Advertisement

ಉತ್ತಮ ಸಂಸ್ಕಾರ ಪಡೆಯಲು ಸಲಹೆ

05:15 PM Apr 23, 2019 | pallavi |

ಬಸವನಬಾಗೇವಾಡಿ: ಮನುಷ್ಯ ಧರ್ಮವಂತನಾಗಿ ಸನ್ಮಾರ್ಗದತ್ತ ನಡೆಯಬೇಕಾದರೆ ಉತ್ತಮ ಸಂಸ್ಕಾರ ಪಡೆಯಬೇಕು ಎಂದು ಅರಳೆಲೆ ಕಟ್ಟಿಮನಿ ಹಿರೇಮಠದ ನೀಲಕಂಠ ಶಿವಾಚಾರ್ಯರು ಹೇಳಿದರು.

Advertisement

ಪಟ್ಟಣದ ಮುದ್ದೇಬಿಹಾಳ ರಸ್ತೆಯ ಬಸ್‌ ಡಿಪೋ ಬಳಿ ಇರುವ ಜಗದ್ಗುರು ಪಂಚಾಚಾರ್ಯ ಜನ ಕಲ್ಯಾಣ ಭವನದಲ್ಲಿ ಶ್ರೀಶೈಲ ಮಲ್ಲಿಕಾರ್ಜುನ ದೇವಸ್ಥಾನ ಉದ್ಘಾಟನಾ ಸಮಾರಂಭ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಶಿವಪ್ರಕಾಶ ಶ್ರೀಗಳು ಶ್ರೀಮಠದ ಅಧಿಕಾರ ವಹಿಸಿಕೊಂಡು 25 ವರ್ಷಗಳಾದ ಪ್ರಯುಕ್ತ ಕಾರ್ತಿಕ ಮಾಸದಲ್ಲಿ ರಜತ ಮಹೋತ್ಸವ ಹಮ್ಮಿಕೊಳ್ಳಲಾಗುವುದು ಎಂದರು.

ಶಿವಪ್ರಕಾಶ ಶಿವಾಚಾರ್ಯರು ಮಾತನಾಡಿ, ದೇವರ ಪೂಜೆಯೊಂದಿಗೆ ಅಧ್ಯಾತ್ಮಿಕ ವಿಚಾರಗಳನ್ನು ತಿಳಿದುಕೊಳ್ಳವುದರಿಂದ ಬದುಕು ಸುಂದರಗೊಳ್ಳುತ್ತದೆ. ಇಂದು ಪ್ರತಿಯೊಬ್ಬರು ಜಂಜಾಟದ ಬದುಕನ್ನು ಸಾಗಿಸುತ್ತಿದ್ದಾರೆ ಎಂದು ಹೇಳಿದರು.

ಶಾಂತಿ-ನೆಮ್ಮದಿಗೆ ಅಗತ್ಯವಿರುವ ಮಾರ್ಗಗಳನ್ನು ಕಂಡುಕೊಳ್ಳಲು ಸಮಯ ಸಾಕಾಗುತ್ತಿಲ್ಲ ಎಂಬ ನೇಪ ಹೇಳುವರ ಸಂಖ್ಯೆ ಹೆಚ್ಚಾಗುತ್ತಿದೆ. ಹಣ ಗಳಿಕೆಯಿಂದ ಶಾಂತಿ ನೆಮ್ಮದಿ ಸಿಗದು ಅಧ್ಯಾತ್ಮಿಕ ಜಿಂತನಗೋಷ್ಠಿಗಳಲ್ಲಿ ಪಾಲ್ಗೋಳ್ಳುವುದರ ಮೂಲಕ ನೆಮ್ಮದಿ ಕಂಡುಕೊಳ್ಳಬೇಕು ಎಂದು ಹೇಳಿದರು.

ಶಿಕ್ಷಕಿ ವಿದ್ಯಾ ಕೊಟೆನ್ನವರ ಮಾತನಾಡಿ ಶಿವಪ್ರಕಾಶ ಶ್ರೀಗಳು ತಮ್ಮ ಪ್ರವಚನಗಳ ಮೂಲಕ ಸಮಾಜದಲ್ಲಿ ಜಾಗೃತಿ ಮೂಢಿಸುತ್ತಿದ್ದಾರೆ. ಧಾರ್ಮಿಕ, ಸಮಾಜಿಕ ಕಾರ್ಯಕ್ರಮ ಹಮ್ಮಿಕೊಂಡು ಭಕ್ತರಿಗೆ ಮಾರ್ಗದರ್ಶನ ಮಾಡುತ್ತಿರುವುದು ಶ್ಮಾಘನೀಯ ಎಂದು ಹೇಳಿದರು.

Advertisement

ವಿರಕ್ತಮಠದ ಸಿದ್ದಲಿಂಗ ಶ್ರೀಗಳು, ಮನಗೂಳಿಯ ಸಂಗನಬಸವ ಶ್ರೀಗಳು, ಬೃಂಗೇಶ್ವರಲಿಂಗ ಶಿವಾವಾರ್ಯ ಶ್ರೀಗಳು, ಬಸವನಹಟ್ಟಿ ವೀರಗಂಗಾಧರ ಶಿವಾಚಾರ್ಯ ಶ್ರೀಗಳು, ಬ್ಲಾಕ್‌ ಕಾಂಗ್ರೇಸ್‌ ಅಧ್ಯಕ್ಷ ಈರಣ್ಣ ಪಟ್ಟಣಶೆಟ್ಟಿ ಮಾತನಾಡಿದರು.

ಈ ಸಂದರ್ಭದಲ್ಲಿ ರುದ್ರಯ್ಯ ಸಾರಂಗಮಠ, ಬಸಣ್ಣ ದೇಸಾಯಿ, ಸಂಗಪ್ಪ ಅಡಗಿಮನಿ, ಸಿದ್ದಣ್ಣ ಮೋದಿ, ಬಸಗೊಂಡಪ್ಪಗೌಡ ಪಾಟೀಲ, ರಾಚಪ್ಪ ತೆರದಕಂಟಿ, ಸತ್ಯಪ್ಪ ಖ್ಯಾಡದ, ರೂಪಾ ಸೇರದಾಳೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ದೇವಸ್ಥಾನದ ಉದ್ಘಾಟನೆ ಅಂಗವಾಗಿ ಬೆಳಿಗ್ಗೆ ದೇವರಿಗೆ ರುದ್ರಾಭೀಷೇಕ, ಸಹಸ್ರ ಬೀಲ್ವಾರ್ಚನೆ, ಮಹಾಮಂಗಳಾರತಿ, ಕಾರ್ಯಕ್ರಮ ಜರುಗಿತು.

Advertisement

Udayavani is now on Telegram. Click here to join our channel and stay updated with the latest news.

Next