿ ಹೇಳಿದರು.
ಪಟ್ಟಣದ ಹೇಮರೆಡ್ಡಿ ಕಲ್ಯಾಣ ಮಂಟಪದ ಕೆಂಭಾವಿ ಭೋಗಣ್ಣನ ವೇದಿಕೆಯಲ್ಲಿ ಬುಧವಾರ ಸಂವರ್ಧನ ಗ್ರಾಮೀಣಾಭಿವೃದ್ಧಿ ಸೇವಾ ಸಂಸ್ಥೆ ವತಿಯಿಂದ ನಡೆದ ಸಾಹಿತಿ ವೀರಣ್ಣ ಕಲಕೇರಿ ಅವರ ಮೂರು ಕೃತಿ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಶರಣ ಸಾಹಿತಿ ಅಶೋಕ ಹಂಚಲಿ ಕೃತಿಗಳ ಪರಿಚಯಿಸಿದರು. ಪ್ರಕಾಶ ಅಂಗಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ನಂತರ ವೀರಣ್ಣ ಕಲಕೇರಿ ಬರೆದ ವಚನ ವಾಙ್ಮಯ ಭಾಗ-2, ವಚನ ಸಂಗಮ ಹಾಗೂ ಜಾನಪದ ಜನ್ಯ ಎಂಬ ಮೂರು ಕೃತಿಗಳನ್ನು ಲೋಕಾರ್ಪಣೆ ಮಾಡಲಾಯಿತು.
ಹಿರೇಮಠದ ಶ್ರೀ ಚನ್ನಬಸವ ಶಿವಾಚಾರ್ಯರು ಹಾಗೂ ಮುದನೂರ ಕಂಠಿ ಮಠದ ಶ್ರೀ ಸಿದ್ಧಚನ್ನಮಲ್ಲಿಕಾರ್ಜುನ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು. ಬೆಂಗಳೂರಿನ ಡಿ.ಎನ್. ಮ್ಯಾಕ್ಸ್ ಪ್ರಾಪರ್ಟಿಸ್ ನಿರ್ದೇಶಕ ಡಾ| ಎಸ್ .ಪಿ. ದಯಾನಂದ ಉದ್ಘಾಟಿಸಿದರು. ಮುದಿಗೌಡ ಮಾಲಿಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಜಿಪಂ ಮಾಜಿ ಅಧ್ಯಕ್ಷ ಸಿದ್ಧನಗೌಡ ಪೊಲೀಸ್ ಪಾಟೀಲ, ಬಿ. ಎನ್. ಪಾಟೀಲ, ಅಶೋಕ ಹಂಚಲಿ, ನಬಿಲಾಲ ಮಕಾಂದಾರ, ಶಾಂತಪ್ಪ ಬೂದಿಹಾಳ, ಬಸವರಾಜ ಜಮದರಖಾನಿ, ಸಾಹೇಬಗೌಡ ಬಿರಾದಾರ, ಪ್ರದೀಪ ಕುಳಗೇರಿ, ವಾಮನರಾವ್ ದೇಶಪಾಂಡೆ, ಶಾಂತಗೌಡ ಬರಾದಾರ, ಶರಣಬಸ್ಸು ಡಿಗ್ಗಾವಿ, ಸುಮಿತ್ರಪ್ಪ ಅಂಗಡಿ ಇದ್ದರು. ವೀರಣ್ಣ ಕಲಕೇರಿ ಸ್ವಾಗತಿಸಿದರು. ಡಾ| ಯಂಕನಗೌಡ ಪಾಟೀಲ ನಿರೂಪಿಸಿದರು. ಶರಬಸವಯ್ಯ ಹಿರೇಮಠ ವಂದಿಸಿದರು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 20ಕ್ಕೂ ಅಧಿಕ ಜನರನ್ನು ಗೌರವಿಸಲಾಯಿತು.