Advertisement

ಅಣಬೆ ಬೆಳೆಯಲು ರೈತರಿಗೆ ಸಲಹೆ

05:39 PM Sep 19, 2020 | Suhan S |

ಪಾತಪಾಳ್ಯ: ಅಣಬೆಯಲ್ಲಿ ಪ್ರೋಟಿನ್‌ ಮತ್ತು ಕ್ಯಾಲ್ಸಿಯಂ ಭಾರೀ ಪ್ರಮಾಣದಲ್ಲಿರುತ್ತದೆ. ಮೊಣಕಾಲು ನೋವು ಇರುವವರು, ಶುಗರ್‌, ಬಿಪಿ ಇರುವವರ ಆರೋಗ್ಯಕ್ಕೂ ಇದು ರಾಮಬಾಣದಂತೆ ಕೆಲಸ ಮಾಡುತ್ತದೆ ಎಂದು ಪುಲಗಲ್‌ ಗ್ರಾಪಂ ಆಡಳಿತಾಧಿಕಾರಿ ಎ.ಮಹೆಬೂಬ್‌ಬಾಷಾ (ಬಾಬು) ತಿಳಿಸಿದರು.

Advertisement

ಪುಲಗಲ್‌ ಗ್ರಾಪಂ ವತಿಯಿಂದ ಉದ್ಯೋಗ ಖಾತ್ರಿ ಯೋಜನೆಯಡಿ 2020ರ ವಿಶೇಷ ಅಭಿಯಾನದ ಅಡಿಯಲ್ಲಿಬಚ cಲುಗುಂಡಿ, ಪೌಷ್ಟಿಕ ತೋಟ ಹಾಗೂ ಅಣಬೆ ಬೇಸಾಯದ ಬಗ್ಗೆ ಹಮ್ಮಿಕೊಂಡಿದ್ದ ಜನ ಜಾಗೃತಿ ಜಾಥಾದಲ್ಲಿ ಅವರು ಮಾತನಾಡಿದರು. ಅಣಬೆಯಲ್ಲಿ ಪ್ರೊಟಿನ್‌, ಜೀವಸತ್ವಗಳು, ಖನಿಜಾಂಶಗಳು ಹೇರಳವಾಗಿದ್ದು, ಶರ್ಕರ ಪಿಷ್ಠ ಕಡಿಮೆ ಇರುವುದರಿಂದ ಸಕ್ಕರೆ ರೋಗಿಗಳಿಗೆ ಒಳ್ಳೆ ಆಹಾರವಾಗಿದೆ. ಅತ್ಯಧಿಕ ಪ್ರೊಟಿನ್‌ ಇರುವ ಆಹಾರವರ್ಧಕ ಅಣಬೆಗೆ ಬೇಡಿಕೆಯಿದ್ದು, ರೈತರು ಇದನ್ನು ಬೆಳೆಯಬೇಕೆಂದು ತಿಳಿಸಿದರು.

ಪಿಡಿಒ ಶ್ರೀನಿವಾಸ್‌ ಮಾತನಾಡಿ, ಉದ್ಯೋಗ ಖಾತ್ರಿ ಯೋಜನೆಯಲ್ಲಿ ಅಣಬೆ ಬೇಸಾಯದ ಸಮುದಾಯ ಶೆಡ್‌ ನಿರ್ಮಾಣಕ್ಕೆ 95 ಸಾವಿರ ರೂ. ಅನುದಾನವಿದ್ದು, ರೈತರು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು. ಎನ್‌ಆರ್‌ಎಲ್‌ ಎಂ ಸ್ವ ಸಹಾಯ ಗುಂಪುಗಳಿಗೆ ಆದ್ಯತೆ ನೀಡಲಾಗುವುದು ಎಂದರು. ಕರವಸೂಲಿಗಾರ ಎನ್‌.ಕೃಷ್ಣಪ್ಪ, ಗುಮಾಸ್ತ ಚಂದ್ರಾ ರೆಡ್ಡಿ, ಡಿಇಒ ಲವಾಣಿಸುಬಹಾನ್‌ಖಾನ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next